ಸೋಮವಾರ, ಏಪ್ರಿಲ್ 19, 2021
24 °C

ಯಾದಗಿರಿ ವಾರ್ತಾ ಇಲಾಖೆ ಅವ್ಯವಸ್ಥೆಯ ಆಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಈ ಕಚೇರಿಯಲ್ಲಿ ಮಂಜೂರಾಗಿರುವ ಹುದ್ದೆಗಳು 10. ಕೆಲಸ ಮಾಡುತ್ತಿರುವವರು ಮಾತ್ರ ಮೂರು ಜನ ಸಿಬ್ಬಂದಿ. ಪ್ರಮುಖವಾಗಿ ಇರಬೇಕಾದ ಕಚೇರಿಯ ಮುಖ್ಯಸ್ಥರೇ ಇಲ್ಲ. ಸರ್ಕಾರದ ನೀತಿ ನಿಯಮಗಳನ್ನು ಪ್ರಚಾರ ಪಡಿಸಬೇಕಾದ ವಾರ್ತಾ ಇಲಾಖೆಯ ಈ ಕಚೇರಿಗೆ ದಿನಪತ್ರಿಕೆಗಳನ್ನು ಖರೀದಿಸುವ ಶಕ್ತಿಯೂ ಇಲ್ಲ!ಇದು ಯಾದಗಿರಿ ಜಿಲ್ಲೆಯ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯ ದುಃಸ್ಥಿತಿ. ಹೇಳುವುದಕ್ಕೆ ಮಾತ್ರ ಒಂದು ಕಟ್ಟಡ, ದೊಡ್ಡ ನಾಮಫಲಕವಿದೆ. ಕಚೇರಿಗೆ ಒಂದು ವಾಹನವೂ ಇದೆ. ಇದಾವುದು ಪ್ರಯೋಜನಕ್ಕೆ ಬಾರದಂತಾಗಿದೆ. ಕೇವಲ ಕುಳಿತುಕೊಳ್ಳುವುದಕ್ಕೆ ಒಂದು ಕಟ್ಟಡ ಸಿಕ್ಕಂತಾಗಿದೆ. ಸರ್ಕಾರಿ ಸುದ್ದಿಗಳಿಗೂ ಪತ್ರಕರ್ತರು ಪರದಾಡುವಂತಾಗಿದೆ. ಜಿಲ್ಲೆಯಾದ ನಂತರ ಯಾದಗಿರಿಯಲ್ಲಿ ವಾರ್ತಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಆರಂಭಿಸಲಾಯಿತು. ಬಹುಕಾಲ ಗುಲ್ಬರ್ಗದ ಸಹಾಯಕ ನಿರ್ದೇಶಕರ ಪ್ರಭಾರದ ಮೇಲೆಯೇ ಕಚೇರಿ ನಡೆಯುವಂತಾಯಿತು. ಇದರಿಂದ ರೋಸಿ ಹೋದ ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳು, ವಾರ್ತಾ ಇಲಾಖೆಯ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಿದರು. ಇದರಿಂದ ಎಚ್ಚೆತ್ತ ವಾರ್ತಾ ಇಲಾಖೆ, ಸಹಾಯಕ ನಿರ್ದೇಶಕರನ್ನು ಇಲ್ಲಿಗೆ ವರ್ಗಾವಣೆ ಮಾಡಿತು.ಮದ್ಯ ಸೇವನೆ, ಅಗೌರವದ ನಡತೆಯಿಂದಾಗಿ ಇಲ್ಲಿಗೆ ಬಂದಿದ್ದ ವಾರ್ತಾ ಇಲಾಖೆ ಸಹಾಯಕ ನಿರ್ದೇಶಕರೊಬ್ಬರು ಅಮಾನತುಗೊಂಡರು. ಅಲ್ಲಿಂದ ಇಲ್ಲಿಯವರೆಗೂ ಸಹಾಯಕ ನಿರ್ದೇಶಕರ ಹುದ್ದೆ ಖಾಲಿಯಾಗಿ ಉಳಿದಿದೆ. ಇದೀಗ ಬೀದರನ ಸಹಾಯಕ ನಿರ್ದೇಶಕ ಶಫಿ ಎಂಬುವವರಿಗೆ ಬೀದರ್, ಗುಲ್ಬರ್ಗ, ಯಾದಗಿರಿ ಜಿಲ್ಲೆಗಳ ಹೊಣೆ ನೀಡಲಾಗಿದೆ. ಸದ್ಯಕ್ಕೆ ಯಾದಗಿರಿಯ ಕಚೇರಿಯಲ್ಲಿ ಒಬ್ಬ ಬೆರಳಚ್ಚುಗಾರ, ಒಬ್ಬ ಚಾಲಕ ಸೇರಿದಂತೆ ಕೇವಲ 3 ಜನರು ಕಾರ್ಯ ನಿರ್ವಹಿಸುತ್ತಿದ್ದಾರೆ. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.