ಗುರುವಾರ , ಮೇ 6, 2021
24 °C

ಮ್ಯೂಸಿಕ್ ಕ್ವೆಸ್ಟ್ ರಾಷ್ಟ್ರೀಯ ಪಿಯಾನೊ ಸ್ವರ್ಧೆಗೆ ಅರ್ಜಿ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ದಿ ಅಕಾಡೆಮಿ ಆಫ್ ಮ್ಯೂಸಿಕ್~ ಸಂಸ್ಥೆಯು ಮೂರನೇ ವರ್ಷದ `ಮ್ಯೂಸಿಕ್  ಕ್ವೆಸ್ಟ್~ ಪಿಯಾನೊ ಸ್ಪರ್ಧೆಯನ್ನು ನವೆಂಬರ್ 23ರಿಂದ 27ರ ವರೆಗೆ ಪುಣೆಯಲ್ಲಿ ಏರ್ಪಡಿಸಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.ಪ್ರಾಥಮಿಕ ಹಂತ (ಗ್ರೇಡ್ 1), ಕಿರಿಯರ ಹಂತ (ಗ್ರೇಡ್ 2ರಿಂದ 5ನೇ ಗ್ರೇಡ್), ಮಾಧ್ಯಮಿಕ  ಹಂತ (6ರಿಂದ 8ನೇ ಗ್ರೇಡ್), ಅಡ್ವಾನ್ಸ್ಡ್ (ಡಿಪ್ಲೊಮಾ) ಹೀಗೆ ಒಟ್ಟು ನಾಲ್ಕು ವಿಭಾಗಗಳಲ್ಲಿ ಈ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತಿದೆ. ಸೆಪ್ಟೆಂಬರ್ 30 ಅರ್ಜಿ ಸಲ್ಲಿಕೆಗೆ ಕೊನೆಯ ದಿನ.ಇದೇ ಸಂದರ್ಭದಲ್ಲಿ ಕಾರ್ಯಾಗಾರವನ್ನೂ ಏರ್ಪಡಿಸಲಾಗುತ್ತಿದ್ದು, ಅಂತರರಾಷ್ಟ್ರೀಯ ಖ್ಯಾತಿಯ ಪಿಯಾನೊ ವಾದಕರಾದ ಅಮೆರಿಕದ ಸ್ಕಾಟ್ ಮ್ಯಾಕ್‌ಬ್ರೈಡ್ ಸ್ಮಿತ್, ಐರ್ಲೆಂಡ್‌ನ ಪೀಟರ್ ಮ್ಯಾಕ್, ಅಮೆರಿಕದ ಗೇಲ್ ಲೇವ್, ಕೆನಡಾದ ಮರ‌್ರೆ ನಿಕೋಲ್, ನ್ಯೂಜಿಲೆಂಡ್‌ನ ಕ್ರಿಸ್ಟೊಫರ್ ನೋರ್ಟನ್ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ಸ್ಪರ್ಧೆಯ ಅಂತಿಮ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದವರಿಗೆ `ಕವೈ ಕೆಎಕ್ಸ್21~ ಪಿಯಾನೊವನ್ನು ನೀಡಲಾಗುವುದು. ಜೊತೆಗೆ `ಅಂತರರಾಷ್ಟ್ರೀಯ ಯುವ ಸಂಗೀತಗಾರರ ಸಂಸ್ಥೆ~ ನೀಡುವ ಶಿಷ್ಯವೇತನವೂ ಇವರಿಗೆ ದೊರೆಯಲಿದೆ. ಪ್ರತಿ ವಿಭಾಗದಲ್ಲಿ ಗೆಲುವು ಪಡೆದವರಿಗೂ ನಗದು, ಸಂಗೀತ ಪುಸ್ತಕಗಳು ದೊರೆಯಲಿವೆ.ಸ್ಪರ್ಧೆಯ ವಿವರಗಳು, ಅರ್ಜಿ ಫಾರಂಗಳು ಮತ್ತಿತರ ವಿವರಗಳನ್ನು www.academyofmusicpune.com/aom/musi­quest2011.html 

 ವೆಬ್‌ಸೈಟ್‌ನಿಂದ ಪಡೆಯಬಹುದು.ಹೆಚ್ಚಿನ ವಿವರಗಳಿಗೆ musiquest@academyofmusicpune.com or dir@academyofmusicpune.com ಈ ಮೇಲ್‌ಗೆ ಸಂದೇಶ ಕಳುಹಿಸಬಹುದು.

ದೂರವಾಣಿ ಸಂಖ್ಯೆ 0212- 26151106/ 03, ಮೊಬೈಲ್ ಸಂಖ್ಯೆ 098230 21160ಗಳನ್ನೂ ಸಂಪರ್ಕಿಸಬಹುದು.ಸ್ಪರ್ಧೆಯ ಪಠ್ಯಕ್ರಮ ಮತ್ತಿತರ ವಿವರಗಳಿಗಾಗಿ The Academy of Music, White House 372A/2-3-4. North Main Road, Koregaon Park (Lane B), Pune 411 001 ಈ ವಿಳಾಸಕ್ಕೆ ಪತ್ರ ಬರೆಯಬೇಕು ಎಂದು ಅಕಾಡೆಮಿ ಸಂಚಾಲಕಿ ಮತ್ತು ಸಂಸ್ಥಾಪಕ ನಿರ್ದೇಶಕಿ ರೋಕ್ಸಾನಾ ಅಂಕ್ಲೆಸಾರಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.