ಯಶ್-ಹರಿಪ್ರಿಯಾಗೆ ರೋಟರಿ ಗರಿ

7

ಯಶ್-ಹರಿಪ್ರಿಯಾಗೆ ರೋಟರಿ ಗರಿ

Published:
Updated:
ಯಶ್-ಹರಿಪ್ರಿಯಾಗೆ ರೋಟರಿ ಗರಿ

ಸಿನಿಮಾ ಮಂದಿಯನ್ನು ಉತ್ತೇಜಿಸುವ ಕಾರಣಕ್ಕೆ ರೋಟರಿ ಸಂಸ್ಥೆ ಪ್ರತಿವರ್ಷ ಪ್ರಶಸ್ತಿಗಳನ್ನು ನೀಡುತ್ತದೆ. 2011ನೇ ಸಾಲಿನ ರೋಟರಿ ಪ್ರಶಸ್ತಿಯನ್ನು ಯಶ್ ಮತ್ತು ಹರಿಪ್ರಿಯಾಗೆ ನೀಡಲಾಗಿದೆ. ಇತ್ತೀಚೆಗೆ ಬಿಡದಿ ಬಳಿಯ ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಡೆದ ಸಮಾರಂಭದಲ್ಲಿ ಈ ಯುವ ಜೋಡಿಯನ್ನು ಗೌರವಿಸಲಾಯಿತು. ಪ್ರಶಸ್ತಿಗಳನ್ನು ಹಿರಿಯ ನಟಿ ಜಯಂತಿ ನೀಡಿದರು.ಕನ್ನಡ ಚಿತ್ರರಂಗದತ್ತ ರೋಟರಿ ಸಂಸ್ಥೆ ಮುಖ ತಿರುಗಿಸಲು ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪನವರ ಶಿಫಾರಸು ಇದೆ. ಅವರು ‘ಸೈನೈಡ್’ ಚಿತ್ರ ನಿರ್ಮಿಸಿದ್ದರು.2008ರಲ್ಲಿ ರಮೇಶ್ ಅರವಿಂದ್ ಮತ್ತು ಸುಧಾರಾಣಿ, 2009ರಲ್ಲಿ ಅಜಯ್ ರಾವ್ ಮತ್ತು ಪೂಜಾ ಗಾಂಧಿ ಹಾಗೂ 2010ರಲ್ಲಿ ಶ್ರಿನಗರ ಕಿಟ್ಟಿ ಮತ್ತು ರಮ್ಯಾ ಅವರು ರೋಟರಿ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry