ಯಶಸ್ಸು ಗಳಿಸಲು ಪ್ರಯತ್ನ ಅವಶ್ಯಕ

ಶುಕ್ರವಾರ, ಮೇ 24, 2019
30 °C

ಯಶಸ್ಸು ಗಳಿಸಲು ಪ್ರಯತ್ನ ಅವಶ್ಯಕ

Published:
Updated:

ನರಸಿಂಹರಾಜಪುರ: ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಗಳಿಸಲು ಸತತ ಪ್ರಯತ್ನ ಹಾಗೂ ಸಾಮರ್ಥ್ಯವನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಜೆ.ಆಂಥೋನಿ ತಿಳಿಸಿದರು.

ಇಲ್ಲಿನ ಕೃಷಿ ಭವನದಲ್ಲಿ ಬುಧವಾರ ನಡೆದ ಜ್ವಾಲಾಮಾಲಿನಿ ಜೇಸಿಐ 22ನೇ ಜೇಸಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.



 ಜೇಸಿ ವ್ಯಕ್ತಿತ್ವ ಹಾಗೂ ನಾಯಕತ್ವ ಬೆಳೆಸಿಕೊಳ್ಳುವ ಸಂಸ್ಥೆಯಾಗಿದೆ. ಯಾವುದೇ ಸಂಘ ಸಂಸ್ಥೆಗಳು ಸ್ವಾರ್ಥರಹಿತವಾಗಿ ಬದ್ಧತೆಯಿಂದ ಕಾರ್ಯನಿರ್ವಹಿಸಿದಾಗ ಉತ್ತಮ ಗೌರವ ಸಿಗುತ್ತದೆ ಎಂದರು.

ಜೇಸಿಐ ವಲಯ 14ರ ತರಬೇತಿ ವಿಭಾಗದ ನವೀನ್ ಮಿಸ್ಕತ್ ಮಾತನಾಡಿ, ಇಲ್ಲಿನ ಜೇಸಿಐ ಉತ್ತಮ ಸೇವೆ ಸಲ್ಲಿಸುತ್ತಿದೆ ಎಂದು ಶ್ಲಾಘಿಸಿದರು.



ಜೇಸಿಐ ಅಧ್ಯಕ್ಷ ಬಿನು ವರ್ಗೀಸ್ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜೇಸಿಐ ನಿಕಟಪೂರ್ವ ಅಧ್ಯಕ್ಷ ಅಭಿನವ ಗಿರಿರಾಜ್, ಸಪ್ತಾಹದ ಪ್ರಧಾನ ನಿರ್ದೇಶಕ ವರ್ಕಾಟೆ ಸುಧಾಕರ, ಕಾರ್ಯದರ್ಶಿ ಎಂ.ಎನ್.ಪ್ರಕಾಶ್, ಜೇಸಿರೆಟ್ ವಿಂಗ್ ಅಧ್ಯಕ್ಷೆ ಜೋಮಿಯ ಬಿನು ಇದ್ದರು.ಐದಳ್ಳಿ ಕರ್ಕೂಟ ಗ್ರಾಮದ ರೈತ ಕೃಷ್ಣೇಗೌಡ, ಮತ್ತಿಮರ ದಿವ್ಯ ಕಾರುಣ್ಯ ಆಶ್ರಮದ ಲಿಸ್ಸಿ ಆನಂದಸ್ವಾಮಿ ಅವರನ್ನು ಸನ್ಮಾನಿಸಲಾಯಿತು.



ಜೇಸಿ ಸಪ್ತಾಹದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.        

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry