ಗುರುವಾರ , ನವೆಂಬರ್ 21, 2019
21 °C

ಯಡಿಯೂರಪ್ಪ ಅವರ ಕ್ಷಮೆಯಾಚಿಸಿದ ನಿರಾಣಿ

Published:
Updated:

ಬಾಗಲಕೋಟೆ: `ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ನಾನು ಬಿಜೆಪಿ ಅಭ್ಯರ್ಥಿಯಾಗಿ ಬೀಳಗಿ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದೇನೆ, ನನ್ನ ಈ ನಿರ್ಧಾರದಿಂದ ರಾಜಕೀಯ ಗುರುಗಳಾದ ಯಡಿಯೂರಪ್ಪನವರ ಮನಸ್ಸಿಗೆ ನೋವಾಗಿದ್ದರೇ ದಯವಿಟ್ಟು ಕ್ಷಮಿಸಬೇಕು' ಎಂದು ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಮನವಿ ಮಾಡಿಕೊಂಡರು.`ನನ್ನ ರಾಜಕೀಯ ಜೀವನದಲ್ಲಿ ಬಿ.ಎಸ್.ಯಡಿಯೂರಪ್ಪನವರ ಆಶೀರ್ವಾದ, ಬೆಂಬಲ ಪ್ರಮುಖವಾಗಿದೆ. ತಂದೆ ಸ್ಥಾನದಲ್ಲಿರುವ ಅವರ ಅಪೇಕ್ಷೆಗೆ ವಿರುದ್ಧವಾಗಿ ನಿರ್ಧಾರವನ್ನು ಅನಿವಾರ್ಯವಾಗಿ ಕೈಗೊಂಡಿದ್ದೇನೆ. ಯಾವುದೇ ಒತ್ತಡ, ಲಾಬಿಗೆ ಮಣಿದಿಲ್ಲ' ಎಂದು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.`ರಾಜಕೀಯ ನಿರ್ಧಾರ ಕೈಗೊಳ್ಳುವಲ್ಲಿ ವಿಳಂಬ ಆಗಿರುವುದರಿಂದ ಉಂಟಾದ ಗೊಂದಲದಿಂದ ನನಗೂ ಬೇಸರ ತರಿಸಿದೆ. ಆದ್ದರಿಂದ ಈ ಎಲ್ಲ ಗೊಂದಲಗಳಿಗೆ ತೆರೆ ಎಳೆಯಲು ನಿರ್ಧರಿಸಿದ್ದೇನೆ' ಎಂದು ಹೇಳಿದರು.`ನನ್ನ ನಿರ್ಧಾರದಲ್ಲಿನ ವಿಳಂಬ ಕುರಿತು ಕೆಲವರಲ್ಲಿ ಅಸಮಾಧಾನವಿದ್ದರೂ ಬೀಳಗಿ ಕ್ಷೇತ್ರದ ಜನತೆ ನನ್ನನ್ನು ಕೈಬಿಡುವುದಿಲ್ಲ,  ನನ್ನ ಎರಡು ಅವಧಿಯಲ್ಲಿ ಆಗಿರುವ ಅಭಿವೃದ್ಧಿಗೆ ಆದ್ಯತೆ ನೀಡುತ್ತಾರೆ' ಎಂದು ಮುರುಗೇಶ್ ನಿರಾಣಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)