ಶುಕ್ರವಾರ, ಏಪ್ರಿಲ್ 23, 2021
31 °C

ಯಾದಗಿರಿ: ವಿವಿಧೆಡೆ ಸಂಭ್ರಮದ ಸ್ವಾತಂತ್ರ್ಯೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಜಿಲ್ಲೆಯಾದ್ಯಂತ 65 ನೇ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜು, ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳ ಕಚೇರಿಯಲ್ಲಿ ತ್ರಿವರ್ಣ ಧ್ವಜಾರೋಹಣ ಮಾಡಲಾಯಿತು.ಕಸಾಪ ಜಿಲ್ಲಾ ಘಟಕ: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದಿಂದ ಕಾರ್ಯಾಲಯದ ಆವರಣದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ಧಪ್ಪ ಹೊಟ್ಟಿ ಧ್ವಜಾರೋಹಣ ಮಾಡಿದರು.ಜಿಲ್ಲಾ ಘಟಕದ ಪದಾಧಿಕಾರಿಗಳಾದ ಡಾ. ಸುಭಾಷಚಂದ್ರ ಕೌಲಗಿ, ಪ್ರಕಾಶ ಅಂಗಡಿ, ಬಸವರಾಜ ಮೋಟ್ನಳ್ಳಿ, ಅಯ್ಯಣ್ಣ ಹುಂಡೇಕಾರ, ವಿ.ಸಿ. ರಡ್ಡಿ, ಬಸವಂತ್ರಾಯ ಮಾಲಿಪಾಟೀಲ, ಖಂಡಪ್ಪ ದಾಸನ, ಡಾ. ಶಿವಶರಣರಡ್ಡಿ ಕೂಡ್ಲಾ, ಅನಿಲ ಗುರೂಜಿ, ವಿಶ್ವನಾಥರಡ್ಡಿ ಗೊಂದಡಗಿ ಪ್ರಕಾಶ ಚಟ್ನಳ್ಳಿ, ನಾಗೇಂದ್ರ, ಸಲೀಂ ಐಕೂರ, ನಾಗರಾಜ ಬೀರನೂರ, ಭೀಮಾಶಂಕರ ಪಾಂಚಾಳ, ಸದಾಶಿವಪ್ಪ ಚಂಡ್ರಕಿ, ಗುಂಡೇರಾವ ಪಂಚಾಹತ್ರಿ, ನೀಲಕಂಠ ಶೀಲವಂತ, ಬಂದಪ್ಪ ಅರಳಿ, ಭೀಮೇಶ ಸಜ್ಜನ್, ಶರಣಪ್ಪ ಜಾಕಾ, ಮಲ್ಲಿಕಾರ್ಜುನ ಕಡೇಚೂರ, ಶರಣಗೌಡ ಮೂಸ್ಟೂರ, ದೇವರಾಜ ವರ್ಕನಳ್ಳಿ ಇತರರು ಭಾಗವಹಿಸಿದ್ದರು.ಪತ್ರಕರ್ತರ ಸಂಘ: ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ಸಂಘದ ಕಚೇರಿಯಲ್ಲಿ ಧ್ವಜಾರೋಹಣ ಮಾಡಲಾಯಿತು. ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವರಾ ಕುಲಕರ್ಣಿ ಧ್ವಜಾರೋಹಣ ಮಾಡಿದರು.ಎಸ್.ಎಸ್.ಮಠ, ಭೀಮಾಶಂಕರ ಕಾಕಲವಾರ, ಜಗದೀಶ ಬಿ.ಎಂ, ದಿನೇಶ ವಿ.ಸಿ. ನಾರಾಯಣ ಹೆಗಡೆ, ಮಹೇಶ ಕಲಾಲ, ರವೀಂದ್ರ ಕುಲಕರ್ಣಿ, ಕುಮಾರಸ್ವಾಮಿ ಕಲಾಲ, ಮಲ್ಲಪ್ಪ ಸಂಕೀನ, ರಾಜೇಶ ಪಾಟೀಲ, ಶಿವಮೂರ್ತಿ ಹಿರೇಮಠ, ಲಕ್ಷ್ಮಿಕಾಂತ ಕುಲಕರ್ಣಿ, ಅಶೋಕ ಕಲಾಲ, ಸೇರಿದಂತೆ ಹಲವಾರು ಜನರು ಪಾಲ್ಗೊಂಡಿದ್ದರು.ಗ್ರಂಥಾಲಯ: ನಗರದ ಶಾಖಾ ಗ್ರಂಥಾಲಯದಲ್ಲಿ ಗ್ರಂಥಾಲಯ ಸಹಾಯಕ ಪಾಟೀಲ್ ಬಸನಗೌಡ ಹುಣಸಗಿ ಧ್ವಜಾರೋಹಣ ಮಾಡಿದರು. ಶೇಖರ ವಂಟೂರ್, ಕಾಶಿಂ ರೊಟ್ನಡಿಗಿ, ಶಿವರಾಜ ರೊಟ್ನಡಗಿ, ವೆಂಕಟೇಶ ಗಡ್ಡೇಸೂಗೂರು, ಜಗದೇಶ ಮೇಲಗಿರಿ ಭಾಗವಹಿಸಿದ್ದರು.ಜೆಡಿಎಸ್: ಜೆಡಿಎಸ್ ಕಚೇರಿಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ನಾಗನಗೌಡ ಕಂದಕೂರ ಧ್ವಜಾರೋಹಣ ಮಾಡಿದರು. ವಿಶ್ವನಾಥ ಸಿರವಾರ, ಚನ್ನಪ್ಪಗೌಡ ಮೊಸಂಬಿ, ತಿಮ್ಮಣ್ಣ ಹೆಡಗಿಮದ್ರಿ, ನಾಗರತ್ನಾ ಅನಪೂರ, ಸಲೀಂ ಗೋಗಿ, ಮುಂತಾದವರು ಭಾಗವಹಿಸಿದ್ದರು.ಕಾಂಗ್ರೆಸ್ ಕಚೇರಿ: ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶಾಸಕ ಡಾ.ಎ.ಬಿ. ಮಾಲಕರಡ್ಡಿ ಧ್ವಜಾರೋಹಣ ಮಾಡಿದರು. ಮರಿಗೌಡ ಹುಲಕಲ್, ಸುರೇಶ ಜೈನ್, ಮರೆಪ್ಪ ಬಿಳ್ಹಾರ, ಶ್ರೀನಿವಾಸರಡ್ಡಿ ಕಂದಕೂರ, ರವಿ ಮಾಲಿಪಾಟೀಲ, ರಾಹುಲ ಅರಿಕೇರಿ ಮುಂತಾದವರು ಹಾಜರಿದ್ದರು.ಸೇವಾದಳ ಕಚೇರಿ: ಭಾರತ ಸೇವಾದಳದ ಜಿಲ್ಲಾ ಸಮಿತಿ ಹಾಗೂ ಆನಂದ ಪ್ರಭು ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನರಡ್ಡಿ ಕೌಳೂರ ಧ್ವಜಾರೋಹಣ ಮಾಡಿದರು. ರಘುನಾಥ ರಡ್ಡಿ ಪಾಟೀಲ, ನಾಗರತ್ನ ಅನಪೂರ, ಎಂ.ಎಚ್. ಜೋಶಿ, ಸೈಯ್ಯದ್ ಕಮ್ರುದ್ದಿನ್, ಸೈದಪ್ಪ ಗುತ್ತೇದಾರ, ಹುಸೇನ್‌ಸಾಬ ಚೌದ್ರಿ, ರಾಜು ಬಾದಾಮಿ ಹಾಗೂ ಸೇವಾ ದಳದ ಕಾರ್ಯಕರ್ತರು ಪಾಲ್ಗೊಂಡಿದ್ದರು.ನೆಹರು ಶಾಲೆ: ನಗರದ ನೆಹರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯದರ್ಶಿ ವಿಶ್ವನಾಥ ಚಿಂತನಳ್ಳಿ ಧ್ವಜಾರೋಹಣ ಮಾಡಿದರು.ಮುಖ್ಯೋಪಾಧ್ಯಾಯ ರಮೇಶ ಮುಷ್ಟೂರಕರ್ ಶಿಕ್ಷಕಿಯರಾದ ಕಮಲಾ, ಅಶ್ವಿನಿ, ಅರುಂಧತಿ, ನಾಗರತ್ನ, ಹಾಜರಿದ್ದರು. ತಿಪ್ಪಣ್ಣ ನಿರೂಪಿಸಿದರು, ಲಲಿತಾ ಸ್ವಾಗತಿಸಿದರು, ಭವಾನಿ ವಂದಿಸಿದರು.ಟೋಕರಿ ಕೋಲಿ ಸಮಾಜ: ಟೋಕರಿ ಕೋಲಿ ಸಮಾಜದ ಜಿಲ್ಲಾ ಘಟಕದ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಾರಿಗೆ ಸಂಸ್ಥೆಯ ಪದಕ ವಿಜೇತ ಸಿಬ್ಬಂದಿಗಳಾದ ಎಸ್.ಪಿ. ಕಟ್ಟಿಮನಿ, ರಾಮಣ್ಣ ಗುಂಡಳ್ಳಿಕರ್, ಗುಂಜಲಪ್ಪ ಬಂದಳ್ಳಿ, ಭೀಮರಾಯ, ಬಸವರಾಜ ಅವರನ್ನು ಸನ್ಮಾನಿಸಲಾಯಿತು.ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಉಮೇಶ ಮುದ್ನಾಳ ಸಿದ್ದಣ್ಣ ನಾಟೇಕರ್, ಭೀಮರಾಯ, ಶಂಕರ ಗಣಪೂರ, ಪ್ರಭು ಕೋಡಾಲ, ವೆಂಕಟೇಶ ಭೀಮನಳ್ಳಿ, ಹಣಮಂತ ಮಡ್ಡಿ, ತಾಯಪ್ಪ ನಾಯ್ಕಲ್, ಆನಂದ ಕಾಡಂಗೇರಿ, ಸಾಬರಡ್ಡಿ ನಾಯ್ಕಲ್, ಶಿವಪ್ಪಗೌಡ, ಅಮಾತೆಪ್ಪ ಶಹಾಪೂರ ಹಾಗೂ ನಿಜಶರಣ ಅಂಬಿಗರ ಚೌಡಯ್ಯನ ವಿವಿಧೋದ್ದೇಶ ಸಂಘದ ಪದಾಧಿಕಾರಿಗಳು ಹಾಜರಿದ್ದರು.ಶಾರದಾ ಕಾಲೇಜು: ಕ್ರಾಂತಿ ಪುರುಷರ ಹೋರಾಟ, ಪರಿಶ್ರಮ, ತ್ಯಾಗದ ಪರಿಣಾಮವಾಗಿ ದೇಶಕ್ಕೆ ಸ್ವಾತಂತ್ರ್ಯ ದೊರಕಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಪ್ರಾಮಾಣಿಕ ಕೆಲಸ ಮಾಡಬೇಕಿದೆ. ಹಿರಿಯರು ಗಳಿಸಿಕೊಟ್ಟ ಸ್ವಾತಂತ್ರ್ಯ ಸ್ವೇಚ್ಛಾಚಾರ ಆಗಬಾರದು ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ನಾಗರತ್ನ ಕುಪ್ಪಿ ಹೇಳಿದರು.ನಗರದ ಶಾರದಾ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಆಂಜನಯ್ಯ, ಕಾಲೇಜಿನ ವಿದ್ಯಾರ್ಥಿಗಳು, ಸಿಬ್ಬಂದಿ ಹಾಜರಿದ್ದರು.ಸ್ಪಂದನ ಶಾಲೆ: ನಗರದ ಸ್ಪಂದನ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಲ್ಲಿಕಾರ್ಜುನ ಗೋಸಿ ಧ್ವಜಾರೋಹಣ ಮಾಡಿದರು. ಚಂದ್ರಶೇಖರ್ ಪುಟ್ಟಿ, ನಗರಸಭೆ ಸದಸ್ಯೆ ಸರಸ್ವತಿ ಗೋಸಿ, ಶಿಕ್ಷಕರಾದ ಚೈತ್ರಾ, ಅನ್ವರಿ, ಅಕ್ಬರಿ ಹಾಜರಿದ್ದರು.ಬಸವಂತಪೂರ: ತಾಲ್ಲೂಕಿನ ಬಸವಂತಪೂರದ ಸರ್ಕಾರಿ ಹಿರಿಯ ಪ್ರೌಢಶಾಲೆಯಲ್ಲಿ ಬಾಲಾಜಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದವರಿಗೆ ರೂ. ಒಂದು ಸಾವಿರ ಪ್ರೋತ್ಸಾಹಧನ ವಿತರಿಸಲಾಯಿತು. ಬಾಲಾಜಿ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ವಿಜಯ ರಾಠೋಡ, ಅರಿಕೇರಾ ಬಿ. ಗ್ರಾ.ಪಂ ಅಧ್ಯಕ್ಷೆ  ತಾರಿಬಾಯಿ ರಾಠೋಡ್, ಉಪಾಧ್ಯಕ್ಷ ಹಣಮಂತ ಎನ್, ಮುಖ್ಯಾಧ್ಯಾಪಕ ಅಬ್ದುಲ್ ರೆಹೆಮಾನ್, ಸದಸ್ಯರಾದ ಬಂಗಾರೆಪ್ಪ ಹೊಸಮನಿ, ಹಣಮಂತ ಖಾನಳ್ಳಿ, ವೀರಪ್ಪ ಖಾನಳ್ಳಿ, ಅರ್ಜುನ್ ಪವಾರ, ಸುರೇಶ ಚವ್ಹಾಣ, ದ್ಯಾವಪ್ಪ ತಳಗೇರಿ, ಶರಣಪ್ಪ ತೆಲಗರ, ಪಿಡಿಒ ಮಲ್ಲಣ್ಣ ಪಾಲ್ಗೊಂಡಿದ್ದರು.ದೈಹಿಕ ಶಿಕ್ಷಕ ತುಳಜಪ್ಪ ನಿರೂಪಿಸಿದರು. ಬಸವರಾಜ ಮೋಟ್ನಳ್ಳಿ ವಂದಿಸಿದರು.

ಗುರುಸಣಿಗಿ: ಗ್ರಾಮದ ಸ್ವಾಮಿ ವಿವೇಕಾನಂದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಾಧ್ಯಾಪಕ ಗಂಗಾಧರ, ಹುಲೆಪ್ಪ ಚಿಕ್ಮೇಟಿ, ವೀರಭದ್ರಪ್ಪಗೌಡ ಮಾಲಿಪಾಟೀಲ, ಸಂಸ್ಥೆಯ ಅಧ್ಯಕ್ಷ ಬಸಲಿಂಗಪ್ಪ ಮಳ್ಳಳ್ಳಿ, ಮರೆಪ್ಪ, ವೆಂಕಟರೆಡ್ಡಿ, ದೇವಪ್ಪ, ಪಿಡಿಒ ಪುತ್ರಪ್ಪಗೌಡ ಹಾಗೂ ನಿಂಗಪ್ಪ , ಗ್ರಾಮಸ್ಥರು ಭಾಗವಹಿಸಿದ್ದರು.ಕೆ.ಹೊಸಳ್ಳಿ: ತಾಲ್ಲೂಕಿನ ಕೆ.ಹೋಸಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಾಧ್ಯಾಪಕ ಪ್ರೇಮಕುಮಾರ ದೇಸಾಯಿ ಧ್ವಜಾರೋಹಣ ಮಾಡಿದರು.ಗ್ರಾಮ ಪಂಚಾಯಿತಿ ಸದಸ್ಯ ಬಿಂದುರೆಡ್ಡಿ ಶಾಲೆಗೆ 50 ತಟ್ಟೆಗಳನ್ನು ಕಾಣಿಕೆಯಾಗಿ ನೀಡಿದರು. ಎಸ್‌ಡಿಎಂಸಿ ಅಧ್ಯಕ್ಷ ಗುರುನಾಥರೆಡ್ಡಿ, ಸದಸ್ಯರಾದ ಹಣಮಂತ ನಾಟೇಕಾರ್, ಜಯವಂತ್, ಶರಣಪ್ಪ, ಶಿವಕುಮಾರ ಹಾಗೂ ಸಿಬ್ಬಂದಿಗಳಾದ ಕುಪೇಂದ್ರ, ಸುರೇಶಕುಮಾರ್, ಈರಪ್ಪ, ಸವಿತಾ, ಮಾಲಿನಿ, ಕವಿತಾ ಹಾಜರಿದ್ದರು.ಕಂಠಿ ತಾಂಡಾ: ಸಮೀಪದ ಕಂಠಿ ತಾಂಡಾದ ನಾಯಕ ಚೌಕದಲ್ಲಿ ಗ್ರಾ. ಪಂ. ಸದಸ್ಯ ಗೋಪಾಲ ನಾಯಕ ಧ್ವಜಾರೋಹಣ ಮಾಡಿದರು. ಎಂ.ಎನ್. ತಾಂಡಾದಲ್ಲಿ ಮತ್ತು ಡಿ.ಎನ್. ತಾಂಡಾದಲ್ಲಿ ಎಸ್‌ಡಿಎಂಸಿ ಅಧ್ಯಕ್ಷರಾದ ಬೂದೆಪ್ಪ, ಹರಿಲಾಲ್ ಧ್ವಜಾರೋಹಣ ಮಾಡಿದರು.ವಿಜಯ, ಮುಕ್ಕಣ್ಣ, ಬಿರಾದಾರ, ವಿದ್ಯಾರ್ಥಿಗಳು ಹಾಜರಿದ್ದರು. ಹಾಲಗೇರಾದ ಬಸ್ಸಯ್ಯ ತಾತಾ ವಸತಿ ಶಾಲೆಯಲ್ಲಿ ಸಂಸ್ಥೆ ಅಧ್ಯಕ್ಷ ಲಿಂಗಣ್ಣ ತಾತಾ ಧ್ವಜಾರೋಹಣ ಮಾಡಿದರು. ಆಡಳಿತ ಅಧಿಕಾರಿ ಶ್ರೀಶೈಲ ಪೂಜಾರಿ, ಶರಣು, ಯಲ್ಲಪ್ಪ, ಶಾಂತು, ರಮ್ಯ, ಬೀಬೀ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.