ಯಡಿಯೂರಪ್ಪ ಜನ್ಮದಿನ: 1008 ಕಡೆ ಪೂಜೆ

7

ಯಡಿಯೂರಪ್ಪ ಜನ್ಮದಿನ: 1008 ಕಡೆ ಪೂಜೆ

Published:
Updated:

ಬೆಂಗಳೂರು:  ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ 70ನೇ ಜನ್ಮದಿನದ ಪ್ರಯುಕ್ತ ಇದೇ 27ರಂದು ಅವರ ಬೆಂಬಲಿಗರು 1,008 ದೇವಾಲಯಗಳಲ್ಲಿ ಪೂಜೆ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.ಯಡಿಯೂರಪ್ಪ ಅವರ ಹೆಸರಿನಲ್ಲಿ ಪೂಜೆ ಸಲ್ಲಿಸಲು ಅವರ ಬೆಂಬಲಿಗರು ಆನ್‌ಲೈನ್ ಮೂಲಕ ಮುಂಗಡ ಬುಕ್ಕಿಂಗ್ ಮಾಡಿಸಿದ್ದಾರೆ.ತಮ್ಮ ನಾಯಕನಿಗೆ ಭವಿಷ್ಯದಲ್ಲಿ ಒಳಿತಾಗಲಿ ಎಂಬ ಹಾರೈಕೆಯೊಂದಿಗೆ ಈ ಪೂಜೆ ಸಲ್ಲಿಸುತ್ತಿದ್ದಾರೆ. ಆನ್‌ಲೈನ್ ಪೂಜೆ ಸೇವೆ ಒದಗಿ ಸುತ್ತಿರುವ ಡಿಡಿಡಿ.ಛಿಟಟ್ಜಟ್ಞ್ಝಜ್ಞಿಛಿ.ಟ್ಟಜ ಮೂಲಕ ಮುಂಗಡ ಸೇವೆ ಕಾಯ್ದಿರಿಸಿದ್ದಾರೆ ಎಂದು ಇ-ಪೂಜಾ ಆನ್‌ಲೈನ್ ಸಂಸ್ಥೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry