ಮ್ಯೂಸಿಕ್ ಅಕಾಡೆಮಿ:ಅರ್ಜಿ ಆಹ್ವಾನ

ಸೋಮವಾರ, ಜೂಲೈ 22, 2019
27 °C

ಮ್ಯೂಸಿಕ್ ಅಕಾಡೆಮಿ:ಅರ್ಜಿ ಆಹ್ವಾನ

Published:
Updated:

ಬೆಂಗಳೂರು: ಚೆನ್ನೈನ `ಮ್ಯೂಸಿಕ್ ಅಕಾಡೆಮಿ~ಯ ಕರ್ನಾಟಕ ಸಂಗೀತ ಉನ್ನತ ಶಾಲೆಯಲ್ಲಿ ವ್ಯಾಸಂಗ ಮಾಡಲಿಚ್ಛಿಸುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.ಮೂರು ವರ್ಷಗಳ ಅವಧಿಯ ಕರ್ನಾಟಕ ಸಂಗೀತ (ಗಾಯನ) ಡಿಪ್ಲೋಮ ಕೋರ್ಸ್ ಅನ್ನು ವರ್ಷದ ಹಿಂದೆ ಪ್ರಾರಂಭಿಸಲಾಯಿತು. ಸಂಗೀತವನ್ನೇ ವೃತ್ತಿಯನ್ನಾಗಿ ಸ್ವೀಕರಿಸಲು ಬಯಸಿರುವ ಎಂಟು ಮಂದಿ ಪ್ರತಿಭಾನ್ವಿತ ಎಂಜಿನಿಯರಿಂಗ್ ಮತ್ತು ವಿಜ್ಞಾನ ಪದವೀಧರರು ಕೋರ್ಸ್‌ನ ಮೊದಲ ವರ್ಷವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.ಜುಲೈ ಎರಡನೇ ವಾರದಿಂದ ನವೆಂಬರ್‌ವರೆಗೆ, ಜನವರಿ ಎರಡನೇ ವಾರದಿಂದ ಜೂನ್‌ವರೆಗೆ ಎರಡು ಸೆಮಿಸ್ಟರ್‌ಗಳಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 10ರಿಂದ ಮಧ್ಯಾಹ್ನ 2.30ರವರೆಗೆ ತರಗತಿಗಳು ನಡೆಯಲಿವೆ. ಈ ಸಲ ಜುಲೈ 20ರಿಂದ ಮೊದಲ ವರ್ಷದ ತರಗತಿಗಳು ಆರಂಭವಾಗಲಿವೆ.`ಮನೋಧರ್ಮ ಸಂಗೀತ~ದ ಜ್ಞಾನದೊಂದಿಗೆ ಕೃತಿಗಳು ಮತ್ತು `ವರ್ಣಂ~ಗಳನ್ನು ಹಾಡಬಲ್ಲ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕನಿಷ್ಠ ವಿದ್ಯಾರ್ಹತೆ; ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆ ಆಗಿರಬೇಕು. ವಯೋಮಿತಿ 18ರಿಂದ 35ರೊಳಗಿರಬೇಕು. ಹತ್ತು ಮಂದಿ ಸಂಗೀತ ಶಿಕ್ಷಣಾರ್ಥಿಗಳಿಗೆ ಮಾತ್ರ ಪ್ರವೇಶಾವಕಾಶವಿದೆ. ಸಂಗೀತ ತರಬೇತಿ ಸೇರಿದಂತೆ ತಮ್ಮ ಬಗೆಗಿನ ಪೂರ್ಣ ವಿವರದ ಜತೆ ಅರ್ಜಿ ಸಲ್ಲಿಸಬೇಕು. ಸಂದರ್ಶನದ ಮೂಲಕ ಪ್ರವೇಶ ನೀಡಲಾಗುವುದು.ಶಾಲೆಯ ಬೋಧಕ ವರ್ಗದಲ್ಲಿ ಸಂಗೀತ ಕಲಾನಿಧಿ ಆರ್.ವೇದವಲ್ಲಿ, ಕಲಾ ಆಚಾರ್ಯರಾದ ಸಿ.ರಂಗನಾಥನ್, ಪಿ.ಎಸ್.ನಾರಾಯಣಸ್ವಾಮಿ, ಸುಗುಣ ವರದಾಚಾರಿ, ವಿದುಷಿ ಎಸ್.ಸೌಮ್ಯ, ವಿದ್ವಾನ್ ಎಂ.ಚಂದ್ರಮೌಳಿ (ವಯಲಿನ್) ಮೊದಲಾದ ಸಂಗೀತ ವಿದ್ವಾಂಸರು ಇದ್ದಾರೆ. ಇವರಲ್ಲದೇ ಶಾಲೆಯ ಸಂದರ್ಶಕ ಪ್ರಾಧ್ಯಾಪಕರಾಗಿ ಹೆಸರಾಂತ ಸಂಗೀತ ವಿದ್ವಾಂಸರು ಇದ್ದಾರೆ.ಕೋರ್ಸ್‌ನ ಮೊದಲ ವರ್ಷದ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಜೂನ್ 30 ಕಡೆಯ ದಿನವಾಗಿದೆ. ಆಸಕ್ತರು ಹೆಚ್ಚಿನ ವಿವರಗಳಿಗೆ `ದ ಮ್ಯೂಸಿಕ್ ಅಕಾಡೆಮಿ~, ಮದ್ರಾಸ್, ಹೊಸ ಸಂಖ್ಯೆ- 168 (ಹಳೇ ಸಂಖ್ಯೆ- 306), ಟಿಟಿಕೆ ರಸ್ತೆ, ಚೆನ್ನೈ- 600014, (ದೂರವಾಣಿ: 044- 28112231/ 28115162) ಅಥವಾ ಇಮೇಲ್: music @musicacademymadras.com ಈ ವಿಳಾಸವನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry