ಯಾತ್ರಿಗಳಿಗೆ ಮೊಬೈಲ್

7

ಯಾತ್ರಿಗಳಿಗೆ ಮೊಬೈಲ್

Published:
Updated:

ನವದೆಹಲಿ (ಪಿಟಿಐ):  ವಾರ್ಷಿಕವಾಗಿ ನಡೆಯುವ ಅಮರನಾಥ ಯಾತ್ರೆಯಲ್ಲಿ ಈ ವರ್ಷ ಭಾಗವಹಿಸುವವರಿಗೆ ಸರ್ಕಾರ ಮೊಬೈಲ್ ಸಂಪರ್ಕ ಒದಗಿಸಲಿದೆ.ಏಳು ದಿನಗಳ ವಾಯಿದೆ  ಹೊಂದಿರುವ `ಯಾತ್ರಾ ಕಾರ್ಡ್~ ಹೆಸರಿನ ಪ್ರಿಪೇಡ್ ಸಿಮ್‌ನ್ನು ಈ ವರ್ಷ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳು ಪಡೆಯಬಹುದು.ಇಂತಹ ಸೌಲಭ್ಯ ಯಾತ್ರಿಕರಿಗೆ ಕಲ್ಪಿಸಲು ಕೇಂದ್ರ ಗೃಹ ಸಚಿವಾಲಯ ತಾತ್ವಿಕ ಒಪ್ಪಿಗೆ ನೀಡಿದೆ. ಮೊಬೈಲ್ ಫೋನ್‌ಗಳು ಕಾರ್ಯನಿರ್ವಹಿಸಲು ಆರಂಭಿಸಿದ ಬಳಿಕ ಅಮರನಾಥ ಯಾತ್ರಿಗಳಿಗೆ ಈ ಸೌಲಭ್ಯ ಒದಗಿಸುತ್ತಿರುವುದು ಇದೇ ಮೊದಲ ಬಾರಿ.

 

ಮೊಬೈಲ್ ಸಂಪರ್ಕ ಇಲ್ಲದೇ ಯಾತ್ರಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಈ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry