ಮ್ಯಾನೇಜರ್‌ಗಳಿಗೆ ಕ್ರೀಡಾಧಾರಿತ ಶಿಕ್ಷಣ: ಐಐಎಂ-ಬಿ

7

ಮ್ಯಾನೇಜರ್‌ಗಳಿಗೆ ಕ್ರೀಡಾಧಾರಿತ ಶಿಕ್ಷಣ: ಐಐಎಂ-ಬಿ

Published:
Updated:

ನವದೆಹಲಿ (ಪಿಟಿಐ): ಬೆಂಗಳೂರಿನ ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆ (ಐಐಎಂ-ಬಿ) ಹಿರಿಯ ಮ್ಯಾನೇಜರ್‌ಗಳಿಗೆ ಕ್ರೀಡಾಧಾರಿತ ಶಿಕ್ಷಣ ನೀಡಲು ಮುಂದಾಗಿದೆ.`ವ್ಯವಹಾರದ ವೇಳೆ ಉದ್ಭವಿಸುವ ಸವಾಲುಗಳನ್ನು ಎದುರಿಸಲು ಇದು ನೆರವಾಗಬಹುದು ಎಂಬುದು ಐಐಎಂ-ಬಿನ ಉದ್ದೇಶ. ಖ್ಯಾತ ಕ್ರೀಡಾಪಟುಗಳನ್ನು ಆಹ್ವಾನಿಸಿ ಶಿಕ್ಷಣ ನೀಡಲಾಗುವುದು. ಇದಕ್ಕೆ ಕ್ರೀಡಾ ಕಂಪೆನಿ ಟೆನ್ವಿಕ್ ಸಹಾಯ ನೀಡುತ್ತಿದೆ~ ಎಂದು ಐಐಎಂ-ಬಿ ಅಧಿಕಾರಿ ಶ್ಯಾಮಲ್ ರಾಯ್ ತಿಳಿಸಿದ್ದಾರೆ.`ಈ ಕಾರ್ಯಕ್ರಮದಲ್ಲಿ ಮ್ಯಾನೇಜರ್‌ಗಳೊಂದಿಗೆ ಕ್ರೀಡಾಪಟುಗಳು ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ. ಇದರಿಂದ ನಾಯಕತ್ವ ಗುಣ ಹೆಚ್ಚಿಸಿಕೊಳ್ಳಲು. ಕೌಶಲ ಪ್ರದರ್ಶಿಸಲು ಹಾಗೂ ಒತ್ತಡದಿಂದ ಹೊರಬರಲು ಸಹಾಯವಾಗಬಹುದು~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry