ಶುಕ್ರವಾರ, ಮೇ 27, 2022
27 °C

ಯಲುವಹಳ್ಳಿ ಗಿಳಿಗಳ ಧಾಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಮಾನ್ಯವಾಗಿ ಪಂಜರ, ಪ್ರಾಣಿ ಸಂಗ್ರಹಾಲಯ ಅಥವಾ ಸರ್ಕಸ್‌ಗಳಲ್ಲಿ ಬಣ್ಣಬಣ್ಣದ ಗಿಳಿಗಳ ಕಸರತ್ತು ಕಣ್ಣಿಗೆ ಬೀಳುತ್ತವೆ. ಕಂಡು ಬರುವುದು 5 ರಿಂದ 10 ಗಿಳಿಗಳು ಮಾತ್ರ. ಆದರೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಯಲುವಹಳ್ಳಿ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಗಿಳಿಗಳು ಒಂದೇ ಕಡೆ ಕಾಣಬಹುದು.ಇತ್ತೀಚಿನ ದಿನಗಳಲ್ಲಿ ಅಪರೂಪವಾಗುತ್ತಿರುವ ಹಸಿರು ಬಣ್ಣದ, ವಿಶಿಷ್ಟ ರೀತಿಯ ಕೊಕ್ಕಿನ ಗಿಳಿಗಳನ್ನು ನೋಡಬೇಕಿದ್ದರೆ, ಯಲುವಹಳ್ಳಿ ಗ್ರಾಮಕ್ಕೆ ಬೆಳಿಗ್ಗೆಬೆಳಿಗ್ಗೇನೆ ಭೇಟಿ ನೀಡಬೇಕು. ಬೆಳಿಗ್ಗೆ 6 ಗಂಟೆ ಸುಮಾರಿಗೆ ಗ್ರಾಮದ ಕಾಗಿಜೋಳದ ತೋಟದ ಬಳಿ ಮರೆಯಾಗಿ ನಿಂತುಕೊಂಡಲ್ಲಿ, ಗುಂಪುಗುಂಪಾಗಿ ಹಾರಿಕೊಂಡು ಬರುವ ಗಿಳಿಗಳನ್ನು ನೋಡಬಹುದು. ಒಂದೇ ಕಡೆ ದೀರ್ಘಕಾಲದವರೆಗೆ ನಿಲ್ಲದ ಗಿಳಿಗಳು ಕ್ಷಣಮಾತ್ರದಲ್ಲೇ ಜೋಳದ ಕಾಳುಗಳನ್ನು ಕೊಕ್ಕಿನಲ್ಲಿ ಸಿಗಿಸಿಕೊಂಡು ನೋಡುವುದು ಕಣ್ಣುಗಳಿಗೆ ಹಬ್ಬ.ಜಾನುವಾರುಗಳಿಗಾಗಿ ಬೆಳೆಯುವ ಕಾಗಿಜೋಳದ ಕಾಳುಗಳು ಗಿಳಿಗಳಿಗೆ ಅಚ್ಚುಮೆಚ್ಚು.  ಅದಕ್ಕಾಗಿ ಭಾರಿ ಸಂಖ್ಯೆಯಲ್ಲಿ ಇಲ್ಲಿ ಉಳಿದುಕೊಂಡಿದ್ದು, ಬೆಳಿಗ್ಗೆ ಮತ್ತು ಸಂಜೆ ವೇಳೆ ಕಾಳುಗಳನ್ನು ಸವಿಯಲು ಬರುತ್ತವೆ.ಸೂರ್ಯ ಮುಳುಗುವ ಹೊತ್ತು ಸಮೀಪಿಸುತ್ತಿದ್ದಂತೆ ಅವು ತೆಂಗಿನಮರಗಳ ಪೊಟರೆಗಳಲ್ಲಿ ಸೇರಿಕೊಳ್ಳುತ್ತವೆ. ಮತ್ತೆ ಸೂರ್ಯ ಉದಯಿಸುತ್ತಿದ್ದಂತೆಯೇ ಹೊರಬರುವ ಗಿಳಿಗಳು ತೋಟದ ಆವರಣದಲ್ಲಿ ಒಂದು ಸುತ್ತು ಹಾಕಿ ಕೊಕ್ಕಿನಲ್ಲಿ ಕಾಳುಗಳನ್ನು ಸಿಗಿಸಿಕೊಂಡು ಸಮೀಪದ ಮರಗಳತ್ತ ಹಾರುತ್ತವೆ.` ಕಾಗಿಜೋಳವು ಹೆಚ್ಚಿನ ಜನರಿಗೆ ಪ್ರಯೋಜನವಾಗದಿದ್ದರೂ ಜಾನುವಾರುಳಿಗೆ ಮತ್ತು ಪಕ್ಷಿಗಳಿಗೆ ಆಹಾರವಾಗಿ ಅದು ತುಂಬ ಉಪಯುಕ್ತ. ಕೆಲ ದಿನಗಳಿಂದ ಕಾಗಿಜೋಳದ ಕಾಳುಗಳನ್ನು ಸವಿಯಲು ಗಿಳಿಗಳು ಬಂದಿರುವುದು ಅಚ್ಚರಿ ಮೂಡಿಸಿದೆ~ ಎನ್ನುತ್ತಾರೆ ತೋಟದ ರೈತ ಮೂರ್ತಿ.`ತುಂಬ ಸೂಕ್ಷ್ಮಜೀವಿಗಳಾದ ಗಿಳಿಗಳು ಮನುಷ್ಯರನ್ನು ನೋಡಿಬಿಟ್ಟರೆ, ದೂರಕ್ಕೆ ಹೋಗಿ ಬಿಡುತ್ತವೆ. ಮನುಷ್ಯರು ತೋಟದಿಂದ ಕದಲುವವರೆಗೆ ಮತ್ತು ಯಾವುದೇ ರೀತಿಯ ಅಪಾಯ ಇಲ್ಲವೆಂದು ಮನದಟ್ಟು ಆಗುವವರೆಗೆ ಅವು ಪುನಃ ಆ ಸ್ಥಳಕ್ಕೆ ಬರುವುದಿಲ್ಲ~ ಎಂದು ತಿಳಿಸಿದರು.ಇಲ್ಲಿನ ಜನರಲ್ಲಿ ಗಿಳಿಗಳು ಕೌತುಕ ಮೂಡಿಸಿವೆ. ಅವು ಗುಂಪುಗುಂಪಾಗಿ ಕಾಗಿಜೋಳದ ಕಾಳುಗಳು ತಿನ್ನುವುದು ಮತ್ತು ಒಟ್ಟಿಗೆ ಹಾರುವುದು ನೋಡಲೆಂದೇ ಗ್ರಾಮಸ್ಥರು ತೋಟಕ್ಕೆ ಬರುತ್ತಿದ್ದಾರೆ. ಯಲುವಹಳ್ಳಿ ಗ್ರಾಮವು `ಗಿಳಿಗಳ ಧಾಮ~ವಾಗಿ ಮಾರ್ಪಡುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.