ಯಾತನಾಮಯ ಪಯಣ

7

ಯಾತನಾಮಯ ಪಯಣ

Published:
Updated:

ನಾನು, ನನ್ನ ಮಡದಿ ಹಾಗೂ ಮಗನೊಂದಿಗೆ ಡಿ.19ರಂದು ದಾವಣಗೆರೆಯಿಂದ ಬೆಂಗಳೂರಿಗೆ ಸಂಜೆ 4-07ರ ಜನ ಶತಾಬ್ಧಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿದೆವು. (ಸೀಟು ಸಂಖ್ಯೆ ಡಿ 6 - 37, 38, 41) ನಮ್ಮ ಪ್ರಯಾಣ ಯಾತನಾಮಯವಾಗಿತ್ತು.ಏಕೆಂದರೆ ಸೀಟುಗಳು ಅತ್ಯಂತ ದುಃಸ್ಥಿತಿಗೆ ಈಡಾಗಿದ್ದವು. ಸ್ಥಿರವಾಗಿ ಕೂರಲೇ ಆಗದೆ ಜಾರುವಂತಾಗುತ್ತಿತ್ತು. ಕೈಯನ್ನು ಇಡುವ ಆಧಾರವು ಕೆಳಕ್ಕೆ ಕುಸಿದು ಬೀಳುತ್ತಿತ್ತು. ಕಿಟಕಿಯ ಗಾಜನ್ನು ಸರಿಸಲು ಸುಲಭದಲ್ಲಿ ಆಗುತ್ತಿರಲಿಲ್ಲ. ಸೀಟುಗಳ ವ್ಯವಸ್ಥೆ ಅತ್ಯಂತ ಕಿಷ್ಕಿಂಧವಾಗಿದ್ದು ಸ್ಥೂಲಕಾಯರಿಗಂತೂ ಭಲೇ ಅವಸ್ಥೆಯಾಗುವಂತಿದೆ. ರೈಲ್ವೆ ಇಲಾಖೆಯು ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುತ್ತದೆಯೆಂದು ನಂಬಬಹುದೇ?

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry