ಯಾದಗಿರಿಯಲ್ಲಿ ವೀರಗಲ್ಲು ಪತ್ತೆ

7

ಯಾದಗಿರಿಯಲ್ಲಿ ವೀರಗಲ್ಲು ಪತ್ತೆ

Published:
Updated:

ಯಾದಗಿರಿ: ನಗರದ ವಿವಿಧೆಡೆ ಒಟ್ಟು 6 ವೀರಗಲ್ಲುಗಳು ಹಾಗೂ ಲೋಹದ ಶಾಸನವನ್ನು ಇಲ್ಲಿಯ ಗ್ರಂಥಾಲಯ ಸಹಾಯಕ ಪಾಟೀಲ ಬಸನಗೌಡ ಪತ್ತೆ ಮಾಡಿದ್ದಾರೆ. ಗಿರಿ ದುರ್ಗ ಮೇಲೆ ಒಂದು ಲೋಹ ಶಾಸನ, ವೀರಗಲ್ಲು ಹಾಗೂ ಪುರಾತನ ಆಂಜನೇಯ ದೇವಸ್ಥಾನದ ಬಳಿ 5 ವೀರಗಲ್ಲುಗಳು ಪತ್ತೆಯಾಗಿವೆ. ಇಲ್ಲಿಯ ಗಿರಿ ದುರ್ಗದ ದೇವಿ ಗುಡಿಯ ಮುಂಭಾಗದಲ್ಲಿರುವ ತೋಪಿನ ಬುರುಜಿನ ಮೇಲೆ ಉರ್ದು ಅಥವಾ ಪರ್ಷಿಯನ್ ಭಾಷೆಯ ಲಿಪಿಯಲ್ಲಿ ರುವ ಶಾಸನ ಪತ್ತೆಯಾಗಿದೆ. ಈ ಶಾಸನವು ಬಹಮನಿ ಅಥವಾ ಆದಿಲ್ ಷಾಹಿಗಳ ಕಾಲದ್ದೆಂದು ಊಹಿಸಲಾ ಗಿದೆ. ಹೆಚ್ಚಿನ ಅಧ್ಯಯನಕ್ಕಾಗಿ ಹಿರಿಯ ಸಂಶೋಧಕರು ಹಾಗೂ ಲಿಪಿ ತಜ್ಞರಲ್ಲಿ ಮಾಹಿತಿ ಕೇಳಲಾಗಿದೆ.ದೇವಿ ಗುಡಿಯ ಮುಂಭಾಗದ ಮತ್ತೊಂದು ತೋಪಿನ ಬುರುಜಿಗೆ ಹೊಂದಿಕೊಂಡಂತೆ ರಾಮ, ಲಕ್ಷ್ಮಣ, ಆಂಜನೇಯರ ಉಬ್ಬು ಶಿಲ್ಪ ಪತ್ತೆಯಾಗಿದೆ. ಈ ಶಿಲ್ಪದ ಬಳಿ ಇರುವ ಪ್ರವೇಶ ದ್ವಾರದ ಮೇಲೆ ಪುರಾತನ ಶಿಲ್ಪಗಳಿರುವ ಕಂಬವೊಂದು ಸಿಕ್ಕಿದೆ. ಕೋಟೆಯ ಏಳು ಪ್ರವೇಶ ದ್ವಾರಗಳ ನಂತರ ಬರುವ ನೀರಿನ ದೋಣಿಯ ಪಕ್ಕದಲ್ಲಿ ಒಂದು ವೀರಗಲ್ಲು ಪತ್ತೆಯಾಗಿದ್ದು, ಇಬ್ಬರು ಯೋಧರ ಖಡ್ಗ ಹಾಗೂ ಚಾಕುವಿನಿಂದ ಹೋರಾಡುವ ಚಿತ್ರವಿದೆ.ಅದರಂತೆ ನಗರಸಭೆ ಹತ್ತಿರವಿರುವ ಪುರಾತನ ಆಂಜನೇಯ ದೇವಸ್ಥಾನದ ಆವರಣದಲ್ಲಿ ಇಡಲಾಗಿರುವ ಶಿಲ್ಪಗಳಲ್ಲಿ ಐದು ವೀರಗಲ್ಲು, ಒಂದು ಆಂಜನೇಯನ ಶಿಲ್ಪಗಳು ಪತ್ತೆಯಾಗಿವೆ.

ಕತ್ತಿ, ಗುರಾಣಿ ಹಿಡಿದಿರುವ ಎರಡು ವೀರಗಲ್ಲು, ಭರ್ಚಿ ಹಿಡಿದಿರುವ ಎರಡು ವೀರಗಲ್ಲು, ಬಂದೂಕು ಹಿಡಿದಿರುವ ಒಂದು ವೀರಗಲ್ಲು ಪತ್ತೆ ಮಾಡಲಾ ಗಿದೆ. ಮತ್ತೊಂದು ಶಿಲ್ಪದ ಮೇಲ್ಭಾಗ ಸಂಪೂರ್ಣ ಹಾಳಾಗಿದ್ದು, ಕೇವಲ ಕಾಲು ಮಾತ್ರ ಕಾಣುತ್ತಿವೆಈ ವೀರಗಲ್ಲು, ಲೋಹದ ಶಾಸನಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುವುದು ಅತ್ಯಗತ್ಯವಾಗಿದ್ದು, ಇದರಿಂದ ನಗರದ ಐತಿಹಾಸಿಕ ಹಿನ್ನೆಲೆಯ ಮೇಲೆ ಮತ್ತಷ್ಟು ಬೆಳಕು ಬೀಳುವ ಸಾಧ್ಯತೆ ಇದೆ ಎಂದು ಪಾಟೀಲ ಬಸನಗೌಡ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry