ಶುಕ್ರವಾರ, ಮೇ 14, 2021
23 °C

ಯಾತ್ರಾರ್ಥಿಗಳಿಗೆ ಹರಭಜನ್ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡೆಹ್ರಾಡೂನ್ (ಪಿಟಿಐ): ಭಾರಿ ಮಳೆ ಮತ್ತು ಪ್ರವಾಹದಿಂದ ಇಲ್ಲಿ ಇಕ್ಕಟ್ಟಿಗೆ ಸಿಲುಕಿರುವ ಕ್ರಿಕೆಟಿಗ ಹರಭಜನ್ ಸಿಂಗ್ ಮಂಗಳವಾರ ಐಟಿಬಿಪಿ ಸಿಬ್ಬಂದಿಯೊಂದಿಗೆ ಸೇರಿ ರಕ್ಷಣಾ ಕಾರ್ಯದಲ್ಲಿ ತೊಡಗಿ ಸಂಕಷ್ಟದಲ್ಲಿದ್ದ ಅನೇಕ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರಿಗೆ ನೆರವಾದರು.ಪ್ರತಿಕೂಲ ಹವಾಮಾನದ ಪರಿಣಾಮ ಹೇಮಕುಂಡದ ಸಾಹಿಬ್ ಗುರುದ್ವಾರವನ್ನು ತಲುಪಲಾಗದೆ ಕಳೆದ ಮೂರು ದಿನಗಳಿಂದ ಹರಭಜನ್ ಅವರು ಜೋಷಿಮಠದ ಇಂಡೊ ಟಿಬೆಟನ್ ಗಡಿ ಪೊಲೀಸರ (ಐಟಿಬಿಪಿ) ಶಿಬಿರದಲ್ಲಿ ನೆಲೆಸಿದ್ದಾರೆ.  ಪ್ರವಾಸಿಗರು- ಯಾತ್ರಾರ್ಥಿಗಳಿಗೆ ಆಹಾರ, ನೀರು ಹಾಗೂ ಔಷಧಗಳನ್ನು ಪೂರೈಕೆ ಮಾಡುವುದರ ಜೊತೆಗೆ ಸಲಹೆಗಾರನಾಗಿಯೂ ಅವರು ಕಾಣಿಸಿಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.