ಯಕ್ಷಗಾನ, ಬಯಲಾಟಕ್ಕೆ ಪಠ್ಯ ಶೀಘ್ರ: ಸಾಮಗ

7

ಯಕ್ಷಗಾನ, ಬಯಲಾಟಕ್ಕೆ ಪಠ್ಯ ಶೀಘ್ರ: ಸಾಮಗ

Published:
Updated:

ಚಿಕ್ಕಮಗಳೂರು: ಮಾರ್ಚ್ ಅಂತ್ಯಕ್ಕೆ ಯಕ್ಷಗಾನ ಮತ್ತು ಬಯಲಾಟಕ್ಕೆ ಸಂಬಂ ಧಿಸಿದಂತೆ  ಪಠ್ಯಪುಸ್ತಕ ಹೊರತರಲು ಉದ್ದೇಶಿಸಲಾಗಿದೆ ಎಂದು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಎಂ.ಎಲ್.ಸಾಮಗ ತಿಳಿಸಿದರು.ಕುವೆಂಪು ಕಲಾಮಂದಿರದಲ್ಲಿ ಯಕ್ಷಗಾನ ಬಯಲಾಟ ಅಕಾಡೆಮಿ ವತಿಯಿಂದ ವಿದ್ಯಾ ರ್ಥಿಗಳಿಗೆ ಎರಡು ಕಲಾ ಪ್ರಕಾರಗಳ ಒಂದು ಗ್ರಹಿಕೆ ಕುರಿತ ಯಕ್ಷಗಾನ, ಸಣ್ಣಾಟ ರಸಗ್ರಹಣ ಸಮಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ಯಕ್ಷಗಾನದ ಸಾಹಿತ್ಯ ಚರಿತ್ರೆ ಬಯಲಾಟದ ಪ್ರಕಾರಗಳ ಸ್ವರೂಪ, ವಿವೇಚನೆಗಳ ಬಗ್ಗೆ ಪಠ್ಯಪುಸ್ತಕ ಹೊರ ತರುವ ಸಂಕಲ್ಪ ಮಾಡಲಾಗಿದೆ. ಈಗಾ ಗಲೇ ಶೇ.70ರಷ್ಟು ಕೆಲಸಗಳು ಪೂರ್ಣ ವಾಗಿವೆ. ಕರಾವಳಿಯ ತೆಂಗುತಿಟ್ಟ, ಬಡಗತಿಟ್ಟ ಯಕ್ಷಗಾನಗಳು, ಉತ್ತರ ಕನ್ನಡದ ಬಯಲಾಟಕ್ಕೆ ಸಂಬಂಧಿಸಿದ ಪಠ್ಯವನ್ನು ಹೊರತರಲು ಕಳೆದ ಎರಡು ವರ್ಷದಿಂದ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು.ಜೂನಿಯರ್, ಸೀನಿಯರ್ ಮತ್ತು ವಿದ್ವತ್‌ಗೆ ಪರೀಕ್ಷೆಗಳು ನಡೆಯಲಿವೆ. ಇನ್ನೆರಡು ವರ್ಷದಲ್ಲಿ ಪರೀಕ್ಷೆ ನಡೆಯುವ ಸಾಧ್ಯತೆಗಳಿಲ್ಲ. ಪಠ್ಯಪುಸ್ತಕ ಹೊರಬಂದರೆ ಈ ವಿಷಯ ಕುರಿತು ಶಿಕ್ಷಕರಿಗೆ ತರಬೇತಿ ನೀಡಬೇಕಾಗುತ್ತದೆ. ಯಕ್ಷಗಾನದ ಪರಿಚಯ ಇದ್ದವರು ಶಿಕ್ಷಕರಾದರೆ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುವಂತೆ ಬೋಧಿಸಲು ಸಾಧ್ಯವಾಗುತ್ತದೆ  ಎಂದು ತಿಳಿಸಿದರು.ಯಕ್ಷಗಾನ ಮತ್ತು ಬಯಲಾಟದ ಕಲಾವಿದರು ಮತ್ತು ಚಿಂತಕರ ನಡುವೆ ಇರುವ ಕಂದಕ ಸರಿಪಡಿಸಬೇಕು. ಕಲಾವಿದರಲ್ಲಿರುವ ಸಂಕೋಚ ನಿವಾರಿ ಸಬೇಕಾಗಿದೆ ಕಲಾವಿದರಲ್ಲಿ ಆತ್ಮ ವಿಶ್ವಾಸ ಮೂಡಿಸಿ, ಈ ಕಲಾಪ್ರಕಾರ ಮುಂದಿನ ತಲೆಮಾರಿಗೆ ಕೊಂಡೊಯ್ಯಬೇಕು. ಇದಕ್ಕೆ ಅಕಾಡೆಮಿ ಸಹಕರಿಸಲಿದೆ. ಅಕಾ ಡೆಮಿಗೆ ಹೆಚ್ಚುವರಿಯಾಗಿ 2 ಕೋಟಿ ರೂಪಾಯಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಅಕಾಡೆಮಿ ಸದಸ್ಯ ರಮೇಶ್‌ಬೇಗಾರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry