ಗುರುವಾರ , ಮೇ 13, 2021
16 °C

ಮ್ಯಾನ್ಮಾರ್‌ನಲ್ಲಿ ಹೊಸ ಗಾಳಿ: ಸೂಕಿ ಹರ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾಂಗೂನ್ (ಎಪಿ):  `ಈ ಯಶಸ್ಸು ಜನತೆಗೆ ಸಲ್ಲಬೇಕು. ಇದು ನಮ್ಮ ಗೆಲುವಿಗಿಂತ ಹೆಚ್ಚಾಗಿ ಜನರಿಗೆ ಸಿಕ್ಕಿದ ಗೆಲುವು. ಈ ದೇಶದ ರಾಜಕೀಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ನಿರ್ಧರಿಸಿದ ಜನರ ಜಯ. ಇದರಿಂದ ಇಲ್ಲಿ ಹೊಸ ಯುಗ ಆರಂಭವಾಗಿದೆ~ ಎಂದು ಮ್ಯಾನ್ಮಾರ್ ವಿರೋಧ ಪಕ್ಷದ ನಾಯಕಿ ಆಂಗ್ ಸಾನ್ ಸೂಕಿ ಹೇಳಿದ್ದಾರೆ.ಸಂಸತ್ತಿನ ಕೆಳಮನೆಗೆ ನಡೆದ ಉಪಚುನಾವಣೆಯಲ್ಲಿ ಜಯ ಗಳಿಸಿದ ನಂತರ ಸೋಮವಾರ ತಮ್ಮ ಪಕ್ಷದ ಕೇಂದ್ರ ಕಚೇರಿಯ ಹೊರಗೆ ಸೇರಿದ್ದ ಸಾವಿರಾರು ಬೆಂಬಲಿಗರನ್ನುದ್ದೇಶಿಸಿ ಸೂಕಿ ಮಾತನಾಡಿದರು.ಮ್ಯಾನ್ಮಾರ್‌ನ ಸೇನಾ ಆಡಳಿತ, ರಾಜಕೀಯ ಕೈದಿಯೆಂದು ಪರಿಗಣಿಸಿ ಎರಡು ದಶಕಗಳಿಗೂ ಹೆಚ್ಚು ಕಾಲ ಗೃಹಬಂಧನದಲ್ಲಿ ಇರಿಸಿದ್ದ ಸೂಕಿ ಈಗ ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕಿಯಾಗಿ ಅಧಿಕೃತವಾಗಿ ಸ್ಥಾನ ವಹಿಸಿಕೊಳ್ಳಲಿದ್ದಾರೆ.ಸೂಕಿ ಅವರ ಈ ಗೆಲುವು, 2015ರಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರನ್ನು ಸಹ ಸಂಭವನೀಯ ಅಭ್ಯರ್ಥಿಯಾಗಿಸಿದೆ. ಉಪಚುನಾವಣೆ ನಡೆದ 44 ಕ್ಷೇತ್ರಗಳಲ್ಲಿ ಸೂಕಿ ಅವರ ಪಕ್ಷ 40 ಸ್ಥಾನಗಳಲ್ಲಿ ಜಯಗಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.