ಯಕ್ಷಗಾನ ಪ್ರದರ್ಶನ ಸಪ್ತಾಹ ಜೂ 18ರಿಂದ

7

ಯಕ್ಷಗಾನ ಪ್ರದರ್ಶನ ಸಪ್ತಾಹ ಜೂ 18ರಿಂದ

Published:
Updated:

ಉಡುಪಿ: ಯಕ್ಷಗಾನ ಕಲಾವಿದ ಕೆ. ಗೋವಿಂದ ಭಟ್ ಅವರ ವಿವಿಧ ಪ್ರಧಾನ ಪಾತ್ರಗಳನ್ನೊಳಗೊಂಡ ಯಕ್ಷಗಾನ ಪ್ರದರ್ಶನ ಸಪ್ತಾಹ ಹಾಗೂ ಅವರ ಕುರಿತ ವಿಚಾರ ಸಂಕಿರಣ, ಅಭಿನಂದನೆ ಕಾರ್ಯಕ್ರಮಗಳು ಶ್ರೀಕಷ್ಣ ಮಠದ ರಾಜಾಂಗಣದಲ್ಲಿ ಜೂನ್ 18 ರಿಂದ 24ರ ವರೆಗೆ ನಡೆಯಲಿದೆ ಎಂದು ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೇಕಾರ್ ತಿಳಿಸಿದ್ದಾರೆ.ಯಕ್ಷಗಾನ ಕಲಾರಂಗದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದೆ. ಪ್ರರ್ಯಾಯ ಶ್ರೀ ಸೋದೆ ವಾದಿರಾಜ ಮಠದ ವಿಶ್ವವಲ್ಲಭತೀರ್ಥ ಸ್ವಾಮೀಜಿ ಸಪ್ತಾಹ ಸಮಿತಿಯ ಗೌರವ ಅಧ್ಯಕ್ಷರಾಗಿದ್ದಾರೆ.ಪದಾಧಿಕಾರಿಗಳು: ಅಧ್ಯಕ್ಷರಾಗಿ ತಲ್ಲೂರು ಶಿವರಾಮ ಶೆಟ್ಟಿ, ಉಪಾಧ್ಯಕ್ಷರಾಗಿ ದಿವಾನ ಪಾಡಿಗಾರು ಶ್ರೀನಿವಾಸ ತಂತ್ರಿ, ಪ್ರೊ. ಹೆರಂಜೆ ಕಷ್ಣ ಭಟ್, ಪ್ರಧಾನ ಕಾರ್ಯದರ್ಶಿಯಾಗಿ ವಾಸುದೇವ ರಂಗಾಭಟ್, ಕಾರ್ಯದರ್ಶಿಗಳಾಗಿ ಗಣರಾಜ ಭಟ್, ಪ್ರೊ. ನಾರಾಯಣ ಎಂ. ಹೆಗಡೆ, ವಾದಿರಾಜ ಕಲ್ಲೂರಾಯ, ಕೋಶಾಧಿಕಾರಿಯಾಗಿ ಡಾ. ಹರೀಶ್ ಜೋಷಿ,  ಗೌರವ ಸಲಹೆಗಾರರಾಗಿ ರಘುರಾಮ ಆಚಾರ್, ಮುರಲಿ ಕಡೆಕಾರ್  ಆಯ್ಕೆ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry