ಯಶವಂತಪುರ- ತಿರುಚಿನಾಪಳ್ಳಿ ವಿಶೇಷ ರೈಲು

7

ಯಶವಂತಪುರ- ತಿರುಚಿನಾಪಳ್ಳಿ ವಿಶೇಷ ರೈಲು

Published:
Updated:

ಹುಬ್ಬಳ್ಳಿ: ದಸರಾ ಹಾಗೂ ದೀಪಾವಳಿ ಹಿನ್ನೆಲೆಯಲ್ಲಿ ಯಶವಂತಪುರ ಹಾಗೂ ತಿರುಚಿನಾಪಳ್ಳಿ ಮಧ್ಯೆ ನೈರುತ್ಯ ರೈಲ್ವೆ ವಿಶೇಷ ರೈಲು ಸಂಚಾರ ಆರಂಭಿಸಲಿದೆ.ಯಶವಂತಪುರದಿಂದ ಪ್ರತಿ ಶನಿವಾರ ರಾತ್ರಿ 11.55ಕ್ಕೆ ಹೊರಡಲಿರುವ ರೈಲು (06521) ಮರುದಿನ ಬೆಳಿಗ್ಗೆ 10 ಗಂಟೆಗೆ ತಿರುಚಿನಾಪಳ್ಳಿ ತಲುಪಲಿದೆ. ತಿರುಚಿನಾಪಳ್ಳಿಯಿಂದ ಪ್ರತಿ ಭಾನುವಾರ ಮಧ್ಯಾಹ್ನ 12.30ಕ್ಕೆ ಹೊರಡುವ ರೈಲು (06522) ರಾತ್ರಿ 10 ಗಂಟೆಗೆ ಯಶವಂತಪುರ ತಲುಪಲಿದೆ ಎಂದು ತಿಳಿಸಲಾಗಿದೆ.ಹೆಚ್ಚುವರಿ ಬೋಗಿಗಳು: ಮೈಸೂರು- ಅಜ್ಮೀರ್ ರೈಲಿಗೆ (16210/16209) ಕಾಂಯಂ ಆಗಿ ಹೆಚ್ಚುವರಿ ದ್ವಿತೀಯ ದರ್ಜೆ ಸ್ಲೀಪರ್ ಬೋಗಿ, ಹೌರಾ- ಮೈಸೂರು ರೈಲು (22817/22818), ದಿಬ್ರುಗಢ್- ಯಶವಂತಪುರ ರೈಲು (15902/15901), ಹೌರಾ- ವಾಸ್ಕೋಡ ಗಾಮ ರೈಲು (18047/18048) ಹಾಗೂ ಹೌರಾ- ಮೈಸೂರು ರೈಲಿಗೆ (22817/22818) ಶಾಶ್ವತವಾಗಿ ಹೆಚ್ಚುವರಿ ಎಸಿ 3-ಟೈರ್ ಬೋಗಿ ಅಳವಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.ನವದೆಹಲಿ ಸರಾಯ್ ರೊಹಿಲ್ಲಾ- ಯಶವಂತಪುರ ರೈಲಿಗೆ (12214/12213) ತಾತ್ಕಾಲಿಕವಾಗಿ ಎರಡು ಹೆಚ್ಚುವರಿ ಎಸಿ 2-ಟೈರ್ ಬೋಗಿಯನ್ನು ಅಳವಡಿಸಲಾಗಿದೆ ಎಂದು ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry