ಯಕ್ಷಗಾನದಿಂದ ತುಳು ಸಂಸ್ಕೃತಿ ಶ್ರೀಮಂತ
ಕಿನ್ನಿಗೋಳಿ (ಮೂಲ್ಕಿ): ಯಕ್ಷಗಾನ ಕಲೆಯಿಂದ ತುಳುನಾಡಿನ ಸಂಸ್ಕೃತಿ ಶ್ರಿಮಂತವಾಗಿದೆ ಎಂದು ಉದ್ಯಮಿ ಪ್ರಮೋದ್ ಮಧ್ವರಾಜ್ ಹೇಳಿದರು.ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಯುಗಪುರುಷ ಮತ್ತು ಯಕ್ಷಲಹರಿ ಸಂಯೋಜನೆಯ ಯಕ್ಷಾಷ್ಟಕ ಯಕ್ಷಗಾನ ತಾಳಮದ್ದಲೆಯ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಶನಿವಾರ ಅವರು ಮಾತನಾಡಿದರು.
ಕರ್ಣಾಟಕ ಬ್ಯಾಂಕ್ ಮಹಾ ಪ್ರಬಂಧಕ ಎಂ.ಎಸ್ಮಹಾಬಲೇಶ್ವರ ಭಟ್ ಅಧ್ಯಕ್ಷತೆ ವಹಿಸಿದ್ದರು. ಹವ್ಯಾಸಿ ಯಕ್ಷಗಾನ ಕಲಾವಿದ ಕೆ.ವಿಶ್ವೇಶ ರಾವ್, ಮುಂಬೈ ಉದ್ಯಮಿ ಏಳಿಂಜೆ ಕೊಂಜಾಲುಗುತ್ತು ಅನಿಲ್ ಶೆಟ್ಟಿ, ನಾರಾವಿ ಸೂರ್ಯನಾರಾಯಣ ದೇವಳದ ಪ್ರಧಾನ ಅರ್ಚಕರಾದ ಕೃಷ್ಣ ತಂತ್ರಿ, ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯ ಅಶೋಕ್ ಭಟ್ ಉಜಿರೆ, ನಿವೃತ್ತ ಉಪ ತಹಶೀಲ್ದಾರ್ ವೈ. ಯೋಗೀಶ್ ರಾವ್ ಅವರನ್ನು ಸನ್ಮಾನಿಸಲಾಯಿತು.
ಕಟೀಲಿನ ಪ್ರಧಾನ ಅರ್ಚಕ ಕೆ. ಲಕ್ಷ್ಮಿನಾರಾಯಣ ಆಸ್ರಣ್ಣ, ಮಾಜಿ ಕ.ಸಾ.ಪ. ಅಧ್ಯಕ್ಷ ಹರಿಕೃಷ್ಣ ಪುನರೂರು, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪಂಜ ಭಾಸ್ಕರ ಭಟ್, ಕಟೀಲು ಪದವಿ ಕಾಲೇಜಿನ ಪ್ರಾಂಶುಪಾಲ ಎಂ. ಬಾಲಕೃಷ್ಣ ಶೆಟ್ಟಿ, ಕಾರ್ಪೋರೇಶನ್ ಬ್ಯಾಂಕ್ನ ಗೋವಿಂದ ಪೈ, ಕಟೀಲು ಯಕ್ಷಗಾನ ಮೇಳದ ಸಂಚಾಲಕ ಕಲ್ಲಾಡಿ ದೇವಿ ಪ್ರಸಾದ ಶೆಟ್ಟಿ, ಉದ್ಯಮಿ ರಮೇಶ್ ಎಲ್. ಕುಂದರ್, ಶ್ರಿಪತಿ ಭಟ್, ಪಿ.ಕೆ.ರವೀಂದ್ರ ಪೈ, ಅನಂತಕೃಷ್ಣ ರಾವ್, ಎಳತ್ತೂರು ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ಸಂತೋಷ್ ಹೆಗ್ಡೆ, ಕಿನ್ನಿಗೋಳಿ ಲಯನ್ಸ್ ಅಧ್ಯಕ್ಷ ಭುಜಂಗ ಭಂಜನ್, ರೋಟರಿ ಅಧ್ಯಕ್ಷ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ, ಹಾಜರಿದ್ದರು.ಯಕ್ಷಲಹರಿಯ ಅಧ್ಯಕ್ಷ ಇ. ಶ್ರಿನಿವಾಸ್ ಭಟ್ ಸ್ವಾಗತಿಸಿದರು.
ಯುಗಪುರುಷದ ಭುವನಾಭಿರಾಮ ಉಡುಪ ಪ್ರಸ್ತಾವನೆ ಗೈದರು. ಕಾರ್ಯದರ್ಶಿ ಶ್ರಿಧರ ಡಿ.ಎಸ್ ವಂದಿಸಿದರು. ಡಾ.ಎಂ.ರಾಧಾಕೃಷ್ಣ ಭಟ್, ವಸಂತ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.