ಯಶ್‌ ಸ್ಮರಣೆಯಲ್ಲಿ...

7

ಯಶ್‌ ಸ್ಮರಣೆಯಲ್ಲಿ...

Published:
Updated:

ಶ್ ಚೋಪ್ರಾ ಇಲ್ಲದಿದ್ದ ಮಾತ್ರಕ್ಕೆ ಅವರ ಹುಟ್ಟುಹಬ್ಬ ಆಚರಿಸಬಾರದೇ ಎಂಬ ಪ್ರಶ್ನೆ ಪಮೇಲಾ ಚೋಪ್ರಾ ಅವರದ್ದು. ಸೆ.27ರಂದು ಯಶ್‌ ನೆನಪಿನಲ್ಲಿ ಅವರ ಅಂಗಳದಲ್ಲಿ ಅರಳಿದ ಶ್ರೀದೇವಿ, ಮಾಧುರಿ ದೀಕ್ಷಿತ್‌, ಜೂಹಿ ಚಾವ್ಲಾ, ಪ್ರೀತಿ ಜಿಂಟಾ, ಕತ್ರಿನಾ ಕೈಫ್‌ ಮುಂತಾದವರೆಲ್ಲ ರ್‍ಯಾಂಪ್‌ ಮೇಲೆ ಹೆಜ್ಜೆ ಹಾಕುತ್ತಿದ್ದಾರೆ. ಶಾರುಖ್‌ ಖಾನ್‌ ಇವರೊಂದಿಗಿರಲಿದ್ದಾರೆ.ಭಾರತೀಯ ಸಿನಿಮಾದಲ್ಲಿ, ಭಾರತೀಯ ವಸ್ತ್ರವೈಭವವನ್ನು ಹೊಸತನದಿಂದ ತೋರಿಸಿದ್ದು ಯಶ್‌. ಅವರಿಷ್ಟದಂತೆ ವಸ್ತ್ರವಿನ್ಯಾಸಕಿಯರೊಂದಿಗೆ ‘ದಿವಾ’ನಿ’ ಎಂಬ ಬ್ರ್ಯಾಂಡ್‌ ಒಂದನ್ನು ಪರಿಚಯಿಸಲಾಗಿದೆ. ಸೀರೆ ಹಾಗೂ ಭಾರತೀಯ ಉಡುಗೆಗಳನ್ನು ರ್‍ಯಾಂಪ್‌ ಮೇಲೆ ಪ್ರದರ್ಶಿಸಲಿದ್ದಾರೆ.‘ಯಶ್‌ ಹೆಣ್ಣುಮಕ್ಕಳನ್ನು ಗೌರವಿಸುತ್ತಿದ್ದರು. ಆರಾಧಿಸುತ್ತಿದ್ದರು. ಅವರ ದೃಷ್ಟಿಯಲ್ಲಿ ಹೆಣ್ಣುಮಕ್ಕಳೆಂದರೆ ದೇವತೆಗಳಾಗಿದ್ದರು. ಯಶ್‌ ಚಿತ್ರಗಳಲ್ಲಿ ಹೆಣ್ಣುಮಕ್ಕಳ ಉಡುಗೆಗಳನ್ನು ಅವರೇ ವಿನ್ಯಾಸ ಮಾಡುತ್ತಿದ್ದರು. ಪ್ರೀತಿ, ಗೌರವ ಆಕರ್ಷಣೆ, ವಾತ್ಸಲ್ಯ, ತಾಳ್ಮೆ ಎಲ್ಲವೂ ಅಡಕವಾಗಿರುವ ಗೌರವಯುತ ಹೆಣ್ಣುಮಕ್ಕಳ ಪಾತ್ರಗಳನ್ನೇ ಅವರು ಸೃಷ್ಟಿಸಿದರು. ಅವರ ಈ ಉತ್ಕೃಷ್ಟ ಮನೋಭಾವವನ್ನು ಸೂಚಿಸುವ ಅವರ ವಿನ್ಯಾಸದ ವಸ್ತ್ರಗಳ ಸಂಗ್ರಹವನ್ನೇ ದಿವಾ’ನಿ ಎಂಬ ಹೆಸರಿನಲ್ಲಿ ಪರಿಚಯಿಸಲಾಗಿದೆ.

ಈ ಸಂಗ್ರಹವನ್ನು ಮಾರುಕಟ್ಟೆಗೆ ಪರಿಚಯಿಸಲು ಯಶ್‌ ಅವರ ಹುಟ್ಟುಹಬ್ಬಕ್ಕಿಂತ ಸೂಕ್ತವಾದ ದಿನ ಇನ್ನೊಂದು ಇರಲಿಕ್ಕಿಲ್ಲ ಎಂದೆನಿಸಿತು. ಬನ್ನಿ ಈ ದಿನ ನಿಮ್ಮ ಉಪಸ್ಥಿತಿ ಇರಲಿ’ ಎಂಬರ್ಥದ ಒಕ್ಕಣೆಯ ಆಹ್ವಾನ ಪತ್ರಿಕೆಯನ್ನು ಪಮೇಲಾ ತಮ್ಮ ಆಪ್ತೇಷ್ಟರಿಗೆ ನೀಡಿದ್ದಾರೆ.ಬಾಲಿವುಡ್‌ ಶೈಲಿಯ ಈ ವಸ್ತ್ರವೈಭವವನ್ನು ಅವರಿಷ್ಟದ ನಾಯಕಿಯರೇ ಪ್ರಸ್ತುತ ಪಡಿಸಲಿದ್ದಾರೆ. ಶಾರುಖ್‌ ಖಾನ್‌ ಸಹ ಅವರೊಂದಿಗೆ ಹೆಜ್ಜೆ ಹಾಕಲಿರುವುದು ಸಂತೋಷ ತಂದಿದೆ ಎಂದಿದ್ದಾರೆ. ‘ಪ್ರತಿ ವರ್ಷಕ್ಕಿಂತ ಈ ಸಲ ಅದ್ದೂರಿಯಾಗಿ ಆಚರಿಸಲಾಗುವುದು. ಪ್ರತಿ ವರ್ಷವೂ ಯಶ್‌ ಇದೇಕೆ, ಇದು ಬೇಡ, ಸರಳವಾಗಿರಲಿ ಎಂದೆಲ್ಲ ಹೇಳುತ್ತಿದ್ದರು.

ಈಗವರ ಕೊರತೆ ಕಾಣದಂತೆ ಆಚರಿಸಲಾಗುತ್ತಿದೆ’ ಎಂದಿರುವ ಪಮೇಲಾ ಕಾರ್ಯಕ್ರಮದ ಆಮಂತ್ರಣವನ್ನು ತಾವೇ ಬರೆದಿದ್ದಾರೆ. ಯಶ್‌ ಚೋಪ್ರಾ ಇಲ್ಲದ ವರ್ಷ ಕಳೆದದ್ದು ಹೇಗೆ ಎಂಬ ಪ್ರಶ್ನೆಗೆ, ಅವರು ಲೋಕಕ್ಕೆ ಮಾತ್ರ ಇಲ್ಲ ಎಂದು ಕಣ್ಣೀರಾಗುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry