ಯಶವಂತಪುರ-ಕಾರವಾರ ರಾತ್ರಿ ರೈಲು ಆರಂಭ

7

ಯಶವಂತಪುರ-ಕಾರವಾರ ರಾತ್ರಿ ರೈಲು ಆರಂಭ

Published:
Updated:

ಮಂಗಳೂರು:`ಕಾರವಾರ- ಬೆಂಗಳೂರು ನಡುವೆ ಶೀಘ್ರ ಪೂರ್ಣ ಪ್ರಮಾಣದ ರೈಲು ಸಂಚಾರ ಆರಂಭಿಸಲಾಗುವುದು~ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.ಕಾರವಾರಕ್ಕೆ ವಿಸ್ತರಣೆಗೊಂಡಿರುವ ಯಶವಂತಪುರ- ಕಣ್ಣೂರು ರೈಲಿನ 13 ಬೋಗಿಗಳಿಗೆ ಹಸಿರು ನಿಶಾನೆ ತೋರುವ ಸಲುವಾಗಿ ಮಂಗಳೂರು ಕೇಂದ್ರೀಯ ರೈಲು ನಿಲ್ದಾಣದಲ್ಲಿ ಗುರುವಾರ ಬೆಳಿಗ್ಗೆ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.`ರೈಲ್ವೆ ಇಲಾಖೆ ಕಾರವಾರ ಹಾಗೂ ಕಣ್ಣೂರು  ಪಾಲಿಗೆ ಎರಡು ಕಣ್ಣುಗಳಿದ್ದಂತೆ. ಎರಡೂ ನಗರಗಳನ್ನು ಇಲಾಖೆ ಸಮಾನವಾಗಿ ನೋಡುತ್ತದೆ. ಎರಡೂ ನಗರಗಳಿಗೂ ಪ್ರತ್ಯೇಕ ರೈಲು ಸೇವೆ ಒದಗಿಸಲಾಗುವುದು. ತಿರುನಲ್ವೇಲಿ- ದಾದರ್ ನಡುವೆ ಶೀಘ್ರವೇ ಹೊಸ ರೈಲು ಯಾನ ಆರಂಭವಾಗಲಿದೆ~ ಎಂದರು.ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಮಂಗಳೂರು ನಿಲ್ದಾಣದಿಂದ ಮೊದಲ ಬಾರಿಗೆ ಕಾರವಾರಕ್ಕೆ ಪ್ರಯಾಣ ಬೆಳೆಸಿದ ರೈಲಿಗೆ ಹಸಿರು ನಿಶಾನೆ ತೋರಿದರು.ಸಡಗರದ ಸ್ವಾಗತ:ಬೆಂಗಳೂರಿನಿಂದ ಬಂದ ರೈಲಿನ 13 ಬೋಗಿಗಳನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಿಂಗರಿಸಿ ಕಾರವಾರಕ್ಕೆ ಕಳುಹಿಸಿಕೊಡಲಾಯಿತು. ಕರಾವಳಿಯುದ್ದಕ್ಕೂ ವಿವಿಧ ರೈಲು ನಿಲ್ದಾಣಗಳಲ್ಲಿ ಸ್ಥಳೀಯರು ರೈಲನ್ನು ಸಡಗರದಿಂದ ಸ್ವಾಗತಿಸಿದರು.

ನಾಳೆ ಹುಬ್ಬಳ್ಳಿ- ಬೆಂಗಳೂರು

ಪ್ಯಾಸೆಂಜರ್ ರೈಲು  ಸಂಚಾರ ರದ್ದು

ಹುಬ್ಬಳ್ಳಿ:ಮೈಸೂರು ವಿಭಾಗದ ಬೀರೂರು- ಶಿವನಿ ಮಾರ್ಗದ ನಾಗಮಂಗಲ ನಿಲ್ದಾಣ ಬಳಿ ಹಳಿ ಪರಿವರ್ತನೆ ಕಾಮಗಾರಿ ಹಮ್ಮಿಕೊಂಡಿರುವ ಕಾರಣ ಹುಬ್ಬಳ್ಳಿ- ಬೆಂಗಳೂರು ಪ್ಯಾಸೆಂಜರ್ (56516) ಹಾಗೂ ಬೆಂಗಳೂರು- ಹುಬ್ಬಳ್ಳಿ ಪ್ಯಾಸೆಂಜರ್ (56915) ರೈಲುಗಳ ಸಂಚಾರವನ್ನು ಇದೇ 20ರಂದು ಸಂಪೂರ್ಣ ರದ್ದು ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.  ಅಂದು ಮಧ್ಯಾಹ್ನ 12.10 ರಿಂದ ಸಂಜೆ 4.10ರವರೆಗೆ ಕಾಮಗಾರಿಗೆ ಅನುಮತಿ ಪಡೆಯಲಾಗಿದೆ  ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry