ಮ್ಯಾನ್ಮಾರ್: ರಸ್ತೆಯಲ್ಲಿ ವಿಮಾನ ತುರ್ತು ಭೂಸ್ಪರ್ಶ,ಇಬ್ಬರ ಸಾವು

7

ಮ್ಯಾನ್ಮಾರ್: ರಸ್ತೆಯಲ್ಲಿ ವಿಮಾನ ತುರ್ತು ಭೂಸ್ಪರ್ಶ,ಇಬ್ಬರ ಸಾವು

Published:
Updated:
ಮ್ಯಾನ್ಮಾರ್: ರಸ್ತೆಯಲ್ಲಿ ವಿಮಾನ ತುರ್ತು ಭೂಸ್ಪರ್ಶ,ಇಬ್ಬರ ಸಾವು

ಯಾಂಗೂನ್ (ಪಿಟಿಐ):  ಮ್ಯಾನ್ಮಾರ್‌ನ ಖಾಸಗಿ ವಿಮಾನಯಾನ ಸಂಸ್ಥೆ ಏರ್ ಬಗಾನ್‌ಗೆ ಸೇರಿದ ವಿಮಾನವೊಂದು ಮಂಗಳವಾರ ರಸ್ತೆಯಲ್ಲಿ ತುರ್ತು ಭೂಸ್ಪರ್ಶ ಮಾಡಿದ ಪರಿಣಾಮ ಇಬ್ಬರು ಮೃತಪಟ್ಟು 11 ಜನರು ಗಾಯಗೊಂಡಿದ್ದಾರೆ.ಹನ್ನೊಂದು ವರ್ಷದ ಮಗು ಹಾಗೂ ರಸ್ತೆಯಲ್ಲಿ ಸೈಕಲ್ ಸವಾರಿ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.ವಿಮಾನದಲ್ಲಿ 65 ಪ್ರಯಾಣಿಕರು ಹಾಗೂ ಆರು ಮಂದಿ ಸಿಬ್ಬಂದಿ ಇದ್ದರು.  ವಿಮಾನವು ಯಾಂಗೂನ್‌ನಿಂದ ಶಾನ್ ರಾಜ್ಯದ ಹೇಹೊ ವಿಮಾನ ನಿಲ್ದಾಣಕ್ಕೆ ತೆರಳುತ್ತಿತ್ತು ಎಂದು ಏರ್ ಬಗಾನ್ ಹೇಳಿಕೆಯಲ್ಲಿ ತಿಳಿಸಿದೆ.ಹೇಹೊ ವಿಮಾನ ನಿಲ್ದಾಣದಿಂದ ಮೂರು ಕಿ.ಮೀ ದೂರದ ರಸ್ತೆಯಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ಆದರೆ ತುರ್ತು ಭೂಸ್ಪರ್ಶಕ್ಕೆ ಏನು ಕಾರಣ ಎಂಬುದನ್ನು ಏರ್ ಬಗಾನ್ ವಿವರಿಸಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry