ಶುಕ್ರವಾರ, ಮೇ 14, 2021
29 °C

ಮ್ಯುಚುವಲ್ ಫಂಡ್‌ಗಳಲ್ಲಿ ಹೂಡಿಕೆ: ಡಿಸಿಸಿ ಬ್ಯಾಂಕ್‌ಗೆ ಲಾಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತದ ವತಿ ಯಿಂದ ಮ್ಯುಚುವಲ್ ಫಂಡ್‌ಗಳಲ್ಲಿ ಹಣ ಹೂಡಿರುವುದರಿಂದ ಲಾಭ ವಾಗಿದೆ, ಹೊರತು ಯಾವುದೇ ನಷ್ಟ ಉಂಟಾಗಿಲ್ಲ. ಬ್ಯಾಂಕ್‌ಗೆ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನಿನ ಕ್ರಮಕೈಗೊಳ್ಳ ಲಾಗುವುದು ಎಂದು ಬ್ಯಾಂಕ್ ಅಧ್ಯಕ್ಷ ಎಂ.ಎ. ರಮೇಶ್ ಹೇಳಿದರು.  ನಗರದಲ್ಲಿ ಸೋಮವಾರ ನಡೆದ ಬ್ಯಾಂಕಿನ 86ನೇ ವಾರ್ಷಿಕ ಮಹಾ ಸಭೆಯಲ್ಲಿ ಸದಸ್ಯರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮ್ಯುಚುವಲ್ ಫಂಡ್‌ಗಳಲ್ಲಿ ಹೂಡಿರುವುದರಿಂದ ಬ್ಯಾಂಕ್‌ಗೆ ಯಾವುದೇ ರೀತಿಯ ನಷ್ಟ ಉಂಟಾಗಿಲ್ಲ. ಸದಸ್ಯರು ಭಯ ಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು. ಹೂಡಿಕೆಯ ಬಗ್ಗೆ ವಿವರಗಳನ್ನು, ದಾಖಲೆಗಳನ್ನು ಮಾಧ್ಯಮಗಳ ಮೂಲಕ ಜನರಿಗೆ ತಿಳಿಸಿಕೊಡಲಾಗು ವುದು. ಹೂಡಿಕೆಯಲ್ಲಿ ಅವ್ಯವಹಾರ ಹಾಗೂ ಬ್ಯಾಂಕ್‌ಗೆ ನಷ್ಟ ಉಂಟಾಗಿದೆ ಎಂದು ಅಪಪ್ರಚಾರ ಮಾಡುವ ಮೂಲಕ ಬ್ಯಾಂಕಿನ ವಿಶ್ವಾಸಾರ್ಹತೆಗೆ ಧಕ್ಕೆ ತರುವ ವ್ಯಕ್ತಿಗಳ ವಿರುದ್ಧ ಕಾನೂನಿನ ಕ್ರಮಕೈಗೊಳ್ಳಲಾಗುವುದು ಎಂದರು.

ಇದಕ್ಕೆ ಸದಸ್ಯರೆಲ್ಲರೂ ಒಕ್ಕೊರಲಿ ನಿಂದ ಬೆಂಬಲ ಸೂಚಿಸಿದರು.ಹೂಡಿಕೆಗೆ ಲಾಭ:  ಹೂಡಿಕೆಯ ವಿವರಣೆಯನ್ನು ನೀಡುವಂತೆ ಸದಸ್ಯ ಬಿ.ಡಿ. ಮಂಜುನಾಥ್ ಬಯಸಿದಾಗ ಉತ್ತರಿಸಿದ ಅಧ್ಯಕ್ಷರು ಬ್ಯಾಂಕಿನ ಹೂಡಿಕೆ ಸಮಿತಿಯ ಸಲಹೆಯ ಮೇರೆಗೆ ದೇಶದ ಪ್ರಮುಖ ಹಾಗೂ ವಿಶ್ವಾಸಾರ್ಹ ಫಂಡ್ ಕಂಪೆನಿಗಳಲ್ಲಿ ಹೂಡಿಕೆ ಮಾಡಲಾಗಿದೆ ಎಂದು ಹೇಳಿದರು.ಎಸ್‌ಬಿಐ, ಯುಟಿಐ ಇನ್‌ಫ್ರಾಸ್ಟ್ರಕ್ಚರ್ ಫಂಡ್, ಟಾಟಾ ಇನ್‌ಫ್ರಾಸ್ಟ್ರಕ್ಚರ್ ಫಂಡ್, ಎಲ್‌ಐಸಿ ಮ್ಯುಚುವಲ್ ಫಂಡ್, ಸೇರಿದಂತೆ ವಿವಿಧ ಫಂಡ್‌ಗಳಲ್ಲಿ ಹಣ ಹೂಡಲಾಗಿತ್ತು.  ಆರ್‌ಬಿಐ ನಿರ್ದೇಶನದಂತೆ 2010ರ ಏಪ್ರಿಲ್‌ನಿಂದ ಹಣವನ್ನು ವಾಪಸ್ ಪಡೆಯಲು ಆರಂಭಿಸಲಾಯಿತು. 2011ರ ಮಾರ್ಚ್ 31ರ ವೇಳೆಗೆ ರೂ 64 ಲಕ್ಷ ಲಾಭ ಬಂದಿದೆ ಎಂದರು.ಆರ್‌ಬಿಐ ನೀಡಿದ್ದ ಗಡುವು ಒಳಗೆ ಹಣವನ್ನು ಹಿಂಪಡೆದಿದ್ದರೆ ಸುಮಾರು ರೂ 1 ಕೋಟಿಯಷ್ಟು ನಷ್ಟ ಉಂಟಾ ಗುತ್ತಿತ್ತು. ಆದ್ದರಿಂದ ನಾವು ನಿಧಾನ ವಾಗಿ ಷೇರು ಪೇಟೆಯ ಏರಿಳಿತವನ್ನು ಗಮನಿಸಿ, ಲಾಭ ಬಂದ ನಂತರವೇ ಹಿಂದಕ್ಕೆ ಪಡೆಯಲಾಯಿತು ಎಂದು ಅವರು ವಿವರಣೆ ನೀಡಿದರು.  ನಿಗದಿತ ಗಡುವು ಒಳಗೆ ಹಣ ಹಿಂಪಡೆಯದಿದ್ದರಿಂದ ಆರ್‌ಬಿಐ ರೂ 5 ಲಕ್ಷ ದಂಡ ವಿಧಿಸಿತ್ತು. ಅದನ್ನು ಸಂಪೂರ್ಣವಾಗಿ ಪಾವತಿಸಲಾಗಿದೆ ಎಂದು ಅವರು ಹೇಳಿದರು.ಲಾಭ: 2010-11ನೇ ಸಾಲಿನಲ್ಲಿ ಬ್ಯಾಂಕ್ ರೂ 4852.65 ಕೋಟಿ ವಹಿವಾಟು ನಡೆಸಿದ್ದು, ರೂ 230.34 ಲಕ್ಷ ನಿವ್ವಳ ಲಾಭ ಗಳಿಸಿದೆ. ಬ್ಯಾಂಕಿನ ಆಡಿಟ್ ~ಎ~ ತರಗತಿಯಲ್ಲಿದೆ ಎಂದು ಅವರು ತಿಳಿಸಿದರು.ಬ್ಯಾಂಕಿನ ಮುಖ್ಯ ಕಾರ್ಯನಿರ್ವಹ ಣಾಧಿಕಾರಿ ಪಿ.ಎಲ್. ಜೋತಿಂದ್ರ ಮಾತನಾಡಿ, ಬ್ಯಾಂಕ್ ಉತ್ತಮ ಪ್ರಗತಿ ಸಾಧಿಸಿದ್ದು, ರಾಜ್ಯದಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿರುವ ಸಹಕಾರ ಸಂಘಗಳ ಪೈಕಿ ಮೂರನೇ ಸ್ಥಾನದಲ್ಲಿದೆ ಎಂದು ತಿಳಿಸಿದರು. ಬ್ಯಾಂಕಿನ ಒಟ್ಟು 13 ಶಾಖೆಗಳಲ್ಲಿ ಕೋರ್ ಬ್ಯಾಂಕಿಂಗ್ ಸೌಲಭ್ಯ ಅಳವಡಿಸಲು ಸಹಾಯ ಮಾಡಲು ನಬಾರ್ಡ್ ಬ್ಯಾಂಕ್ ಮುಂದೆ ಬಂದಿದೆ. ಪ್ರತಿ ಶಾಖೆಗೆ ರೂ 10,000 ದಂತೆ ಒಟ್ಟು ರೂ 1.30 ಲಕ್ಷ ಹಣ ಕಾಯ್ದಿರಿಸಲಾಗಿದೆ ಎಂದು ಅವರು ನುಡಿದರು.   ಸಭೆಯಲ್ಲಿ ಉಪಾಧ್ಯಕ್ಷ ಎಸ್.ಬಿ. ಭರತ್ ಕುಮಾರ್, ನಿರ್ದೇಶಕರುಗಳಾದ ಮುದ್ದಂಡ ಬಿ.ದೇವಯ್ಯ, ತಳೂರು ಎ.ಕಿಶೋರ್ ಕುಮಾರ್, ಬಲ್ಲಾರಂಡ ಮಣಿ ಉತ್ತಪ್ಪ ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.