ಭಾನುವಾರ, ಮೇ 16, 2021
24 °C

ಯಶವಂತಪುರದ ಅಂಚೆ ಡಬ್ಬಿಯಿಂದ ಬೆದರಿಕೆ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ತಾಜ್ ವಿವಾಂತ್ ಹೋಟೆಲ್‌ಗೆ ಬುಧವಾರ ಹೋಗಿರುವ ನಾಲ್ಕು ಪುಟಗಳ ಬೆದರಿಕೆ ಪತ್ರ, ಯಶವಂತಪುರ ಸಮೀಪದ ಅಂಚೆ ಡಬ್ಬಿಯಿಂದಲೇ ರವಾನೆಯಾಗಿದೆ' ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.`ಪೀಣ್ಯದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ವಾಹನ ನಿಲುಗಡೆ ಸ್ಥಳದಲ್ಲಿ ಬುಧವಾರವೇ ಎರಡು ಬೆದರಿಕೆ ಪತ್ರಗಳು ಸಿಕ್ಕಿವೆ. ಕಿಡಿಗೇಡಿಗಳು ಆ ಪತ್ರಗಳನ್ನು ಕಾಂಪೌಂಡ್ ಪಕ್ಕದಿಂದಲೇ ಒಳಗೆ ಎಸೆದಿರುವ ಸಾಧ್ಯತೆ ಇದೆ. ಆದರೆ, ಯಶವಂತಪುರದ ತಾಜ್ ವಿವಾಂತ್ ಹೋಟೆಲ್‌ಗೆ ಕಿಡಿಗೇಡಿಗಳು ಅಂಚೆ ಮೂಲಕ ಪತ್ರ ಕಳುಹಿಸಿದ್ದಾರೆ.

ಈ ಬಗ್ಗೆ ಪರಿಶೀಲಿಸಿದಾಗ, ಪತ್ರ ಹೋಟೆಲ್‌ನ ಸಮೀಪದಲ್ಲೇ ಇರುವ ಅಂಚೆ ಡಬ್ಬಿಯಿಂದ ರವಾನೆಯಾಗಿರುವುದು ಗೊತ್ತಾಗಿದೆ. ಆರೋಪಿಗಳ ಸುಳಿವು ಸಿಕ್ಕಿದ್ದು, ಶೀಘ್ರವೇ ಬಂಧಿಸಲಾಗುವುದು' ಎಂದು ಪ್ರಕರಣ ತನಿಖೆ ನಡೆಸುತ್ತಿರುವ ಅಧಿಕಾರಿಗಳು `ಪ್ರಜಾವಾಣಿ'ಗೆ ತಿಳಿಸಿದರು.`ಆ ಬೆದರಿಕೆ ಪತ್ರದಲ್ಲಿ ಕಿಡಿಗೇಡಿಗಳು, “2103”ರ ಜೂನ್ 20 ಹಾಗೂ 21ರಂದು ನಗರದಲ್ಲಿ ವಿಧ್ವಂಸಕ ಕೃತ್ಯ ಎಸಗುತ್ತೇವೆ ಎಂದು ಇಸವಿಯನ್ನೂ ತಪ್ಪಾಗಿ ಬರೆದಿದ್ದಾರೆ. ಅಲ್ಲದೇ, ಇಂಗ್ಲೀಷ್ ಪುಟದ ಸಾರಾಂಶಕ್ಕೂ ಉರ್ದು ಪುಟಗಳಲ್ಲಿರುವ ಸಾರಾಂಶಕ್ಕೂ ಸಂಬಂಧವಿಲ್ಲ. ಭಯ ಹುಟ್ಟಿಸಲು ಈ ಕೃತ್ಯ ಎಸಗಿದ್ದಾರೆ' ಎಂದು ಪೊಲೀಸರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.