ಶುಕ್ರವಾರ, ಮೇ 7, 2021
26 °C

ಯಕೃತ್ತನ್ನು ಪ್ರೀತಿಸಿ

ಡಾ. ರಂಗೇಶ್ ಪರಮೇಶ್ Updated:

ಅಕ್ಷರ ಗಾತ್ರ : | |

ಪಿತ್ತಜನಕಾಂಗ ಅಥವಾ ಯಕೃತ್ತಿನ (ಲಿವರ್) ಆರೋಗ್ಯ ವಿಶ್ವದಾದ್ಯಂತ ಕಳವಳಕಾರಿ ಸಂಗತಿಯಾಗಿದೆ. ವಿಶ್ವ ಆರೋಗ್ಯ ಸಂಘಟನೆಯ (ಡಬ್ಲ್ಯುಎಚ್‌ಒ) ಇತ್ತೀಚಿನ ವರದಿ ಪ್ರಕಾರ, ಭಾರತವೊಂದರಲ್ಲೇ 2 ಲಕ್ಷ ಮಂದಿಗೆ ಯಕೃತ್ತಿನ ಕಾಯಿಲೆ ಇದೆ.ಶರೀರದಲ್ಲಿ ಯಕೃತ್ತು ಬಹು ಮುಖ್ಯವಾದ ಅಂಗ. ಶರೀರದ ಎಲ್ಲ ಚಟುವಟಿಕೆಗಳ ಒಟ್ಟಾರೆ ಉಸ್ತುವಾರಿಯನ್ನು ಇದು ನೋಡಿಕೊಳ್ಳುತ್ತದೆ. ಯಕೃತ್ತಿನಲ್ಲಿ ಖನಿಜಾಂಶಗಳು, ವಿಟಮಿನ್‌ಗಳು ಶೇಖರಣೆಯಾಗುತ್ತವೆ. ಇದು  ರಕ್ತಕೋಶಗಳ ರಚನೆಗೆ ಸಹಕರಿಸುತ್ತದೆ.ಶೇಕಡಾ 80ರಷ್ಟು ಉತ್ತಮವಾದ ಕೊಲೆಸ್ಟ್ರಾಲ್‌ನ್ನು ಉತ್ಪಾದಿಸುತ್ತದೆ. ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ. ರಕ್ತದ ಹೆಪ್ಪುಗಟ್ಟುವಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಗಾಯವಾದ ಸಂದರ್ಭದಲ್ಲಿ ರಕ್ತ ಹರಿದುಹೋಗುವುದನ್ನು ತಪ್ಪಿಸುತ್ತದೆ.ಸಮತೋಲನಭರಿತ ಆಹಾರ ಸೇವನೆಯ ಮೂಲಕ ಯಕೃತ್ತಿನ ಆರೋಗ್ಯ ಕಾಪಾಡಿಕೊಳ್ಳಬಹುದು. ನಿಯಮಿತವಾದ ವ್ಯಾಯಾಮ ಕೂಡ ಉತ್ತಮ. ಯಕೃತ್ತಿನ ಸಂರಕ್ಷಣೆಗೆ ಇಲ್ಲಿವೆ ಕೆಲವು ಉಪಯುಕ್ತ ಸಲಹೆಗಳು:*ಮದ್ಯಪಾನ ಮತ್ತು ಮಾದಕ ದ್ರವ್ಯ ಸೇವನೆಯಿಂದ ದೂರ ಇರಿ

*ಕೆಫೀನ್ ಅಂಶದ ಪಾನೀಯಗಳ ಮಿತ ಸೇವನೆ ಇರಲಿ, ಸಾಕಷ್ಟು ನೀರು ಸೇವಿಸಿ

*ಸೂಕ್ತ ಲಸಿಕೆಗಳನ್ನು ಹಾಕಿಸಿಕೊಳ್ಳಿ

*ಅಗತ್ಯಕ್ಕಿಂತ ಹೆಚ್ಚು ಔಷಧ ಸೇವನೆ ಬೇಡ

*ಕ್ರಿಮಿನಾಶಕಗಳ ಬಳಕೆಯಿಂದ ಪರಿಸರ ಮಾಲಿನ್ಯ ಆಗದಿರಲಿ

ಮದ್ಯಪಾನ ಮತ್ತು ಮಾದಕ ದ್ರವ್ಯಗಳ ಅಧಿಕ ಸೇವನೆಯಿಂದ ಮೂರು ಗಂಭೀರ ಸಮಸ್ಯೆಗಳು ಉಂಟಾಗುತ್ತವೆ. ಅವೆಂದರೆ ಮದ್ಯಪಾನದ ಹೆಪಟೈಟಿಸ್, ಯಕೃತ್ತಿನ ಕಾಯಿಲೆ, ಮತ್ತು ಆಲ್ಕೋಹಾಲಿಕ್ ಸಿರೋಸಿಸ್.

*ನಾನಾ ಔಷಧಗಳ ಸೇವನೆಯಿಂದ ಯಕೃತ್ತಿಗೆ ಹಾನಿಯಾಗುತ್ತದೆ. ಆದ್ದರಿಂದ ವೈದ್ಯರು ಸೂಚಿಸಿದ್ದಕ್ಕಿಂತ ಹೆಚ್ಚು ಔಷಧ ಸೇವನೆ ಒಳ್ಳೆಯದಲ್ಲ.

*ಬಣ್ಣದ ಥಿನ್ನರ್‌ಗಳು, ಕ್ರಿಮಿನಾಶಕಗಳ ಸಿಂಪಡಣೆಯಿಂದ ಪರಿಸರ ಮಾಲಿನ್ಯವಾಗುತ್ತದೆ. ಇದು ಸಹ ಯಕೃತ್ತಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ಉತ್ಪನ್ನಗಳನ್ನು ಬಳಸುವಾಗ ಮುಖವಾಡ ಧರಿಸಿ.

*ಹೆಪಟೈಟಿಸ್ `ಎ', `ಬಿ', `ಸಿ', `ಡಿ' ಮತ್ತು `ಇ' ಪಿತ್ತಜನಕಾಂಗದ ಊತಕ್ಕೆ ಕಾರಣವಾಗುತ್ತವೆ. ಹೆಪಟೈಟಿಸ್ ಸಿರೋಸಿಸ್ ಕ್ಯಾನ್ಸರ್‌ಗೂ ಕಾರಣವಾಗುತ್ತವೆ.ಆರೋಗ್ಯ ಸುಧಾರಣೆ

ನೈಸರ್ಗಿಕ ಆಹಾರ ಸೇವನೆ ಯಕೃತ್ತಿನ ಒಟ್ಟಾರೆ ಆರೋಗ್ಯ ಸಂರಕ್ಷಣೆಗೆ ಅಗತ್ಯ. ಉದಾ- ಬೆಳ್ಳುಳ್ಳಿ ಯಕೃತ್ತಿನ ಚಟುವಟಿಕೆಗೆ ಒಳ್ಳೆಯದು. ಯಕೃತ್ತು ಶರೀರದಿಂದ ವಿಷಯುಕ್ತ ಅಂಶಗಳನ್ನು ಹೊರ ಹಾಕುತ್ತದೆ. ಬೆಳಿಗ್ಗೆ ನಿಂಬೆ ಹಣ್ಣಿನ ರಸ ಕುಡಿಯುವುದು ಯಕೃತ್ತಿನ ಆರೋಗ್ಯ ಸುಧಾರಣೆಗೆ ಸಹಕರಿಸುತ್ತದೆ.ಮೂಲಿಕೆ ಪರಿಹಾರ

*ಸಂಶೋಧನೆಗಳ ಪ್ರಕಾರ ಕೆಲವು ಮೂಲಿಕೆಗಳು ಪಿತ್ತಜನಕಾಂಗದ ಆರೋಗ್ಯ ವೃದ್ಧಿಗೆ ಸಹಕಾರಿ. ಅವುಗಳ ವಿವರ ಇಲ್ಲಿದೆ:*ಚಿಕೋರಿ (ಕಸಾನಿ): ಉತ್ತರ ಭಾರತ ಮತ್ತು ದಕ್ಷಿಣ ಭಾರತದಲ್ಲಿ ವ್ಯಾಪಕವಾಗಿ ಬೆಳೆಯುವ ಈ ಮೂಲಿಕೆ ಯಕೃತ್ತಿನ ಆರೋಗ್ಯಕ್ಕೆ ಉತ್ತಮ*ಕೇಪರ್ (ಹಿಂಸ್ರಾ): ಇದು ಮೆಥೀಕ್ಸಿ ಬೆನ್ಜೋಯಿಕ್ ಆಮ್ಲ ಮತ್ತು ಹೆಪಟೊ ಪ್ರೊಆ್ಯಕ್ಟಿವ್ ಅಂಶವನ್ನು ಒಳಗೊಂಡಿದೆ.*ಬ್ಲ್ಯಾಕ್ ನೈಟ್ಶೇಡ್ (ಕಾಕಾಮಚಿ): ಯಕೃತ್ತಿಗೆ ಹಾನಿಯಾದಾಗ ಚಿಕಿತ್ಸೆಗಾಗಿ ಬಳಸುತ್ತಾರೆ.*ಅರ್ಜುನ ತೊಗಟೆ (ಅರ್ಜುನ): ಇದೊಂದು ಹಸಿರು ಮರ. ಇದರ ತೊಗಟೆ ಯಕೃತ್ತಿನ ಆರೋಗ್ಯವನ್ನು ವಿಷದಿಂದ ಕಾಪಾಡುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.