ಸೋಮವಾರ, ಜನವರಿ 18, 2021
19 °C
ಮುನ್ನುಡಿಯಾದ ಹೋಮ

ಯದುವೀರಗೆ ಇಂದು ಪಟ್ಟಾಭಿಷೇಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯದುವೀರಗೆ ಇಂದು ಪಟ್ಟಾಭಿಷೇಕ

ಮೈಸೂರು: ವಜ್ರಖಚಿತ ಗಂಡಭೇ ರುಂಡದ ಚಿನ್ನಾಭರಣ, ಚಿನ್ನದ ಬಣ್ಣದ ಪೇಟ, ಮಿರಿ ಮಿರಿ ಮಿಂಚುವ ನಿಲು ವಂಗಿ, ರೇಷ್ಮೆ ಪಂಚೆ ಧರಿಸಿದ್ದ ಯದು ವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಕಂಗೊಳಿಸುತ್ತಿದ್ದರು.ಅವರ ಪಟ್ಟಾಭಿಷೇಕದ ಮುನ್ನಾದಿ ನವಾದ ಬುಧವಾರ ಇಲ್ಲಿಯ ಅಂಬಾವಿ ಲಾಸ ಅರಮನೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.ಇದಕ್ಕೂ ಮೊದಲು ಅಂದರೆ ನಸುಕಿನ 5 ಗಂಟೆಗೆ ಕಳಶ ಸ್ಥಾಪನೆ, ಪುಣ್ಯಾಹ, ನಾಂದಿ, ಗಣಪತಿ ಪೂಜೆ ಕಾರ್ಯಕ್ರಮಗಳು ನಡೆದವು. ನಂತರ ಅರಮನೆ ಆವರಣದಲ್ಲಿನ ಕೋಡಿ ಸೋಮೇಶ್ವರ ದೇವಸ್ಥಾನದಲ್ಲಿಯ ಬಾವಿಯಿಂದ ಗಂಗೆಯನ್ನು ತೆಗೆದು ಕಲಶದಲ್ಲಿ ತುಂಬಿಕೊಂಡು ಷೋಡೋಪಚಾರ ಪೂಜೆ ಮಾಡಿ ಅರಮನೆಯವರೆಗೆ ಮೆರವಣಿಗೆಯಲ್ಲಿ ತರಲಾಯಿತು.ಅರಮನೆಯ ಸಿಂಗರಿಸಿದ ಆನೆ, ಒಂಟೆ, ಹಸು ಹಾಗೂ ಮುತ್ತೈದೆಯರು ಮೆರವ ಣಿಗೆಯಲ್ಲಿ ಪಾಲ್ಗೊಂಡಿದ್ದರು. ನಂತರ ನಡೆದ ನವಗ್ರಹ, ಪವಮಾನ ಹೋಮಕ್ಕೆ ಕಲಶದ ನೀರನ್ನು ಬಳಸಲಾಯಿತು. ಗುರುವಾರ ನಡೆಯುವ ಪಟ್ಟಾಭಿಷೇಕ ಸಂದರ್ಭದಲ್ಲಿ ಪ್ರೋಕ್ಷಣೆಗೂ ಕಲಶದ ನೀರು ಬಳಸಲಾಗುತ್ತದೆ.ಹೋಮ ಮುಗಿದ ನಂತರ ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಅವರ ಪಾದಪೂಜೆಯನ್ನು ಯದುವೀರ ನೆರವೇರಿಸಿದರು. ಆಮೇಲೆ ಆಗಮಿಸಿದ ರಾಜ ಗುರುಗಳಾದ ಬ್ರಹ್ಮತಂತ್ರ ಪರತಂತ್ರ ಪರಕಾಲ ಮಠದ ಗುರುಗಳಾದ ಅಭಿನವ ವಾಗೀಶ ಬ್ರಹ್ಮತಂತ್ರ ಪರಕಾಲ ಸ್ವಾಮೀಜಿಗೆ ಯದುವೀರ ಅವರು ಪಾದಪೂಜೆ ನೆರವೇರಿಸಿದರು. ಸಂಜೆ 6ರಿಂದ ರಾತ್ರಿ 8 ಗಂಟೆಯ ವರೆಗೆ ಉದಕಶಾಂತಿ ನಡೆಯಿತು. ಕಲಶಗಳಲ್ಲಿ ನೀರು ತುಂಬಿ ಋಗ್ವೇದ, ಯಜುರ್ವೇದ, ಸಾಮವೇದ ಹಾಗೂ ಅಥರ್ವೇದಗಳಿಂದ ಕಲಶ ಪೂಜೆ ನಡೆಯಿತು. ಇವೆಲ್ಲವೂ ಅರಮನೆಯ ಜೋಯಿಸರಾದ ಕೇಶವಮೂರ್ತಿ, ಅರ ಮನೆಯ ಪ್ರಧಾನ ಅರ್ಚಕ ಕುಮಾರ್, ಅರ್ಚಕರಾದ ಪುನೀತ್‌ ಹಾಗೂ ಮಂಜುನಾಥ್‌ ಶರ್ಮಾ ನೇತೃತ್ವದಲ್ಲಿ ನಡೆದವು.ಒಂದು ಸಾವಿರ ಅತಿಥಿಗಳು: ಮೈಸೂರಿ ನಲ್ಲಿನ ಅರಸು ಮನೆತನದವರು, ಅರಮನೆ ಬಂಧುಗಳು ಹಾಗೂ ಗಣ್ಯರು ಸೇರಿದಂತೆ ಒಂದು ಸಾವಿರ ಅತಿಥಿಗಳು ಗುರುವಾರ ನಡೆಯುವ ಪಟ್ಟಾಭಿಷೇ ಕದಲ್ಲಿ ಪಾಲ್ಗೊಳ್ಳುವರು.ಭಾವಿಪತ್ನಿ ಆಗಮನ: ಯದುವೀರ ಅವರು ಮದುವೆಯಾಗುವ ತ್ರಿಶಿಕಾ ಕುಮಾರಿ ತಮ್ಮ ಬಂಧುಗಳೊಂದಿಗೆ ಬುಧವಾರವೇ ಅರಮನೆಗೆ ಆಗಮಿಸಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವ ಹಿಸಿದ್ದರು.41 ವರ್ಷಗಳ ನಂತರ ಪಟ್ಟಾಭಿಷೇಕ: ಅರಮನೆಯಲ್ಲಿ 41 ವರ್ಷಗಳ ನಂತರ ಪಟ್ಟಾಭಿಷೇಕ ನಡೆಯುತ್ತಿದೆ.

1974ರ ಸೆ. 23ರಂದು ಜಯಚಾ ಮರಾಜೇಂದ್ರ ಒಡೆಯರ್ ನಿಧನ ರಾದರು. ಅದೇ ವರ್ಷ ಅಂದರೆ 1974ರ ಅ. 16ರಂದು ಶ್ರೀಕಂಠದತ್ತ ಒಡೆಯರ್‌ ಅವರಿಗೆ ಪಟ್ಟಾಭಿಷೇಕ ನಡೆಯಿತು. ಅಂದು ವಿಜಯದಶಮಿ ದಿನವಾಗಿತ್ತು.ಹೀಗಾಗಿ, ಅಂದು ಬೆಳಿಗ್ಗೆ ಪಟ್ಟಾಭಿ ಷೇಕವಾದ ನಂತರ ಮಧ್ಯಾಹ್ನ ಚಿನ್ನದ ಸಿಂಹಾಸನದ ಮೇಲೆ ಕುಳಿತು ಖಾಸಗಿ ದರ್ಬಾರ್‌ ನಡೆಸಿದರು. ಆಗ ಶ್ರೀಕಂಠದತ್ತ ಒಡೆಯರ್‌ ಅವರಿಗೆ 21 ವರ್ಷ ವಯಸ್ಸು. ಈಗ ಪಟ್ಟಾಭಿಷೇಕವಾಗುತ್ತಿರುವ ಯದು ವೀರಗೆ 22 ವರ್ಷ ವಯಸ್ಸು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.