ಗುರುವಾರ , ಏಪ್ರಿಲ್ 22, 2021
25 °C

ಯಾದಗಿರಿ ಕಡೆಗಣನೆ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಕನ್ನಡದ ವಿಷಯದಲ್ಲಿ ಜಿಲ್ಲೆಯ ಬಗ್ಗೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದ್ದು, ಸರ್ಕಾರದ ಈ ನೀತಿಯನ್ನು ಖಂಡಿಸಿ ಕರವೇ (ಶೆಟ್ಟಿ ಬಣ) ವತಿಯಿಂದ ನಗರದ ಬಸ್‌ನಿಲ್ದಾಣದ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.ಗಡಿ ಜಿಲ್ಲೆಯಾದ ಯಾದಗಿರಿ ತಾಲ್ಲೂಕಿನಲ್ಲಿರುವ ಸೈದಾಪುರದ ರೈಲು ನಿಲ್ದಾಣದ ಹೆಸರು ನಾರಾಯಣಪೇಟ್ ರೋಡ್ ಎಂದು ಕರೆಯಲಾಗುತ್ತಿದ್ದು, ಕೂಡಲೇ ಅದನ್ನು ಕನ್ನಡಮಯ ಮಾಡಬೇಕು. ಹೆಸರು ಬದಲಿಸಬೇಕು. ಈ ಬಗ್ಗೆ ಹೋರಾಟ ಮಾಡಿದರೂ, ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ದೂರಿದರು.ಯಾದಗಿರಿ ಜಿಲ್ಲೆಯಾಗಿ ಮೂರು ವರ್ಷ ಕಳೆದವಿದೆ. ಕಳೆದ ಮೂರು ವರ್ಷಗಳಿಂದ ರಾಜ್ಯೋತ್ಸವ ಪ್ರಶಸ್ತಿ ನೀಡುವುದರಲ್ಲಿ ಯಾದಗಿರಿ ಜಿಲ್ಲೆಯನ್ನು ಸರ್ಕಾರ ಕಡೆಗಣಿಸುತ್ತಿದೆ. ಜಿಲ್ಲೆಯಲ್ಲಿ ಅನೇಕ ಸಾಹಿತಿಗಳು, ಕಲಾವಿದರು, ಸಂಗೀತಗಾರರು, ನಾಡಿಗೆ ದುಡಿದ ಮಹನೀಯರಿದ್ದಾರೆ. ಜಿಲ್ಲೆಯ ಒಬ್ಬರಿಗೂ ರಾಜ್ಯೋತ್ಸವ ಪ್ರಶಸ್ತಿ ನೀಡದಿರುವುದು ಖಂಡನೀಯ. ರಾಜ್ಯದ 30 ನೇ ಜಿಲ್ಲೆಯನ್ನಾಗಿ ಮಾಡಿದ್ದಾದರೂ ಏಕೆ? ಇಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಏಕೆ ಎಂದು ಪ್ರಶ್ನಿಸಿದರು.ಬಾಗಲಕೋಟೆಗೆ ಪ್ರಶಸ್ತಿ ನೀಡಿದರೆ ಸಾಲದು. ಕೂಡಲೇ ಈ ತಾರತಮ್ಯ ಸರಿಪಡಿಸಬೇಕು ಎಂದು ಒತ್ತಾಯಿಸಿದರು.  ಕರವೇ ಉತ್ತರ ಕರ್ನಾಟಕ ಘಟಕದ ಅಧ್ಯಕ್ಷ ಶರಣು ಗದ್ದುಗೆ, ದೇವು ಪಾಟೀಲ, ಸಿದ್ಧುರಡ್ಡಿ ತಂಗಡಗಿ, ರವಿ ದೇವರಮನಿ, ಭೀಮು ಬಿದರಾಣಿ, ಕುಮಾರ, ರವಿ, ವಿಜಯ, ರಾಘವೇಂದ್ರ, ಚಂದ್ರು, ಮರಿಲಿಂಗ, ಚಂದ್ರಶೇಖರ, ಹಣಮಂತ, ಸಾಬಣ್ಣ, ಮಲ್ಲಪ್ಪ, ಭೀಮು, ಶಿವಶಂಕರ, ವಿಶ್ವಕರ್ಮ, ಸಾಬಣ್ಣ, ಬಾಪೂಗೌಡ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.