ಶನಿವಾರ, ಜುಲೈ 31, 2021
21 °C

`ಯಥೇಚ್ಛ ನೀರಿನಿಂದ ಜವುಳು'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: `ನೀರಾವರಿ ಕ್ಷೇತ್ರದಲ್ಲಿ ರೈತರು ಅಧಿಕವಾಗಿ ಕಬ್ಬು ಬೆಳೆಯನ್ನು ಅವಲಂಬಿಸುವುದರಿಂದ ಮತ್ತು ಯಥೇಚ್ಛವಾಗಿ ನೀರನ್ನು ಪೋಲು ಮಾಡುವುದರಿಂದ ನೀರು ಹಾಳಾಗುವುದಲ್ಲದೆ, ಸವುಳು ಜವುಳು ಭೂಮಿ ಮಾರ್ಪಾಡಾಗುತ್ತದೆ' ಎಂದು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಎ.ಬಿ.ಪಾಟೀಲ ಹೇಳಿದರು.ತೋಟಗಾರಿಕೆ ವಿಶ್ವವಿದ್ಯಾಲಯದ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡ ಸಮಗ್ರ ಕೃಷಿ ಪದ್ಧತಿ ಯೋಜನೆಯಡಿ ಈರುಳ್ಳಿ ಸುಧಾರಿತ ಬೇಸಾಯ ಕ್ರಮಗಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಕಬ್ಬಿನ ಬದಲು ತೋಟಗಾರಿಕೆ ಬೆಳೆಗಳನ್ನು ಬೆಳೆದಲ್ಲಿ ಆರ್ಥಿಕವಾಗಿ ಲಾಭದ ಜೊತೆಗೆ ಮಣ್ಣನ್ನೂ ಕಾಪಾಡಬಹುದು' ಎಂದರು.

ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ಚಿದಾನಂದ ಮನ್ಸೂರ ಮಾತನಾಡಿ, `ಜಿಲ್ಲೆಯಲ್ಲಿ ಆರ್ಥಿಕವಾಗಿ ಈರುಳ್ಳಿ ಬೇಸಾಯ ಮಾಡಲಾಗುತ್ತಿದ್ದು, ಹೊಸ ತಳಿಗಳಾದ ಅರ್ಕಾ ಕಲ್ಯಾಣ, ಅರ್ಕಾ ಬಿಂದು, ಎನ್-53 ಮುಂತಾದ ಇಳುವರಿ ಕೊಡುವ ತಳಿಗಳನ್ನು ರೈತರು ಬೆಳೆಯಲು ಮುಂದಾಗಬೇಕೆಂದು ಹಾಗೂ ಸುಧಾರಿತ ನೂತನ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಈರುಳ್ಳಿ ಬೆಳೆದಲ್ಲಿ ಹೆಚ್ಚು ಲಾಭವನ್ನು ಪಡೆಯಬಹುದು' ಎಂದರು.`ವಿವಿಧ ಬೆಳೆಗಳ ಸಮಗ್ರ ಕ್ರಿಯಾ ಯೋಜನೆ ಹಾಗೂ ಬಹು ವಾರ್ಷಿಕ ಬೆಳೆಗಳನ್ನು ರೈತರು ಅಳವಡಿಸಿಕೊಂಡರೆ ಆರ್ಥಿಕವಾಗಿ ಅನುಕೂಲವಾಗಲಿದೆ' ಎಂದು ತಿಳಿಸಿದರು.ಸಮಗ್ರ ಕೃಷಿ ಪದ್ಧತಿ ಯೋಜನೆಯ ಸಂಯೋಜಕ ಡಾ. ವಸಂತ.ಎಂ. ಗಾಣಿಗೇರ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಶ್ರಿಶೈಲ, ಗ್ರಾ. ಪಂ. ಸದಸ್ಯ ಅಡವೆಪ್ಪ ಸಾವಡಗಿ ಹಾಗೂ ಪ್ರಗತಿ ಪರ ರೈತರಾದ ಪರಸಪ್ಪ ವಾಲಿಕಾರ, ಸಹಾಯಕ ಪ್ರಾಧ್ಯಾಪಕ ಆನಂದ ನಂಜಪ್ಪನವರ, ಸಮಗ್ರ ಕೃಷಿ ಪದ್ಧತಿ ಯೋಜನಾ ಸದಸ್ಯರಾದ ರೇಖಾ ಚಿತ್ತಾಪೂರ ಹಾಗೂ ನಮಿತಾ ರಾವುತ್ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.