ಗುರುವಾರ , ಏಪ್ರಿಲ್ 22, 2021
29 °C

ಯಾತ್ರೆ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡೆಹ್ರಾಡೂನ್ (ಪಿಟಿಐ): ಚಳಿ, ವಿಪರೀತ ಹಿಮ ಬೀಳುತ್ತಿರುವ ಹಿನ್ನೆಲೆಯಲ್ಲಿ ಕೇದಾರನಾಥ ಮತ್ತು ಯಮುನೋತ್ರಿ ಸೇರಿ ಹಿಮಾಲಯ ವಲಯದಲ್ಲಿರುವ ಪ್ರಸಿದ್ಧ ಯಾತ್ರಾ ಸ್ಥಳಗಳನ್ನು ಮುಚ್ಚಲಾಗುತ್ತಿದೆ.ಅರ್ಚಕರು ಕೇದಾರನಾಥದ ಜ್ಯೋತಿರ್ಲಿಂಗಕ್ಕೆ ಪ್ರಾರ್ಥನೆ ಸ್ಲ್ಲಲಿಸಿ ವೇದಘೋಷ ಮೊಳಗಿಸಿದ ಬಳಿಕ ಗುರುವಾರ ಬೆಳಿಗ್ಗೆ 8.30ರಲ್ಲಿ ಯಾತ್ರಾ ಕೇಂದ್ರವನ್ನು ಬಂದ್ ಮಾಡಲಾಯಿತು. ಆಗ ಧಾರ್ಮಿಕ ಮುಖಂಡರು, ಆಡಳಿತಾಧಿಕಾರಿಗಳು ಹಾಜರಿದ್ದರು. ಚಳಿಗಾಲದಲ್ಲಿ ಈ ವಲಯದಲ್ಲಿ ಹಿಮಪಾತವಾಗುವುದರಿಂದ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗುತ್ತದೆ. ಚಳಿಗಾಲದಲ್ಲಿ ಜ್ಯೋತಿರ್ಲಿಂಗವನ್ನು ಓಕಿಮಠ ಸಮೀಪದ ಪಾಲನ್‌ಕ್ವಿನಿಗೆ ಕೊಂಡೊಯ್ದು ಪೂಜಿಸಲಾಗುತ್ತದೆ.ಯಮುನಾ ನದಿ ಉಗಮದ  ಯಮುನೋತ್ರಿ ಪವಿತ್ರ ಕ್ಷೇತ್ರವನ್ನು ಮಧ್ಯಾಹ್ನ ಮುಚ್ಚಲಾಯಿತು. ಬುಧವಾರವೇ ಗಂಗೋತ್ರಿಯ ದ್ವಾರ ಮುಚ್ಚಲಾಗಿದೆ. ಬದರೀನಾಥಕ್ಕೆ ಭಕ್ತರು ಕೈಗೊಳ್ಳುವ ಚಾರ್‌ಧಾಮ ಯಾತ್ರೆಯು ಇದೇ 18ರಂದು ಕೊನೆಗೊಳ್ಳಲಿದ್ದು, ಆಗ ಬದರೀನಾಥ ಪ್ರವೇಶ ಸಹ ಬಂದ್ ಆಗಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.