ಶನಿವಾರ, ಜೂನ್ 12, 2021
23 °C

ಯಮಲೋಕದಲ್ಲಿ ಪ್ರಾಯಶ್ಚಿತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ವರ್ಗ-ನರಕದ ಪರಿಕಲ್ಪನೆ ಇರುವ ಭಾರತೀಯ ಪುರಾಣಗಳಲ್ಲಿ ಯಮರಾಜನನ್ನು ನರಕದ ಅಧಿಪತಿ ಎಂದು ಚಿತ್ರಿಸಲಾಗಿದೆ. ಅಂಥದ್ದೊಂದು ನಂಬಿಕೆಯನ್ನು ಆಧಾರವಾಗಿಟ್ಟುಕೊಂಡು ಝೀ ಕನ್ನಡ ವಾಹಿನಿಯಲ್ಲೊಂದು ರಿಯಾಲಿಟಿ ಶೋ ಆರಂಭವಾಗುತ್ತಿದೆ.ಇಲ್ಲಿ ಯಮಲೋಕಕ್ಕೆ ಬರುವ ಪಾಪಿಗಳು ಸಾಮಾನ್ಯ ಜನರಲ್ಲ. ಬದಲಿಗೆ ಕಿರುತೆರೆ ಧಾರಾವಾಹಿಗಳಲ್ಲಿ, ಸಿನಿಮಾಗಳಲ್ಲಿ ಖಳನಾಯಕ-ನಾಯಕಿಯಾಗಿ ನಟಿಸಿದವರು. ಅವರನ್ನು ಈ ಯಮಲೋಕಕ್ಕೆ ಕರೆದುಕೊಂಡು ಬಂದು ಶಿಕ್ಷೆಗೆ ಗುರಿಪಡಿಸಲಾಗುವುದು.

 

ನಂತರ ಅವರಿಗೆ ಪ್ರಾಯಶ್ಚಿತ್ತ ಸಿಗುವಂತೆ ಸೋಲು-ಗೆಲುವಿನ ವಿಶ್ಲೇಷಣೆ ಕೂಡ ನಡೆಯುವುದು. ಅವರಿಗೆ ನೀಡುವ ಶಿಕ್ಷೆ ಮತ್ತು ಪ್ರಾಯಶ್ಚಿತ್ತದ ವಿಧಾನ ಕಂಡು ಪ್ರೇಕ್ಷಕರು ನಗುವುದು ಖರೇ ಎನ್ನುತ್ತದೆ ತಂಡ.ಇಂಥ ಪರಿಕಲ್ಪನೆಯ ರಿಯಾಲಿಟಿ ಶೋವನ್ನು ಪೌರಾಣಿಕ ಸೆಟ್‌ನಲ್ಲಿ ಚಿತ್ರೀಕರಿಸಲಾಗುತ್ತಿದೆ. ಯಮಧರ್ಮನಾಗಿ ಗಿರೀಶ್ ಮತ್ತು ಚಿತ್ರಗುಪ್ತನಾಗಿ ನಟ ಮಂಡ್ಯ ರಮೇಶ್ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ.ಈ ಶೋನಲ್ಲಿ ಭಾಗವಹಿಸಲು ಯಾವುದೇ  ಚಾನಲ್‌ನ ಕಲಾವಿದರಿಗೆ ಮುಕ್ತ ಅವಕಾಶ ಇದೆ. ಮಾರ್ಚ್ 22ರಿಂದ ಪ್ರತಿ ಗುರುವಾರ ಮತ್ತು ಶುಕ್ರವಾರ ರಾತ್ರಿ 9 ಗಂಟೆಗೆ `ಯಮಲೋಕದಲ್ಲಿ ಪ್ರಾಯಶ್ಚಿತ್ತ~ ಪ್ರಸಾರವಾಗಲಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.