ಬುಧವಾರ, ನವೆಂಬರ್ 20, 2019
22 °C

ಮ್ಯಾನ್ಮಾರ್: ಮುದ್ರಣ ಆರಂಭಿಸಿದ ಪತ್ರಿಕೆಗಳು

Published:
Updated:

ಯಾಂಗೂನ್ (ಐಎಎನ್‌ಎಸ್): ದಕ್ಷಿಣ ಏಷ್ಯಾದ ಪುಟ್ಟ ರಾಷ್ಟ್ರ ಮ್ಯಾನ್ಮಾರ್‌ನಲ್ಲಿ ಸರಿಸುಮಾರು ಐದು ದಶಕಗಳ ಬಳಿಕ ನಾಲ್ಕು ಖಾಸಗಿ ಒಡೆತನದ ದಿನಪತ್ರಿಕೆಗಳು ಸೋಮವಾರ ತಾತ್ಕಾಲಿಕವಾಗಿ ಮುದ್ರಣ ಕಾರ್ಯ ಆರಂಭಿಸಿದವು.ಇನ್ನೂ ಎರಡು ಡಜನ್ ಪತ್ರಿಕೆಗಳು ಶೀಘ್ರದಲ್ಲೇ ಮುದ್ರಣ ಆರಂಭಿಸುವ ಸಾಧ್ಯತೆ ಇದೆ. ಇಲ್ಲಿ ಅನ್ಯ ದೇಶದ 20 ಸುದ್ದಿ ಸಂಸ್ಥೆಗಳ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಇದಲ್ಲದೇ 200 ಖಾಸಗಿ ವಾರಪತ್ರಿಕೆಗಳು, ಇಂಗ್ಲಿಷ್ ಮತ್ತು ಚೀನಿ ಭಾಷೆಯ ಸುಮಾರು 200 ನಿಯತಕಾಲಿಕೆಗಳಿವೆ. ಸುಮಾರು 7,000 ಖಾಸಗಿ ಮುದ್ರಕರಿದ್ದಾರೆ.2012ರ ಆಗಸ್ಟ್‌ನಲ್ಲಿ ದೇಶೀಯ ಮಾಧ್ಯಮ ಸಂಸ್ಥೆಗಳ ಮುದ್ರಣದ ಮೇಲಿನ ನಿಯಂತ್ರಣವನ್ನು ತೆಗೆದು ಹಾಕಿದ್ದ ಸರ್ಕಾರ, ಖಾಸಗಿ ಮಾಧ್ಯಮ ಸಂಸ್ಥೆಗಳು ಮುಕ್ತವಾಗಿ ದಿನಪತ್ರಿಕೆಗಳನ್ನು ಮುದ್ರಿಸಬಹುದು ಎಂದು ಡಿಸೆಂಬರ್‌ನಲ್ಲಿ ಘೋಷಿಸಿದ್ದ ಹಿನ್ನೆಲೆಯಲ್ಲಿ ಕೆಲ ಪತ್ರಿಕೆಗಳು ಮತ್ತೆ ಮುದ್ರಣ ಕಾರ್ಯ ಆರಂಭಿಸಿವೆ.ಮಾಧ್ಯಮ ಕ್ಷೇತ್ರದ ಸಮಸ್ಯೆಗಳನ್ನು ಆಲಿಸಲು 2012ರ ಸೆಪ್ಟೆಂಬರ್‌ನಲ್ಲಿ          29 ಸದಸ್ಯರನ್ನು ಒಳಗೊಂಡ ಪತ್ರಿಕಾ ಮಂಡಳಿಯನ್ನು ಕೂಡ ಸರ್ಕಾರ ರಚಿಸಿತ್ತು.

ಪ್ರತಿಕ್ರಿಯಿಸಿ (+)