ಗುರುವಾರ , ಮಾರ್ಚ್ 4, 2021
29 °C

ಯಕ್ಷಗಾನ ಸಪ್ತಾಹ, ರಂಗವೈಭವ ಮುಕ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಕ್ಷಗಾನ ಸಪ್ತಾಹ, ರಂಗವೈಭವ ಮುಕ್ತಾಯ

ಸಿದ್ದಾಪುರ: ತಾಲ್ಲೂಕಿನ ಇಟಗಿಯ ರಾಮೇಶ್ವರ ದೇವಾಲಯದ ಸೀತಾರಾಮ ಹೆಗಡೆ ಹರಗಿ ಸಭಾಭವನದಲ್ಲಿ ಒಂದು ವಾರ ಕಾಲ ನಡೆದ ಯಕ್ಷಗಾನ ಸಪ್ತಾಹ ಮತ್ತು ರಂಗವೈಭವ  ಕಾರ್ಯಾಗಾರ ಇತ್ತೀಚೆಗೆ ಮುಕ್ತಾಯಗೊಂಡಿತು.ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಮುಖ್ಯ ಶಿಕ್ಷಕ ಕೆ.ಐ.ಹೆಗಡೆ ಮಾತನಾಡಿ, ‘ಕಾಲ ಬದಲಾದಂತೆ  ಹಲವು ಕಲೆಗಳ ಮೂಲಸ್ವರೂಪದಲ್ಲಿ ಬದಲಾವಣೆ ಆಗುತ್ತಿರುವುದು ಖೇದಕರ ಸಂಗತಿ.ಯಕ್ಷಗಾನ ಕಲೆಯಲ್ಲಿ ನಮ್ಮ ಪರಂಪರೆಯ ತತ್ವ ಮತ್ತು ಆದರ್ಶಗಳು ಅನಾವರಣಗೊಳ್ಳುತ್ತವೆ. ಆದರೆ ಈಗೀಗ ಯಕ್ಷಗಾನದಲ್ಲಿಯೂ ಕೂಡ ಸಿನಿಮಾ ಕಥೆಗಳನ್ನು ಹೋಲುವ ಪ್ರಸಂಗಗಳು ಬರುತ್ತಿವೆ’ ಎಂದರು.ಯಕ್ಷಗಾನ ಪ್ರಸಂಗಕರ್ತ ಜಿ.ಮೃತ್ಯುಂಜಯ, ಅರಣ್ಯಾಧಿಕಾರಿ ನೂರ್ ಅಹಮ್ಮದ್ ಉಪಸ್ಥಿತರಿದ್ದರು.ಸಭಾ ಕಾರ್ಯಕ್ರಮದ ನಂತರ ‘ಕಿರಾತಾರ್ಜುನ’ ಯಕ್ಷಗಾನ ಪ್ರದರ್ಶನಗೊಂಡಿತು. ಹಿಮ್ಮೇಳದಲ್ಲಿ ರವೀಂದ್ರ ಭಟ್‌ ಅಚವೆ, ನಾಗಭೂಷಣ ಹೆಗ್ಗೋಡು,  ಲಕ್ಷ್ಮೀನಾರಾಯಣ ಮತ್ತು ಮುಮ್ಮೇಳದಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆ, ತೋಟಿಮನೆ ಗಣಪತಿ ಹೆಗಡೆ, ಇಟಗಿ ಮಹಾಬಲೇಶ್ವರ ಭಟ್, ಅವಿನಾಶ ಕೊಪ್ಪ, ನಾಗೇಂದ್ರ ಮುರೂರು ಮತ್ತಿತರರು ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.