ಬುಧವಾರ, ಮೇ 12, 2021
18 °C

ಯಶಸ್ವಿ ದ್ರಾಕ್ಷಿ ಕೃಷಿಕ

-ಆದರ್ಶ ಪೈ . Updated:

ಅಕ್ಷರ ಗಾತ್ರ : | |

ಯಶಸ್ವಿ ದ್ರಾಕ್ಷಿ ಕೃಷಿಕ

ದ್ರಾಕ್ಷಿ ಬೆಳೆಗೆ ನಾಜೂಕತನ ಮುಖ್ಯ. ಆದ್ದರಿಂದ ಈ ಬೆಳೆಯನ್ನು ಬೆಳೆಯುವ ರೈತರ ಸಂಖ್ಯೆ ತುಂಬಾ ಕಡಿಮೆ. ಆದರೆ ಈ ಬೆಳೆಯನ್ನು ಬೆಳೆದು ಯಶ ಸಾಧಿಸಿದ್ದಾರೆ ಮಹಾರಾಷ್ಟ್ರದ ದಿಂಡೋರಿ ತಾಲ್ಲೂಕಿನ ಹತನೊರು ಹಳ್ಳಿಯ ರೈತ ಯೋಗೇಶ್ ಪವಾರ. ಮೂರು ವರ್ಷಗಳಲ್ಲಿ ನಾಲ್ಕು ಲಕ್ಷ ಆದಾಯ ಪಡೆದಿದ್ದಾರೆ ಇವರು.ಹನಿ ನೀರಾವರಿ ಯೋಜನೆಯನ್ನು ಅಳವಡಿಸಿ ರಾಸಾಯನಿಕ ಗೊಬ್ಬರ ಹಾಗೂ ಆಕಳ ಗೊಬ್ಬರ ಬಳಸಿ ಭೂಮಿಯನ್ನು ಫಲವತ್ತಾಗಿ ಮಾಡಿದ್ದಾರೆ. `ಗಿಡದಿಂದ ಗಿಡಕ್ಕೆ ನಾಲ್ಕೂವರೆ ಅಡಿ ಅಂತರ ಇರಬೇಕು.

ಪೆಂಡಾಲ್ ಪದ್ಧತಿ ಅಥವಾ ಹ್ಯಾಂಗಿಂಗ್ ಪದ್ಧತಿಯಲ್ಲಿ ಬೆಳೆಸಬಹುದು. ಹ್ಯಾಂಗಿಂಗ್ ಪದ್ಧತಿಯಲ್ಲಿ ಬೆಳೆಸಿದ ದ್ರಾಕ್ಷಿ ಬೆಳೆ ಬೇಗ ಹಾಳಾಗದು. ಕೆಲಸವೂ ಸರಳ. ಅಷ್ಟೇ ಅಲ್ಲದೇ ಪ್ರಾಣಿಗಳ ಕಾಟದಿಂದಲೂ ಸುರಕ್ಷಿತವಿರುತ್ತವೆ' ಎನ್ನುತ್ತಾರೆ ಯೋಗೇಶ್.ಸಸಿ ನಾಟಿ ಮಾಡಿದ ಮೇಲೆ ಅದು ದೊಡ್ಡದಾಗುವವರೆಗೆ ಬಿಡಬೇಕು. ದಾಕ್ಷಿ ಬಳ್ಳಿಗೆ ಹಣ್ಣು ಬಿಡುವ ವೇಳೆಯಲ್ಲಿ 8-12 ದಿನಕ್ಕೊಮ್ಮೆ ನೀರು ಸಿಂಪಡಿಸಬೇಕು. ಅಕ್ಟೋಬರ್‌ನಲ್ಲಿ ಹಚ್ಚ ಹಸಿರು ಬಣ್ಣಕ್ಕೆ ಬರುತ್ತದೆ.ಉತ್ತಮ ಗೊಬ್ಬರ ಹಾಕುತ್ತಲೆ ಇರಬೇಕು. ಹೂವು ಬಿಡುವ ಸಮಯದಲ್ಲೂ ರಾಸಾಯನಿಕ ಔಷಧಿ ಸಿಂಪಡಿಸಬೇಕು ಎನ್ನುತ್ತಾರೆ ಇವರು.

-ಆದರ್ಶ ಪೈ .

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.