ಗುರುವಾರ , ಅಕ್ಟೋಬರ್ 17, 2019
28 °C

ಯಲ್ಲಮ್ಮನ ಗುಡ್ಡದಲ್ಲಿ ಬನದ ಹುಣ್ಣಿಮೆ ಸಂಭ್ರಮ

Published:
Updated:

ಸವದತ್ತಿ: ಇಲ್ಲಿನ ಪುಣ್ಯ ಕ್ಷೇತ್ರ ರೇಣುಕಾದೇವಿ ಯಲ್ಲಮ್ಮನಗುಡ್ಡದಲ್ಲಿ ಲಕ್ಷಾಂತರ ಭಕ್ತರು ಸೋಮವಾರ `ಬನದ ಹುಣ್ಣಿಮೆ~ ನಿಮಿತ್ತ ದೇವಿಯ ದರ್ಶನ ಪಡೆದರು.ಗುಡ್ಡದಲ್ಲಿ ಭಕ್ತರು ಅಲ್ಲಲ್ಲಿ ತಾತ್ಕಾಲಿಕ ಶೆಡ್ಡುಗಳನ್ನು ನಿರ್ಮಿಸಿಕೊಂಡು, ಬಿಸಿಲನ್ನೂ ಲೆಕ್ಕಿಸದೆ ಕರಿಗಡಬು ಮಾಡುತ್ತ ದೇವಿಗೆ ಅರ್ಪಿಸುವ ದೃಶ್ಯ ಕಂಡು ಬಂತು.ದೇವಸ್ಥಾನದ ಪ್ರಾಂಗಣದ ಸುತ್ತ ಭಕ್ತರು ದೇವಿಯ ಜಗ (ಮೂರ್ತಿ)ವನ್ನು ಹೊತ್ತು ಭಂಡಾರ ಎರಚುತ್ತ ಸಾಗುತ್ತಿದ್ದರು.ವಾದ್ಯಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತ  ಸಾಗುವ ದೃಶ್ಯ ಸಾಮಾನ್ಯವಾಗಿತ್ತು.

 

Post Comments (+)