ಯಶ್ ನಿವೃತ್ತಿ?

7

ಯಶ್ ನಿವೃತ್ತಿ?

Published:
Updated:

ಜನಪ್ರಿಯ ನಿರ್ದೇಶಕ ಮತ್ತು ನಿರ್ಮಾಪಕ ಯಶ್ ಚೋಪ್ರಾ ನಿರ್ದೇಶನದಿಂದ ಹಿಂದೆ ಸರಿಯುವ ಮಾತನ್ನಾಡಿದ್ದಾರೆ. ಈಚೆಗೆ 80ರ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಅವರು, `ಸಿನಿಮಾ ನನಗೆ ತೃಪ್ತಿ, ಸಂತೋಷ ಎರಡನ್ನೂ ನೀಡಿದೆ. ಪ್ರೇಕ್ಷಕರಿಂದ ಸಾಕಷ್ಟು ಪ್ರೀತಿ ಪಡೆದಿರುವೆ. ಇದೀಗ ಹಿಂದೆ ಸರಿಯುವ ಕಾಲ ಬಂದಿದೆ.ಇನ್ನು ಮುಂದೆ ನನ್ನ ಪತ್ನಿಯ ದೂರುಗಳನ್ನು ನಿವಾರಿಸುತ್ತಾ ಅವಳ ಆಸೆಗಳನ್ನು ಈಡೇರಿಸುವೆ. ಹೊಸ ತಂತ್ರಜ್ಞರಿಗೆ, ನಿರ್ದೇಶಕರಿಗೆ, ನಟರಿಗೆ ನನ್ನಿಂದಾದ ಸಹಾಯ ಮಾಡುವೆ~ ಎಂದಿದ್ದಾರೆ.ಶಾರುಖ್ ಖಾನ್, ಕತ್ರೀನಾ ಕೈಫ್, ಅನುಷ್ಕಾ ಶರ್ಮಾ ನಟಿಸುತ್ತಿರುವ `ಜಬ್ ತಕ್ ಹೇ ಜಾನ್~ ಅವರ ನಿರ್ದೇಶನದ ಕೊನೆಯ ಸಿನಿಮಾ ಎಂಬುದು ಅವರ ಮಾತಿನಲ್ಲಿ ವ್ಯಕ್ತವಾಗಿದೆ. `ಸಿಲ್‌ಸಿಲಾ~, `ದೀವಾರ್~, `ಕಭಿ ಕಭೀ~, `ಜೋಶಿಲಾ~, `ಡರ್~, `ಚಾಂದನಿ~, `ದಿಲ್ ತೊ ಪಾಗಲ್ ಹೇ~, `ವೀರ್ ಝಾರಾ~ ಹೀಗೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ಕೊಟ್ಟ ಯಶ್, ವಯೋಸಹಜ ಮಾತುಗಳನ್ನು ಆಡುತ್ತಿದ್ದಾರೆ ಎನ್ನುತ್ತಿದೆ ಬಾಲಿವುಡ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry