ಯಡಿಯೂರಪ್ಪ ಬಣದಿಂದ ಜುಲೈ 5 ರ ಗಡುವು

ಶನಿವಾರ, ಜೂಲೈ 20, 2019
23 °C

ಯಡಿಯೂರಪ್ಪ ಬಣದಿಂದ ಜುಲೈ 5 ರ ಗಡುವು

Published:
Updated:

ಬೆಂಗಳೂರು (ಪಿಟಿಐ): ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಣವು ಜಗದೀಶ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡುವುದಕ್ಕೆ ಜುಲೈ 5  ರ ಗಡುವು ನೀಡಿದೆ.ಭಾನುವಾರ ಬೆಳಿಗ್ಗೆ ಶೆಟ್ಟರ್ ಅವರ ನಿವಾಸದಲ್ಲಿ ಸಭೆ ಸೇರಿದ ಯಡಿಯೂರಪ್ಪ ಬಣದ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಸರ್ವಾನುಮತದಿಂದ ಶೆಟ್ಟರ್ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಲು ಜುಲೈ 5 ರ ಗಡುವನ್ನು ವಿಧಿಸಿದರು.ಈ ವಿಷಯನ್ನು ಖಚಿತಪಡಿಸಿದ ರಾಜೂಗೌಡ ಅವರು ತಾವೆಲ್ಲರೂ ಒಕ್ಕೊರಲಿನಿಂದ ಜುಲೈ 5 ರ ಒಳಗಾಗಿ ಜಗದೀಶ ಶೆಟ್ಟರ್ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಬೇಕೆಂದು ಮನವಿ ಮಾಡಿದ್ದಾಗಿ ತಿಳಿಸಿದರು.ಒಂದು ವೇಳೆ  ತಮ್ಮ ಬೇಡಿಕೆ ಈಡೇರದೆ ಹೋದರೆ ಜುಲೈ 5 ರಂದು ತಾವು ಒಂದು ಮಹತ್ವದ ನಿರ್ಧಾರ ತೆಗೆದುಕೊಳ್ಳುವುದಾಗಿ ಅವರು ತಿಳಿಸಿದರು.ಸಭೆಯಲ್ಲಿ 55 ಶಾಸಕರು, 15 ವಿಧಾನಪರಿಷತ್ ಸದಸ್ಯರು ಹಾಗೂ 8 ಮಂದಿ ಸಂಸದರೂ ಭಾಗವಹಿಸಿದ್ದರು ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry