ಶುಕ್ರವಾರ, ಜೂನ್ 18, 2021
26 °C

ಯಲ್ಲಾಪುರ: ಹುಲಿ ಹಾವಳಿ, ಭಯಭೀತ ಗ್ರಾಮಸ್ಥರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲ್ಲಾಪುರ (ಉ.ಕ.ಜಿಲ್ಲೆ): ತಾಲ್ಲೂಕಿನ ಆನಗೋಡ ಗ್ರಾಮ ಪಂಚಾಯ್ತಿ  ವ್ಯಾಪ್ತಿಯ ತಟಗಾರ, ಹುಟಕಮನೆ, ಮೂಲೆಗುಂಡ್ಕಲ್ ಮುಂತಾದ ಭಾಗಗಳಲ್ಲಿ ಹುಲಿಗಳು ಕಾಣಿಸಿಕೊಂಡಿದ್ದು, ಜನರಲ್ಲಿ ಭಯ ಮೂಡಿದೆ. ಈಗಾಗಲೇ ಈ ಭಾಗದಲ್ಲಿ ಸಾಕಿದ ನಾಯಿಗಳನ್ನು ಬಲಿ ತೆಗೆದುಕೊಂಡ ಹುಲಿಗಳು ಇದೀಗ ದನಗಳನ್ನು ಹಿಡಿದು ತಿನ್ನುವುದಕ್ಕೆ ಪ್ರಾರಂಭಿಸಿರುವುದು ಆತಂಕ ಮೂಡಿಸಿದೆ. ಒಂದು ಚಿರತೆ, ಒಂದು ಕಪ್ಪು ಚಿರತೆ, 2 ದೊಡ್ಡ ಹುಲಿಗಳು ಮಧ್ಯಾಹ್ನ, ಸಂಜೆಯ ವೇಳೆ ಓಡಾಡುವುದನ್ನು ಕಂಡು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.ನಾಯಿ ಮತ್ತು ದನಗಳನ್ನು ತಿನ್ನುತ್ತಿರುವ ಹುಲಿಗಳು ಮನುಷ್ಯನ ಮೇಲೂ ದಾಳಿ ಮಾಡಬಹುದು ಎಂಬ ಆತಂಕ ಉಂಟಾಗಿದೆ. ಶಾಲೆಗೆ ಹೋದ ಮಕ್ಕಳು ಸಂಜೆ ಕಾಡಿನ ಮೂಲಕ ಹಾಯ್ದು ಬರಬೇಕಾಗಿರುವುದರಿಂದ ಪಾಲಕರು ಆತಂಕಕ್ಕೊಳಗಾಗಿದ್ದಾರೆ.

ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ರವಿ ಕಣ್ಣಿ ಮತ್ತಿತರ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.