ಗುರುವಾರ , ನವೆಂಬರ್ 21, 2019
21 °C

ಯಶಸ್ವಿ ನಿರ್ದೇಶಕರು

Published:
Updated:

ದಿ ಸೈಲೆಂಟ್ ವರ್ಲ್ಡ್

ಲೂಯಿಸ್ ಮಾಲೆ ನಿರ್ದೇಶನದ `ದಿ ಸೈಲೆಂಟ್ ವರ್ಲ್ಡ್' ಚಿತ್ರ ತೆರೆ ಕಂಡಿದ್ದು 1956ರಲ್ಲಿ. ನಿರ್ದೇಶಕ ಮಾಲೆಗೆ ಆಗಿನ್ನು 24 ವಯಸ್ಸು.ಸಮುದ್ರದ ಆಳದಲ್ಲಿ ಚಿತ್ರೀಕರಿಸಿದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೂ ಈ ಚಿತ್ರ ಪಾತ್ರವಾಯಿತು.ಅದ್ಭುತ ಕ್ಯಾಮೆರಾ ಕೈಚಳಕಕ್ಕೆ ಹಲವು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಈ ಚಿತ್ರ ಬಾಚಿಕೊಂಡಿತು. 1956ರ ಕ್ಯಾನೆ ಫಿಲಂ ಪ್ರಶಸ್ತಿ ಸೇರಿದಂತೆ ಹಲವು ಅಕಾಡೆಮಿ ಪ್ರಶಸ್ತಿಗಳು ಸಂದವು.ಚಿತ್ರದ ಉದ್ದಕ್ಕೂ ಲೂಯಿಸ್ ಅವರ ಬುದ್ದಿವಂತಿಕೆ ಎದ್ದು ಕಾಣುತ್ತದೆ. ಸಮುದ್ರದಲ್ಲಿರುವ ದೈತ್ಯ ವಿಷ ಜಂತುಗಳನ್ನು ಕೊಲ್ಲುವ ನಾಯಕನ ಸಾಹಸಮಯ ದೃಶ್ಯಗಳು ನೋಡುಗರನ್ನು ರೋಮಾಂಚನಗೊಳಿಸುವುದರಲ್ಲಿ ಎರಡು ಮಾತಿಲ್ಲ.ಸಿನಿಮಾ ತಂತ್ರಜ್ಞಾನ ಅಷ್ಟೊಂದು ಪ್ರವರ್ಧಮಾನಕ್ಕೆ ಬರದಿದ್ದ ಆ ಕಾಲದಲ್ಲೂ ಅದ್ಭುತವಾಗಿ ಸಾಹಸಮಯ ದೃಶ್ಯಗಳನ್ನು ಚಿತ್ರೀಕರಿಸಿದ್ದು ಲೂಯಿಸ್ ಅಗ್ಗಳಿಕೆ.ಮೊದಲ ಸಿನಿಮಾದಲ್ಲೇ ಯಶಸ್ಸು ಕಂಡ ಲೂಯಿಸ್ ತಮ್ಮ ವೃತ್ತಿ ಜೀವನದಲ್ಲಿ ಹಲವು ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವುಗಳಲ್ಲಿ `ಎನ್‌ಪ್ಯಾಂಟಸ್' ಮತ್ತು `ಎಲಿವೆಟರ್ ಟು ದಿ ಗ್ಯಾಲೊಸ್' ಪ್ರಮುಖ ಚಿತ್ರಗಳು.ದಿ 400 ಬೌಲ್ಸ್

60ರ ದಶಕದಲ್ಲಿ ಫ್ರೆಂಚ್ ಸಿನಿಮಾ ರಂಗದಲ್ಲಿ ಹೊಸ ಅಲೆಯನ್ನು ಎಬ್ಬಿಸಿದ ಚಿತ್ರ `ದಿ 400 ಬೌಲ್ಸ್'. ಈ ಚಿತ್ರವನ್ನು ನಿರ್ದೇಶಿಸಿದಾಗ ಫ್ರಾನ್ಸಿಸ್ ಟ್ರುಫ್ಪಾಂಟ್‌ಗೆ 27ರ ಹರೆಯ.ಕಾನೂನಿನೊಂದಿಗೆ ಸಂಘರ್ಷ ನಡೆಸುತ್ತಿರುವ ಬಾಲಕರ ಕಥಾ ಹಂದರದ ಚಿತ್ರವಿದು. 1960 ರಲ್ಲಿ ಫ್ರಾನ್ಸ್‌ನಲ್ಲಿ ಬಾಲಾಪರಾಧಿಗಳು ಎದುರಿಸುತ್ತಿರುವ ಸಮಸ್ಯೆಗಳ ಮೇಲೆ ಈ ಚಿತ್ರ ಬೆಳಕು ಚೆಲ್ಲುತ್ತದೆ. ಹಾಗೇ ನ್ಯಾಯದಾನದಲ್ಲಿ ಉಂಟಾದ ಲೋಪದಿಂದ ಈ ಮಕ್ಕಳು ಹೇಗೆ ಭೂಗತ ಜಗತ್ತನ್ನು ಪ್ರವೇಶಿಸುತ್ತಾರೆ ಎಂಬುದನ್ನು ಟ್ರುಫ್ಪಾಂಟ್ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ.ಈ ಚಿತ್ರಕ್ಕೆ 1960ರ ಕ್ಯಾನೆ ಸಿನಿಮಾ ಪ್ರಶಸ್ತಿ ಹಾಗೂ ಟ್ರುಫ್ಪಾಂಟ್‌ಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸಂದಿದೆ.ಸಣ್ಣಪುಟ್ಟ ಕಳ್ಳತನಗಳನ್ನು ಮಾಡುತ್ತಿದ್ದ ಮಕ್ಕಳನ್ನು ಪೊಲೀಸರು ಎಳೆದು ತಂದು ಜೈಲಿನಲ್ಲಿ ಹಾಕುತ್ತಾರೆ. ಅವರನ್ನು ಬಂದರು ಸ್ಥಳಕ್ಕೆ ಕರೆದೊಯ್ದು ದುಡಿಸಿಕೊಳ್ಳುತ್ತಾರೆ. ಹೀಗೆ ದುಡಿಯುವ ಮಕ್ಕಳಿಗೆ ಸರಿಯಾಗಿ ಊಟ ಮತ್ತು ಬಟ್ಟೆಯನ್ನು ನೀಡುತ್ತಿರಲಿಲ್ಲ. ಹಾಗಾಗಿ ಆ ಮಕ್ಕಳು ಅಲ್ಲಿಂದ ತಪ್ಪಿಸಿಕೊಂಡು ಹಡಗುಗಳ ಮೂಲಕ ಬೇರೆ ಬೇರೆ ದೇಶಗಳಿಗೆ ಪರಾರಿಯಾಗುತ್ತಿರುತ್ತಾರೆ.ಈ ಚಿತ್ರ ಫ್ರಾನ್ಸ್‌ನಲ್ಲಿ ಸಂಚಲನ ಉಂಟುಮಾಡುತ್ತದೆ. ಅಂದಿನ ಸರ್ಕಾರ ಈ ಬಗ್ಗೆ ತನಿಖೆ ನಡೆಸಲು ಆದೇಶ ಹೊರಡಿಸುತ್ತದೆ. ಇದರ ಪರಿಣಾಮ ಕತ್ತಲ ಕೋಣೆಯಲ್ಲಿದ್ದ ಸಾವಿರಾರು ಮಕ್ಕಳು ಬಿಡುಗಡೆಯಾಗುತ್ತಾರೆ. ಟ್ರುಫ್ಪಾಂಟ್‌ಗೆ `ದಿ ವೈಲ್ಡ್ ಚಿಲ್ಡ್ರನ್', `ಶೂಟ್ ದಿ ಫಿಯಾನೊ ಪ್ಲೇಯರ್' ಚಿತ್ರಗಳು ಕೂಡ  ಹೆಸರು ತಂದುಕೊಟ್ಟಿವೆ.

ಹೆನ್ರಿ ವಿ

1989ರಲ್ಲಿ ತೆರೆ ಕಂಡ ಹೆನ್ರಿ ವಿ ಅತ್ಯುತ್ತಮ ರೊಮ್ಯಾಂಟಿಕ್ ಚಿತ್ರವೆಂದು ಅಕಾಡೆಮಿ ಪ್ರಶಸ್ತಿ ಪಡೆದು ಕೊಂಡಿತು.

ನಿರ್ದೇಶಕ ಕೆನ್ನೆತ್ ಬ್ರಾಗ್ ಕಾದಂಬರಿಗಳ ಕಥಾವಸ್ತು ಸಿನಿಮಾದಲ್ಲಿ ಯಶಸ್ವಿಯಾಗಿ ನಿರೂಪಿಸುವಲ್ಲಿ ಸಿದ್ಧ ಹಸ್ತರು. ಒಲಿವರ್, ವೇಲ್ಸ್‌ಮತ್ತು ಶೇಕ್ಸ್‌ಪಿಯರ್ ಕಾದಂಬರಿಗಳನ್ನು ಸಿನಿಮಾ ಮಾಡಿದ ಹೆಗ್ಗಳಿಕೆ ಇವರದು.ಬಹುತೇಕ ಹಾಲಿವುಡ್ ಸಿನಿಮಾಗಳು ಅದ್ದೂರಿತನದಿಂದ ಕೂಡಿದ್ದರೆ, ಮತ್ತೆ ಕೆಲವು ಸಾಕ್ಷ್ಯಚಿತ್ರದ ಮಾದರಿಯಲ್ಲಿರುತ್ತವೆ. ಕಾದಂಬರಿ ಮೂಲದ ಬಹುತೇಕ ಸಿನಿಮಾಗಳು ಸಾಕ್ಷ್ಯಚಿತ್ರದ ಮಾದರಿಯಲ್ಲಿರುವುದು ವಿಶೇಷ.ಹ್ಯಾಮ್ಲೆಟ್ ಸೇರಿದಂತೆ ಹೆನ್ರಿ ವಿ ಚಿತ್ರವನ್ನು ಕೆನ್ನೆತ್ ಅದ್ದೂರಿಯಾಗಿಯೇ ನಿರ್ಮಿಸಿದ್ದಾರೆ. ಸ್ವತಃ ನಟರು ಆದ ಕೆನ್ನೆತ್, ಹೆನ್ರಿ ವಿ ಚಿತ್ರದಲ್ಲಿನ ನಟನೆಗಾಗಿ ಶ್ರೇಷ್ಠ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ.ಹ್ಯಾಮ್ಲೆಟ್ ಚಿತ್ರವನ್ನು ಕೂಡ ಕೆನ್ನೆತ್ ಅಚ್ಚುಕಟ್ಟಾಗಿ ನಿರ್ಮಿಸಿದ್ದಾರೆ. ಬಹುದೊಡ್ಡ ಸೆಟ್‌ಗಳು, ಭಾರೀ ಸಂಖ್ಯೆಯ ಕಲಾವಿದರು, ಯುದ್ಧದ ಸನ್ನಿವೇಶಗಳಲ್ಲಿ ಪ್ರಾಣಿಗಳನ್ನು ಬಳಸಿರುವ ರೀತಿ,  ಗ್ರಾಫಿಕ್‌ನ ಸ್ಪರ್ಶದೊಂದಿಗೆ ಹ್ಯಾಮ್ಲೆಟ್ ಚಿತ್ರ  ಅದ್ದೂರಿತನದಿಂದ ಕೂಡಿಬಂದಿದೆ. ಕೆನೆತ್ ಅವರು ಹೆನ್ರಿ ವಿ ಸಿನಿಮಾವನ್ನು ನಿರ್ದೇಶಿಸಿದಾಗ ಅವರಿಗೆ 29 ವಯಸ್ಸು.ಡೆಡ್ ಹೆಗೈನ್ ಮತ್ತು ಪ್ರಾಂಕಿಸ್ಟೈನ್ ಚಿತ್ರಗಳು ಸಹ ಕೆನೆತ್‌ಗೆ ಹೆಸರು ತಂದುಕೊಟ್ಟಿವೆ.ಜಾಸ್

1975ರಲ್ಲಿ ಬಿಡುಗಡೆ ಯಾದ ಬಿಗ್ ಚಿತ್ರ  ಜಾಸ್.  ವಿಶ್ವದೆಲ್ಲೆಡೆ ಒಂದೇ ವಾರದಲ್ಲಿ ಹತ್ತು ಕೋಟಿ ಟಿಕೆಟ್‌ಗಳು ಮಾರಾಟವಾಗುವ ಮೂಲಕ ಈ ಚಿತ್ರ ದಾಖಲೆಯನ್ನು ನಿರ್ಮಿಸಿತ್ತು.ಸ್ಟೀಫನ್ ಸ್ಪೀಲ್‌ಬರ್ಗ್ ನಿರ್ದೇಶನದ ಈ ಚಿತ್ರ ಬಾಕ್ಸ್ ಆಫೀಸ್ ಹಿಟ್ ಚಿತ್ರವಾಗಿತ್ತು.  ಫೀಟರ್ ಬೆಂಚಿಲ್ ಅವರ ಕಾದಂಬರಿಯನ್ನು ಆಧಾರವಾಗಿಟ್ಟುಕೊಂಡು ಸ್ಟೀಫನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.ನೌಕಾಯಾನಕ್ಕೆ ತೆರಳುವ ನಾಯಕನ ಹಡಗು ಸಾಗರದ ಮಧ್ಯದಲ್ಲಿ ಕೆಟ್ಟುಹೋಗುತ್ತದೆ. ಅಲೆಗಳ ಹೊಡೆತದಿಂದಾಗಿ ಬಂಡೆಯೊಂದಕ್ಕೆ ಅಪ್ಪಳಿಸಿ ನಿಂತಿರುತ್ತದೆ. ಇದ್ದಕ್ಕಿದ್ದಂತೆ  ಪ್ರತ್ಯಕ್ಷವಾಗುವ ದೈತ್ಯ ಶಾರ್ಕ್  ಹಡಗಿನಲ್ಲಿದ್ದವರನ್ನು ತಿಂದು ಹಾಕುತ್ತದೆ. ಈ ಶಾರ್ಕ್‌ನಿಂದ ನಾಯಕ ತಪ್ಪಿಸಿಕೊಂಡು ಅಂತಿಮವಾಗಿ ಅದನ್ನು ಕೊಲ್ಲುವುದೇ ಚಿತ್ರದ ಕಥೆ.ಗ್ರಾಫಿಕ್ಸ್ ಬಳಸದೇ ಚಿತ್ರವನ್ನು ನೈಜವಾಗಿ ಚಿತ್ರೀಕರಿಸಿರುವುದು ಸ್ಟೀಪನ್ ಬುದ್ದಿವಂತಿಕೆ. ಚಿತ್ರದಲ್ಲಿ  ಭಾರೀ ಗಾತ್ರದ ಹಡಗುಗಳನ್ನು ಬಳಸಲಾಗಿದೆ. ಹಾಗೆಯೇ ಶಾರ್ಕ್‌ನನ್ನು ಬಲೂನಿನಿಂದ ಮಾಡಿ ಚಿತ್ರೀಕರಿಸಿರುವುದು ವಿಶೇಷ.

ಬ್ರೆತ್ಲೆಸ್

ಜೀನ್ ಲ್ಯೂಕ್ ಗೊಡಾರ್ಡ್ ಬ್ರೆತ್ಲೆಸ್ ಚಿತ್ರ ನಿರ್ದೇಶಿದ್ದು ತಮ್ಮ 30ನೇ ವಯಸ್ಸಿನಲ್ಲಿ.ಗೊಡಾರ್ಡ್ ಹೇಳುವ ಪ್ರಕಾರ, ಒಂದು ಸಿನಿಮಾ ಮಾಡಬೇಕೆಂದರೆ, ಹುಡುಗಿ ಮತ್ತು ಗನ್ ಅತ್ಯವಶ್ಯಕ. ಕತೆಗೆ ಮೆರುಗು ಬರುವುದೇ ಇವೆರಡರಿಂದ. ಫ್ರೆಂಚ್‌ನಲ್ಲಿ ಬದಲಾವಣೆಯ ಹೊಸ ಅಲೆಯನ್ನು ಸೃಷ್ಟಿಸಿದ ಪ್ರಧಾನ ಚಿತ್ರಗಳಲ್ಲಿ ಇದೂ ಒಂದು. ಆಧುನಿಕ ಚಿತ್ರಗಳ ಯುಗ ಆರಂಭವಾಗಿದ್ದು ಬ್ರೆತ್ಲೆಸ್‌ನಿಂದ. ಈಗಿನ ಹಲವು ಸಿನಿಮಾಗಳಲ್ಲಿನ ಹಲವು ಪಾತ್ರಗಳು ಈ ಚಿತ್ರದಲ್ಲಿನ ಪಾತ್ರಗಳ ಮೂಲದಿಂದಲೇ ಹುಟ್ಟಿಕೊಂಡಿವೆ ಎನ್ನಬಹುದು.ಗೊಡಾರ್ಡ್ ಅವರ ಚಿತ್ರ ನಿರ್ಮಾಣದ ಕ್ರಿಯಾಶೀಲತೆಯೇ ಚಿತ್ರವನ್ನು ಎಲ್ಲಕ್ಕಿಂತ ಭಿನ್ನವಾಗಿ ಕೊಂಡೊಯ್ಯುತ್ತವೆ.  ಈ ಬ್ರೆತ್ಲೆಸ್‌ನ ಚಿತ್ರಕಥೆಯನ್ನು ಗೊಡಾರ್ಡ್ ಸ್ನೇಹಿತ ಫ್ರಾಂಕಾಯ್ಸ ಟ್ರಫಂಟ್ ಜೊತೆ ಸೇರಿ ಬರೆದಿದ್ದಾರೆ.ಬ್ರೆತ್ಲೆಸ್‌ಗೆ 1960ರ ಉನ್ನತ ಪ್ರೆಂಚ್ ಸಿನಿಮಾ ಅಕಾಡೆಮಿ ಪ್ರಶಸ್ತಿ, ಹಾಗೇ ಗೊಡಾರ್ಡ್‌ಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ. `ಬ್ಯಾಂಡ್ ಆಫ್ ಔಟ್‌ಸೈಡರ್', `ಕಾಂಟೆಪ್ಟ್'  ಚಿತ್ರಗಳು ಗೊಡಾರ್ಡ್‌ನ ಯಶಸ್ವಿ ಚಿತ್ರಗಳು.ಪ್ರತಿಕ್ರಿಯಿಸಿ (+)