ಸೋಮವಾರ, ಆಗಸ್ಟ್ 26, 2019
27 °C

`ಯಶಸ್ಸಿಗೆ ಪ್ರಾಮಾಣಿಕ ಪ್ರಯತ್ನ ಅಗತ್ಯ'

Published:
Updated:

ಬಸವನಬಾಗೇವಾಡಿ: ಯುವ ಜನಾಂಗವು ಜೀವನದಲ್ಲಿ ಸಾಧನೆಯ ಮಾಡುವ ಉದ್ದೇಶ ಇಟ್ಟುಕೊಂಡು ಪ್ರಾಮಾಣಿಕ ಪ್ರಯತ್ನ ಮಾಡಿದರೆ ಯಶಸ್ಸು ಸಿಗುವುದು. ಶ್ರೇಷ್ಠ ವ್ಯಕ್ತಿಗಳ ಆದರ್ಶಗಳಿಂದ ಜೀವನದಲ್ಲಿ ಪ್ರಾಮಾಣಿಕತೆ, ಸತ್ಯ- ನಿಷ್ಠೆಯಂತಹ ಗುಣಗಳನ್ನು ಅಳವಡಿಸಿಕೊಳ್ಳಬಹುದು ಎಂದು ತ್ಯಾಗೀಶ್ವರಾನಂದ ಸ್ವಾಮೀಜಿ ಹೇಳಿದರು.ಸ್ವಾಮಿ ವಿವೇಕಾನಂದರ 150ನೇ ಜಯಂತಿ ವರ್ಷಾಚರಣೆ ಪ್ರಯುಕ್ತ ಶುಕ್ರವಾರ ಪಟ್ಟಣಕ್ಕೆ ಆಗಮಿಸದ್ದ ವಿವೇಕ ರಥದ ಮೆರವಣಿಗೆ ನಂತರ ಬಸವೇಶ್ವರ ಸಂತೆಕಟ್ಟೆ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.ನಿರ್ಭಯಾನಂದ ಸ್ವಾಮೀಜಿ ಮಾತನಾಡಿ ಸ್ವಾಮಿ ವಿವೇಕಾನಂದರ ಜೀವನ ಆದರ್ಶಗಳಿಂದ ಯುವ ಜನಾಂಗವು ವ್ಯಕ್ತಿತ್ವ ನಿರ್ಮಾಣ ಮಾಡಿಕೊಳ್ಳಬಹುದು. ಯುವಕರು ವಿವೇಕಾನಂದರ ಜೀವನ ಚರಿತ್ರೆ ಸೇರಿದಂತೆ ಅವರ ಸಂದೇಶಗಳನ್ನು ಅಧ್ಯಯನ ಮಾಡಬೇಕು ಎಂದು  ಹೇಳಿದರು.ಸಮಾರಂಭದಲ್ಲಿ ಅರ್ಚನಾನಂದ ಸ್ವಾಮೀಜಿ, ಸಿದ್ಧಲಿಂಗದೇವರು, ಸಂಗಮೇಶ ಬಬಲೇಶ್ವರ, ಈರಣ್ಣ ಪಟ್ಟಣಶೆಟ್ಟಿ ಶಿವಾನಂದ ಕಲ್ಲೂರ, ಸಂಗಮೇಶ ಓಲೇಕಾರ, ಸಿದ್ದಣ್ಣ ಪಟ್ಟಣಶೆಟ್ಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.ತಹಶೀಲ್ದಾರ್ ಅಪರ್ಣಾ ಪಾವಟೆ ಸ್ವಾಗತಿಸಿದರು. ಬಿಇಒ ಎನ್.ಎಚ್.ನಾಗೂರ ನಿರೂಪಿಸಿದರು. ಶಂಕರಗೌಡ ಬಿರಾದಾರ ವಂದಿಸಿದರು.ವಿವೇಕ ರಥದ ಮೆರವಣಿಗೆ: ತಾಲ್ಲೂಕಿನ ಮನಗೂಳಿಯಿಂದ ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜು ಮುಂಭಾಗಕ್ಕೆ ಆಗಮಿಸಿದ್ದ ವಿವೇಕ ರಥವನ್ನು ಸ್ಥಳೀಯ ಶಾಲಾ- ಕಾಲೇಜು ಹಾಗೂ ರಾಷ್ಟ್ರೀಯ ಬಸವ ಸೈನ್ಯ ಸಂಘಟನೆ ಸೇರಿದಂತೆ  ವಿವಿಧ ಸಂಘಟನೆಯ ಮುಖಂಡರು ಸ್ವಾಗತಿಸಿದರು.ನಂತರ ವಿಜಾಪುರ ಮುಖ್ಯ ರಸ್ತೆಯ ಮೂಲಕ ಸಾಗಿದ ಮೆರವಣಿಗೆಯು ಸ್ಥಳೀಯ ಬಸವೇಶ್ವರ ಸಂತಕಟ್ಟೆ ಆವರಣಕ್ಕೆ ಆಗಮಿಸಿತು.ಮರವಣಿಗೆಯಲ್ಲಿ ಶಿವನಗೌಡ ಬಿರಾದಾರ, ಶಿವಾನಂದ ಕಲ್ಲೂರ, ಜಗದೀಶ ಕೊಟ್ರಶೆಟ್ಟಿ, ಶಂಕರಗೌಡ ಬಿರಾದಾರ, ಪ್ರವೀಣ ಪವಾರ, ಮುತ್ತು ಉಕ್ಕಲಿ, ಮುತ್ತು ಡಂಬಳ, ಶ್ರೀಕಾಂತ ಪಟ್ಟಣಶೆಟ್ಟಿ, ಮಹೇಶ ಹಿರೇಕುರಬರ, ಸುನೀಲ ಜಮಖಂಡಿ, ಶಿವಪ್ರಸಾದ ಅಕ್ಕಿ, ಅಶೋಕ ಹಾರಿವಾಳ, ಸತೀಶ ಕ್ವಾಟಿ,  ಮನ್ನಾನ ಸಾಬಾದಿ, ಮಂಜುನಾಥ ಮುದುರ ಸೇರಿದಂತೆ ಸ್ಥಳೀಯ ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು.

Post Comments (+)