ಶುಕ್ರವಾರ, ನವೆಂಬರ್ 22, 2019
19 °C

ಯರನಾಳ ಶಿವಯೋಗಿಗಳ ಜಾತ್ರೆ ಇಂದಿನಿಂದ

Published:
Updated:

ಬಸವನಬಾಗೇವಾಡಿ: ತಾಲ್ಲೂಕಿನ ಸುಕ್ಷೇತ್ರ ಯರನಾಳ ಗ್ರಾಮದ ಕರ್ತೃ ಜಗದ್ಗುರು ಪಂಪಾಪತಿ ಶಿವಯೋಗಿಗಳ ಜಾತ್ರಾ ಮಹೋತ್ಸವವು ಇದೇ 13ರಿಂದ 15ರ ವರೆಗೆ ಜರುಗ ಲಿದೆ. ಜಾತ್ರೆಯ ಅಂಗವಾಗಿ ಸಾಮೂಹಿಕ ವಿವಾಹ ಹಮ್ಮಿ ಕೊಳ್ಳಲಾಗಿದೆ. ಅಲ್ಲದೇ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.13ರಂದು ಸಂಜೆ 7ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಶಿರುರದ ಡಾ.ಬಸವಲಿಂಗ ಸ್ವಾಮೀಜಿ ಸಾನಿಧ್ಯ ವಹಿಸುವರು. ಮಂಟೂರಿನ ಸದಾನಂದ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಯರನಾಳದ ಸಂಗನಬಸವ ಸ್ವಾಮೀಜಿ ನೇತೃತ್ವ, ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಕಾರ್ಯಕ್ರಮ ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ರಾಜೇಂದ್ರ ಕುಲಕರ್ಣಿ, ರಾಜೇಂದ್ರ ಎಂ.ಪಾಟೀಲ, ಮಲ್ಲಿಕಾರ್ಜುನ ಬೃಂಗಿಮಠ, ಪ್ರಭುಗೌಡ ಪಾಟೀಲ ಭಾಗವಹಿಸುವರು.`ಇಂದಿನ ಜಾಗತಿಕ ಜಗತ್ತಿಗೆ ಬಸವಣ್ಣನವರ ಕೊಡುಗೆ' ವಿಷಯ ಕುರಿತು ಗುಲ್ಬರ್ಗ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಪ್ರೊ. ಸಂಜಯ ಮಾಕಲ್ ಉಪನ್ಯಾಸ ನೀಡುವರು.14ರಂದು ಬೆಳಿಗ್ಗೆ 11ಕ್ಕೆ ಸರ್ವಧರ್ಮ ಬಡಕುಟುಂಬಗಳ ಸಹಾಯಾರ್ಥ ಹಮ್ಮಿಕೊಂಡಿರುವ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನಿಧ್ಯವನ್ನು ಚಿತ್ರದುರ್ಗ ಬೃಹನ್ಮಠದ ಡಾ. ಶಿವಮೂರ್ತಿ ಮುರುಘರಾಜೇಂದ್ರ ಶರಣರು ವಹಿಸುವರು.ಬಂಥನಾಳದ ವೃಷಭಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು.ಕಾರ್ಯಕ್ರಮದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು, ಜಿ.ಪಂ ಸದಸ್ಯ ಚಂದ್ರಶೇಖರ ಗೌಡ ಪಾಟೀಲ, ತಹಶೀಲ್ದಾರ್ ಅಪರ್ಣಾ ಪಾವಟೆ, ತಾ.ಪಂ ಅಧ್ಯಕ್ಷೆ ರೇಣುಕಾ ವಾಲಿಕಾರ, ಆಯುಷ್ ಬೋರ್ಡ್‌ನ ಸದಸ್ಯ ಡಾ.ಬಸನಗೌಡ ಪಾಟೀಲ, ಹಾಸಿಂ ಪೀರ್ ವಾಲಿಕಾರ ಉಪಸ್ಥಿತರಿರುವರು. `ಸುಂದರ ಬದುಕು' ವಿಷಯ ಕುರಿತು ಸಾಹಿತಿ ಅಶೋಕ ಹಂಚಲಿ ಉಪನ್ಯಾಸ ನೀಡುವರು.ಸಂಜೆ 6-30ಕ್ಕೆ  ಗುರುಸಂಗನಬಸವ ಸ್ವಾಮೀಜಿ ಅವರ 39ನೇ ಜನ್ಮದಿನದ ಅಂಗವಾಗಿ ನಾಣ್ಯಗಳಿಂದ ಪೂಜ್ಯರಿಗೆ ತುಲಾಭಾರ ಹಾಗೂ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಂತರ ವಚನ ನೃತ್ಯ ವೈಭವ, ಮಕ್ಕಳಿಗಾಗಿ ಜಾದೂ ಕಾರ್ಯಕ್ರಮ ಹಾಗೂ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.ಇದೇ 15ರಂದು ಬೆಳಿಗ್ಗೆ 10-30 ಕ್ಕೆ ಗುರು ಸಂಗನಬಸವ ಮಹಾಸ್ವಾಮೀಜಿ ಇವರ ಪಾದಪೂಜಾ ಕಾರ್ಯಕ್ರಮ ನಂತರ ಸಿಂಹಾಸನಾರೋಹಣ ಹಾಗೂ ಕಿರೀಟ ಧಾರಣೆ ಕಾರ್ಯಕ್ರಮ ಜರುಗುವುದು.ಕಾರ್ಯಕ್ರಮದಲ್ಲಿ ಮಮದಾಪುರ ವಿರಕ್ತಮಠದ ಮುರುಘೇಂದ್ರ ಸ್ವಾಮೀಜಿ, ದೇವರಹಿಪ್ಪರಗಿ ಗದ್ದುಗೆಮಠದ ಮಹಾಂತ ಸ್ವಾಮೀಜಿ  ಉಪಸ್ಥಿತರಿರುವರು.ಮಧ್ಯಾಹ್ನ 3-30ಕ್ಕೆ ಹಂಗರಗಿ ಗ್ರಾಮದಿಂದ ಆಗಮಿಸಿದ ಮಹಾಕಳಸದ ಮೆರವಣಿಗೆ ಮತ್ತು ಕುಂಭೋತ್ಸವ ಜರುಗು ವುದು. ಸಂಜೆ 4-30ಕ್ಕೆ ಮಹಾರಥೋತ್ಸವ ನಡೆಯಲಿದೆ.ಸಂಜೆ 7ಕ್ಕೆ ನಡೆಯಲಿರುವ ಸರ್ವಧರ್ಮ ಸಮ್ಮೇಳನ ಹಾಗೂ ಸನ್ಮಾನ ಸಮಾರಂಭವನ್ನು ನಿಡುಮಾಮಿಡಿಯ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಉದ್ಘಾಟಿಸುವರು. ಸಂಗನಬಸವ ಸ್ವಾಮೀಜಿ ನೇತೃತ್ವ, ದಾವಣಗೆರೆಯ ಮೌಲಾನಾ ಇಬ್ರಾಹಿಂ ಜಕಾತಿ, ವಿಜಾಪುರ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಬ್ರಹ್ಮಕುಮಾರಿ ಸರೋಜಾ, ಜಿ.ಪಂ ಅಧ್ಯಕ್ಷೆ ಕಾವ್ಯಾ ದೇಸಾಯಿ ಮುಂತಾದವರು ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರನ್ನು ಸನ್ಮಾನಿಸಲಾಗು ವುದು ಎಂದು ಜಾತ್ರಾ ಕಮಿಟಿ ತಿಳಿಸಿದೆ.

ಪ್ರತಿಕ್ರಿಯಿಸಿ (+)