ಮ್ಯೂಚುವಲ್ ಫಂಡ್ ಹೂಡಿಕೆ ಹೆಚ್ಚಳ

ಗುರುವಾರ , ಜೂಲೈ 18, 2019
26 °C

ಮ್ಯೂಚುವಲ್ ಫಂಡ್ ಹೂಡಿಕೆ ಹೆಚ್ಚಳ

Published:
Updated:

ನವದೆಹಲಿ (ಪಿಟಿಐ): ಹೂಡಿಕೆದಾರರು ಮೇ ತಿಂಗಳಲ್ಲಿ ವಿವಿಧ ಮ್ಯೂಚುವಲ್ ಫಂಡ್ (ಎಂಎಫ್) ಯೋಜನೆಗಳಲ್ಲಿ ಒಟ್ಟಾರೆ ರೂ 37 ಸಾವಿರ ಕೋಟಿ ಹೂಡಿಕೆ ಮಾಡಿದ್ದಾರೆ.

ಈ ಮೂಲಕ ಪ್ರಸಕ್ತ ಹಣಕಾಸು ವರ್ಷದ ಮೊದಲ ಎರಡು ತಿಂಗಳಲ್ಲಿ ಮ್ಯೂಚುವಲ್ ಫಂಡ್ ಯೋಜನೆಗಳ ಒಟ್ಟಾರೆ ಹೂಡಿಕೆ ರೂ1.44 ಲಕ್ಷ ಕೋಟಿ ದಾಟಿದೆ ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ `ಸೆಬಿ' ಹೇಳಿದೆ.ಏಪ್ರಿಲ್‌ನಲ್ಲಿ `ಎಂಎಫ್'ಗೆ ರೂ1.06 ಲಕ್ಷ ಕೋಟಿ ಹೂಡಿಕೆ ಹರಿದು ಬಂದಿತ್ತು. 2011ರ ನಂತರ ದಾಖಲಾದ ತಿಂಗಳೊಂದರ ಗರಿಷ್ಠ  ಹೂಡಿಕೆ ಕೂಡ ಇದಾಗಿದೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಮೇ ತಿಂಗಳಲ್ಲಿ ಒಟ್ಟಾರೆ 256 ಅಂಶಗಳಷ್ಟು ಏರಿಕೆ ಕಂಡಿದೆ. ಮ್ಯೂಚುವಲ್ ಫಂಡ್ ಹೂಡಿಕೆ ಹೆಚ್ಚಲು ಇದೂ ಪ್ರಮುಖ ಕಾರಣ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry