`ಮ್ಯಾನ್‌ಹೋಲ್‌ನಲ್ಲಿ ಸಾವು: ವರದಿ ಕೊಡಿ'

7

`ಮ್ಯಾನ್‌ಹೋಲ್‌ನಲ್ಲಿ ಸಾವು: ವರದಿ ಕೊಡಿ'

Published:
Updated:

ಬೆಂಗಳೂರು: ಶಿವಮೊಗ್ಗದ ರಾಯಲ್ ಆರ್ಕಿಡ್ ಹೋಟೆಲ್‌ನ ಮ್ಯಾನ್‌ಹೋಲ್‌ನಲ್ಲಿ ಸಿಕ್ಕಿಕೊಂಡು ಕಾರ್ಮಿಕರಿಬ್ಬರು ಮೃತಪಟ್ಟ ಘಟನೆ ಬಗ್ಗೆ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಹೈಕೋರ್ಟ್ ಸೋಮವಾರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.ಮ್ಯಾನ್‌ಹೋಲ್ ಶುಚಿಗೊಳಿಸುವ ಕಾರ್ಮಿಕರು, ಅದರಲ್ಲಿ ಸಿಲುಕಿ ಸಾಯುತ್ತಿರುವ ಘಟನೆ ಕುರಿತು ಆರ್.ಎನ್. ನರಸಿಂಹಮೂರ್ತಿ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರಿದ್ದ ನ್ಯಾಯಪೀಠ, `ಮೃತಪಟ್ಟ ಕಾರ್ಮಿಕರಿಗೆ ನೀಡಿರುವ ಪರಿಹಾರದ ಕುರಿತೂ ವರದಿ ನೀಡಿ' ಎಂದು ಸೂಚಿಸಿದೆ.`ಮ್ಯಾನ್‌ಹೋಲ್ ಶುಚಿಗೊಳಿಸಲು ಮನುಷ್ಯರನ್ನು ಬಳಕೆ ಮಾಡಬಾರದು ಎಂದು ನ್ಯಾಯಾಲಯ ಈ ಹಿಂದೆಯೇ ಆದೇಶ ನೀಡಿದೆ. ಅದರ ಅನುಷ್ಠಾನಕ್ಕೆ ಕೈಗೊಂಡ ಕ್ರಮಗಳು ಮತ್ತು ಎಷ್ಟು ಜನಕ್ಕೆ ಪರಿಹಾರ ನೀಡಲಾಗಿದೆ ಎಂಬ ಬಗ್ಗೆ ವರದಿ ನೀಡಬೇಕು' ಎಂದು ಅದು ಸರ್ಕಾರಕ್ಕೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry