ಮಂಗಳವಾರ, ಏಪ್ರಿಲ್ 20, 2021
31 °C

ಯಳಂದೂರು ನ್ಯಾಯಾಲಯ ಕಟ್ಟಡಕ್ಕೆ ರೂ. 2.5 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಳಂದೂರು: ಪಟ್ಟಣದಲ್ಲಿ ತಾಲ್ಲೂಕು ನ್ಯಾಯಾಲಯದ ಕಟ್ಟಡ ನಿರ್ಮಣಕ್ಕಾಗಿ ರಾಜ್ಯ ಸರ್ಕಾರದಿಂದ 2.5 ಕೋಟಿ ಅನುದಾನ ಬಿಡುಗಡೆಯಗಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎ.ಸಿ. ವಿದ್ಯಾಧರ್ ರವರು ತಿಳಿಸಿದರು. ಗುರುವಾರ ಪಟ್ಟಣದ ನ್ಯಾಯಾಲಯದ ಕಟ್ಟಡ ನಿರ್ಮಾಣ ಮಾಡಲು ಜಿಲ್ಲಾ ಧಿಕಾರಿಗಳಿಂದ ಮಂಜೂರಾಗಿದ್ದ ನಿವೇಶನ ಪರಿಶೀಲಿಸಿ ಅವರು ಮಾತನಾಡಿದರು.ಯಳಂದೂರು ತಾಲ್ಲೂಕು ರಾಜ್ಯದಲ್ಲೇ ಚಿಕ್ಕ ತಾಲ್ಲೂಕು ಕೇಂದ್ರ. ಇಲ್ಲಿನ ನ್ಯಾಯಾಲಯ ಇದೂ ವರೆಗೂ ಸ್ವಂತ ಕಟ್ಟಡ ಹೊಂದಿರಲಿಲ್ಲ. ಜಾಗದ ಕೊರತೆಯಿಂದ ತಾತ್ಕಾಲಿಕವಾಗಿ ತಾಲ್ಲೂಕು ದಂಡಾಧಿಕಾರಿಗಳ ಕಚೇರಿಯ ಮೆಲ್ಬಾಗದಲ್ಲಿ ಕಲಾಪ ನಡೆಯುತ್ತಿದ್ದವು. ಪ್ರತ್ಯೇಕ ನ್ಯಾಯಾಲಯದ ಕಟ್ಟಡ ನಿರ್ಮಾಣಕ್ಕಾಗಿ ಸಾರ್ವಜನಿಕರಿಂದ ಸಾಕಷ್ಟು ದೂರು, ಒತ್ತಡ ಬಂದಿದ್ದವು. ಈ ಹಿನ್ನೆಲೆಯಲ್ಲಿ ಯಳಂದೂರು ಪಪಂ ಸದಸ್ಯರು ಒಕ್ಕೊರಲ ದ್ವನಿಯಿಂದ ಒಂದು ಎಕರೆ ಜಮೀನು ಕಟ್ಟಡ ನಿರ್ಮಾಣಕ್ಕೆ ಬಿಟ್ಟುಕೊಟ್ಟಿದ್ದಾರೆ ಎಂದರು.ಕೂಡಲೇ ಒಂದು ಎಕರೆ ವಿಸ್ತೀರ್ಣದಲ್ಲಿ ಅತ್ಯಾಧುನಿಕ ಸೌಲಭ್ಯಗಳು ಉಳ್ಳ ಸುಸಜ್ಜಿತ ಕಟ್ಟಡವನ್ನು 2.5 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಿದ್ದು, ನೂತನ ನ್ಯಾಯಾಲಯ ಕಟ್ಟಡದಲ್ಲಿ ಮಹಿಳೆ/ಪುರುಷರಿಗೆ ಪ್ರತ್ಯೇಕ ಶೌಚಾಲಯ, ವಿಶ್ರಾಂತಿ ಕೊಠಡಿ, ದೊಡ್ಡ ಕೋರ್ಟ್ ಸಭಾಂಗಣ, ವಾಹನ ನಿಲುಗಡೆ ವ್ಯವಸ್ಥೆ, ವಕೀಲರ ವಿಶ್ರಾಂತಿ ಕೊಠಡಿ, ಗ್ರಂಥಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಹಲವು ಸೌಲಭ್ಯಗಳು ಸಾರ್ವಜನಿಕರಿಗೆ ದೊರಕಲಿವೆ. ಕೂಡಲೇ ಕಾಮಗಾರಿ ಪ್ರಾರಂಭಗೊಂಡು 2012ರ ವೇಳೆಗೆ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಲಿದೆ ಎಂದರು.ಚಾಮರಾಜನಗರದ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಗಂಗಣ್ಣನವರ್, ತಾಲ್ಲೂಕು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಎಚ್.ಎ. ಶಿಲ್ಪ, ತಹಶೀಲ್ದಾರ್ ಹನುಮಂತರಾಯಪ್ಪ, ಪಪಂ ಅಧ್ಯಕ್ಷೆ ಮೀನಾಕ್ಷಿ ಮಹದೇವಸ್ವಾಮಿ, ಮುಖ್ಯಾಧಿಕಾರಿ ಶೀನನಾಯಕ್, ಎಂಜಿನಿಯರ್ ನಾಗೇಂದ್ರ, ಶಿರಸ್ತೇದಾರರಾದ ಎಂ. ನಾಗರಾಜು, ನಂಜುಂಡಯ್ಯ, ವಕೀಲರಾದ ಅಂಬಳೆ ಜೈಶಂಕರ್, ಕೃಷ್ಣ, ಸಿ.ಆರ್. ನಾಗರಾಜ, ಸಿದ್ದರಾಜು, ಸಿದ್ದರಾಮು, ಚಿನ್ನಸ್ವಾಮಿ, ಎನ್. ನಾಗರಾಜು, ಜಿ.ಎನ್. ನಾಗರಾಜು, ವಿರೇಶ. ಎಂ, ಸಿ. ಮಹದೇವಸ್ವಾಮಿ, ಪ್ರಶಾಂತ್, ಅಶ್ವಿನ್‌ಕುಮಾರ್, ಕೆ. ಸ್ವಾಮಿ, ಮಾಲತಿ, ಬೋಳನಾಯಕ, ವಸಂತನಾಯಕ, ,ಅರುಣ್, ರಾಜೇಶ್ವರಿ, ಸರ್ಕಲ್ ಇನ್ಸ್‌ಪೆಕ್ಟರ್ ಸುರೇಶ್ ಬಾಬು, ಸಬ್ ಇನ್ಸ್‌ಪೆಕ್ಟರ್ ಮಹದೇವನಾಯಕ, ಮಹದೇವಪ್ಪ, ಮರಯ್ಯ ಇತರರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.