ಯಡಹಳ್ಳಿ: ಶಿವಯೋಗಿಗಳ ಪುಣ್ಯಾರಾಧನೆ 6ರಿಂದ

7

ಯಡಹಳ್ಳಿ: ಶಿವಯೋಗಿಗಳ ಪುಣ್ಯಾರಾಧನೆ 6ರಿಂದ

Published:
Updated:

ಬಾಗಲಕೋಟೆ: ತಾಲ್ಲೂಕಿನ ಯಡಹಳ್ಳಿ ಗ್ರಾಮದ ಅಜಾತನಾಗಲಿಂಗೇಶ್ವರ ಸಾಧುಮಠದಲ್ಲಿ ಇದೇ 6ರಿಂದ 8ರ ವರೆಗೆ ಸಿದ್ಧರಾಮೇಶ್ವರ ಶಿವಯೋಗಿಗಳ 38ನೇ ಪುಣ್ಯಾರಾಧನೆ ನಡೆಯಲಿದೆ.

6ರಂದು ಬೆಳೆಗ್ಗೆ ಅದ್ವೈತ ಧ್ವಜಾರೋಹಣ ನಡೆಯಲಿದೆ. 7.30ಕ್ಕೆ ಅಂಕಲಿಗಿ ಮಠದ ವೀರಭದ್ರಸ್ವಾಮೀಜಿಯವರಿಂದ ಕಳಸ ಸ್ಥಾಪನೆ. ನಂತರ ಸಾಮೂಹಿಕವಾಗಿ ಭಗವದ್ಗೀತಾ ಪಾರಾಯಣ ನಡೆಯಲಿದೆ.ಅಂದು ಸಂಜೆ ನಡೆಯುವ ಧರ್ಮಸಭೆಯಲ್ಲಿ ಐರಣಿ ಮಹಾಸಂಸ್ಥಾನ ಹೊಳೆಮಠದ ಬಸವರಾಜ ದೇಶಿಕೇಂದ್ರ ಸ್ವಾಮೀಜಿ, ಅಂಕಲಿ ಮಠದ ವೀರಭದ್ರ ಸ್ವಾಮೀಜಿ, ಮಂಟೂರ ಸಿದ್ಧಾರೂಢ ಮಠದ ಸದಾನಂದ ಸ್ವಾಮೀಜಿ, ರಾಮಾರೂಢ ಬ್ರಹ್ಮ ವಿದ್ಯಾಶ್ರಮದ ಪರಮರಾಮಾರೂಢ ಸ್ವಾಮೀಜಿ, ದಾವಣಗೆರೆ ಜಡೆ ಸಿದ್ಧಾಶ್ರಮದ ಶಿವಾನಂದ ಸ್ವಾಮೀಜಿ, ತೆಲಗಿ ಶಂಭುಲಿಂಗಾಶ್ರಮದ ಪೂರ್ಣಣಾನಂದ ಭಾರತಿ ಸ್ವಾಮೀಜಿ, ಹೊತನಳ್ಳಿ ಸಿದ್ಧಾರೂಢ ಮಠದ ಶಂಕರರಾನಂದ ಸ್ವಾಮೀಜಿ, ಯಲ್ಲಟ್ಟಿ ಯೋಗಾನಾಂಧ ಸ್ವಾಮಿ, ಅನಗವಾಡಿ ಪೂರ್ಣನಾಂದ ಆಶ್ರಮದ ಅನುಸೂಯಾ ತಾಯಿ, ಹನುಮಾನಂದ ಸ್ವಾಮೀಜಿ ಭಾಗವಹಿಸುವರು.ರಾತ್ರಿ 9.30ಕ್ಕೆ ಶಿವಪುತ್ರಪ್ಪ ಕಟಗೇರಿ ಅವರಿಂದ ಶಿವಯ್ಯ ಸ್ವಾಮೀಜಿಗಳ ತುಲಾಭಾರ ನಡೆಯುವುದು.

ಇದೇ  7ರಂದು ಬೆಳಿಗ್ಗೆ 7.30ಕ್ಕೆ ಶಿವಮಹಿಮ್ಮನ ಸ್ತೋತ್ರದೊಂದಿಗೆ ಶಿವನಾಮ ಸಪ್ತಾಹ ಪ್ರಾರಂಭವಾಗಲಿದೆ. ಸಂಜೆ ಧರ್ಮಸಭೆ ನಂತರ ಗ್ರಾಮದ ಗಣಪತಿ ನದಾಫ್, ಕುಬೇರಪ್ಪ ನೀಲಣ್ಣವರ, ವಿಠ್ಠಪ್ಪ ವಾಲೀಕಾರ ಇವರಿಂದ ಬಸವಾನಂದ ಭಾರತಿ ಸ್ವಾಮೀಜಿಗೆ ನಾಣ್ಯ ತುಲಭಾರ ಮತ್ತು ಕಿರೀಟ ಪೂಜೆ ನಡೆಯಲಿದೆ.ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ, ಸಚಿವ ಮುರುಗೇಶ ನಿರಾಣಿ, ಸಂಸದ ಪಿ.ಸಿ. ಗದ್ದಿಗೌಡರ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವಪ್ರಭು ಸರನಾಡಗೌಡ, ಜಿ.ಪಂ. ಸದಸ್ಯ ಪಾಂಡು ಪೊಲೀಸ್, ತಾ.ಪಂ. ಉಪಾಧ್ಯಕ್ಷ ಶ್ರಿಶೈಲ ಗೌರಿ, ಸದಸ್ಯ ತೇಜಪ್ಪ ರಾಠೋಡ, ಬಾಗಲಕೋಟೆ ವಲಯ ಅರಣ್ಯಾಧಿಕಾರಿ ರಘುನಾಥ, ಕಲಾದಗಿ ಠಾಣಾ ಪಿಎಸ್‌ಐ ಮಹಾಂತೇಶ ಹೊಸಪೇಟಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು.ಅಂದು ರಾತ್ರಿ 10.30ಕ್ಕೆ ಕುಳ್ಳೂರು ಗ್ರಾಮದ ಜಾನಪದ ಪ್ರಶಸ್ತಿ ವಿಜೇತೆ ಯಲ್ಲವ್ವ ಮಾದರ ಅವರಿಂದ ಗೀಗೀ ಪದ ಗಾಯನ ನಡೆಯಲಿದೆ. ಇದೇ 8ರಂದು ಬೆಳಿಗ್ಗೆ 9 ಗಂಟೆಗೆ ನೂತನ ಸಭಾಭವನವನ್ನು ಜಿಲ್ಲಾ ಪಂಚಾಯಿತಿ ಮಾಜಿ  ಅಧ್ಯಕ್ಷ ಹೂವಪ್ಪ ರಾಠೋಡ ಉದ್ಘಾಟಿಸುವರು. ಶ್ರದ್ಧಾನಂದ ಸ್ವಾಮೀಜಿ ಅವರಿಂದ ನೂತನ ದಿನದರ್ಶಿಕೆ ಬಿಡುಗಡೆಯಾಗಲಿದೆ. ಬೆಳಿಗ್ಗೆ 10 ಗಂಟೆಗೆ ಬಸವಾನಂದ ಭಾರತಿ ಸ್ವಾಮೀಜಿಗಳ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ಅಂದು ಸಂಜೆ 5 ಗಂಟೆಗೆ ಮಹಾರಥೋತ್ಸವ ಜರುಗಲಿದೆ ಎಂದು ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry