ಯಾದಗಿರಿ: ನಾಲೆಗೆ ಕಾರು ಉರುಳಿ ಐವರ ಸಾವು

7

ಯಾದಗಿರಿ: ನಾಲೆಗೆ ಕಾರು ಉರುಳಿ ಐವರ ಸಾವು

Published:
Updated:

ಯಾದಗಿರಿ: ಸಮೀಪದ ಶಹಾಪುರದ ಮಡಬೋಳದ ಬಳಿಯ ಜೇವರ್ಗಿ ಮುಖ್ಯ ಕಾಲುವೆಗೆ ಶುಕ್ರವಾರ ಬೆಳಿಗ್ಗೆ ಕಾರೊಂದು ಉರುಳಿ ಚಾಲಕ ಸೇರಿದಂತೆ ಐದು ಜನರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.

ಮೃತಪಟ್ಟವರನ್ನು ರಾಮರಾವ್ (35), ಪ್ರಕಾಶ್ ರಾವ್ (35), ಲಲಿತಾ (34), ಜ್ಯೋತಿ (18) ಹಾಗೂ ಚಾಲಕನನ್ನು ವಿಠಲ್ ರಾವ್ ಎಂದು ಗುರುತಿಸಲಾಗಿದ್ದು, ಇವರು ಆಂಧ್ರಪ್ರದೇಶದ ಮೇಡಕ್ ಜಿಲ್ಲೆಗೆ ಸೇರಿದವರು ಎನ್ನಲಾಗಿದೆ.ಇವರು ಗುಲ್ಬರ್ಗದಲ್ಲಿ ಕೆಲಸ ಮುಗಿಸಿಕೊಂಡು ತಮ್ಮ ಮೇಡಕ್ ಜಿಲ್ಲೆಗೆ ಮರಳುವಾಗ ಈ ದುರ್ಘಟನೆ ಜರುಗಿದೆ ಎಂದು ಮೂಲಗಳ ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry