ಮಂಗಳವಾರ, ನವೆಂಬರ್ 12, 2019
26 °C

ಯಾಕೂಬ್ ಈಗ ಎಂ.ಎ.ಪದವೀಧರ

Published:
Updated:

ನಾಗಪುರ (ಪಿಟಿಐ): 1993ರ ಮುಂಬೈ ಬಾಂಬ್ ಸ್ಫೋಟ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಒಳಪಟ್ಟಿರುವ ಯಾಕೂಬ್ ಮೆಮನ್ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಿಂದ (ಇಗ್ನೊ)ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾನೆ.ಇಗ್ನೊ ಪ್ರಾದೇಶಿಕ ಕೇಂದ್ರದ ಘಟಿಕೋತ್ಸವದಲ್ಲಿ ಏಳು ಮಂದಿ ಕೈದಿಗಳಿಗೆ ಪದವಿ ಪ್ರಮಾಣ ಮಾಡಲಾಯಿತು. ಜೈಲು ಅಧಿಕಾರಿಗಳು ಅವಕಾಶ ಕಲ್ಪಿಸಿಕೊಟ್ಟರೆ ನಾವು ಜೈಲಿಗೆ ತೆರಳಿ ಮೆಮನ್‌ಗೆ ಪದವಿ ಪ್ರಮಾಣ ಪತ್ರ ನೀಡುವುದಾಗಿ ಇಗ್ನೊದ ಪ್ರಾದೇಶಿಕ ನಿರ್ದೇಶಕ ಡಾ.ಶಿವಸ್ವರೂಪ್ ಸಂಸ್ಥೆಗೆ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)