ಭಾನುವಾರ, ಮೇ 9, 2021
19 °C
ಹಡಗಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳ ವಿನ್ಯಾಸ

ಯಂತ್ರ ಒಂದು, ಉಪಯೋಗ ಮೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಂತ್ರ ಒಂದು, ಉಪಯೋಗ ಮೂರು

ಹೂವಿನಹಡಗಲಿ: ಗ್ರಾಮೀಣ ಭಾಗದ ರೈತರು ಅನುಭವಿಸುತ್ತಿರುವ ಬವಣೆ ನೀಗಿಸುವ ಉದ್ದೇಶದಿಂದ `ಬಹು ಉಪಯೋಗಿ ಯಂತ್ರ'ವನ್ನು ಇಲ್ಲಿನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳು ವಿನ್ಯಾಸ ಗೊಳಿಸಿದ್ದಾರೆ.ಸಾಮಾನ್ಯ ಎರಡು ಸೈಕಲ್ ಗಾಲಿ, ವಿವಿಧ ಯಂತ್ರಗಳ ಕನಿಷ್ಠ ಭಾಗಗಳನ್ನು ಬಳಸಿಕೊಂಡು ನಿರ್ಮಿಸಲಾದ ಯಂತ್ರದಿಂದ ಏಕ ಕಾಲದಲ್ಲಿ ರೈತರು ಮೂರು ಕೆಲಸಗಳನ್ನು ಮಾಡಬಹುದಾಗಿದೆ. ಬೆಳೆಗಳಿಗೆ ಕ್ರಿಮಿನಾಶಕ ಔಷಧಿ ಸಿಂಪರಣೆ, ವಿದ್ಯುತ್ ಉತ್ಪಾದನೆ ಮತ್ತು ಮಣ್ಣಿನಲ್ಲಿ ತೇವಾಂಶ ಕಂಡು ಹಿಡಿಯುವ ಕೆಲಸವನ್ನು ಈ ಯಂತ್ರ ಮುಖೇನ ಏಕ ಕಾಲದಲ್ಲಿ ಮಾಡಬಹುದು.ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಪ್ರೊ. ಎಚ್.ಬಿ. ವಿನಯ್ ಮಾರ್ಗದರ್ಶನದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಸಂಜೀವ್, ಅಶೋಕರೆಡ್ಡಿ, ಓಮಣ್ಣ, ಜೆ.ಅಶೋಕ ಅವರನ್ನೊಳಗೊಂಡ ತಂಡ ನಡೆಸಿದ ಹೊಸ ವಿನ್ಯಾಸ ಮಾಡಿರುವುದು ಮೆಚ್ಚುಗೆ ಗಳಿಸಿದೆ.ರೈತರು ತಮ್ಮ ಬೆಳೆಗಳಿಗೆ ಕ್ರಿಮಿನಾಶಕ ಸಿಂಪರಣೆಗೆ ಈ ಯಂತ್ರ ಬಳಸಬಹುದಾಗಿದ್ದು, ಹಳ್ಳಿಗಳಲ್ಲಿ ಕೃಷಿ ಚಟುವಟಿಕೆಗೆ ಬೇಕಾಗುವ ವಿದ್ಯುತ್‌ನ್ನು ಯಂತ್ರ ಉತ್ಪಾದಿಸುತ್ತದೆ.  ಮಣ್ಣಿನ ತೇವಾಂಶ ಅರಿಯಲು ಸಹ ಸಹಕಾರಿಯಾಗಿರುವುದರಿಂದ ಸಕಾಲದಲ್ಲಿ ಬೆಳೆಗಳಿಗೆ ನೀರುಣಿಸಿ,                 ಲಘು ಪೋಷಕಾಂಶಗಳನ್ನು ನೀಡಿ ಉತ್ತಮ ಫಸಲು ತೆಗೆಯಬಹುದು.ಒಂದೇ ಯಂತ್ರದಿಂದ ಹಲವು ಉಪಯೋಗ ಇರುವ ಈ ಯಂತ್ರ ಬಳಸುವುದರಿಂದ ಗ್ರಾಮೀಣ ಭಾಗದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎನ್ನುತ್ತಾರೆ ಮಾರ್ಗದರ್ಶಕ ಪ್ರೊ. ಎಚ್.ಬಿ.ವಿನಯ್. ಹೂವಿನಹಡಗಲಿ ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಮುಖ್ಯ ಕಸಬು ವ್ಯವಸಾಯ ಆಗಿರುವುದರಿಂದ ಮುಖ್ಯವಾಗಿ ರೈತರ ಸಮಸ್ಯೆ ನೀಗಿಸುವ ದೃಷ್ಟಿಯಿಂದ ನಮ್ಮ ವಿದ್ಯಾರ್ಥಿಗಳು ಹೊಸ ವಿನ್ಯಾಸ ಗೊಳಿಸಿದ್ದಾರೆ ಎಂದು ತಿಳಿಸಿದರು.ಬರುವ ದಿನಗಳಲ್ಲಿ ಹಳ್ಳಿಗಳ ಹೊಲ ಗದ್ದೆಗಳಲ್ಲಿ ಈ ಯಂತ್ರವನ್ನು ಬಳಸಿ ಟರ್ಬೈನ್ ಬಳಸಿ ಜನರೇಟರ್ ಮೂಲಕವಾಗಿ ವಿದ್ಯುತ್ ಸಂಗ್ರಹಿಸುವ ಪ್ರಾತ್ಯಕ್ಷತೆ ನಡೆಸುವ ಯೋಜನೆ ಇದೆ. ಇದೇ ಮಾದರಿಯನ್ನು ಸರ್ಕಾರ ಅಭಿವೃದ್ಧಿಪಡಿಸಿ ದೊಡ್ಡ ಮಟ್ಟದಲ್ಲಿ ಯೋಜನೆ ರೂಪಿಸಿದಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಯುವ ಜೊತೆಗೆ ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕ ಸ್ವಾವಲಂಬಿಯಾಗಬಹುದು ಎಂದು ಅವರು ಅಭಿಪ್ರಾಯಪಡುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.