ಗುರುವಾರ , ಏಪ್ರಿಲ್ 15, 2021
24 °C

ಯಾದಗಿರಿ: ಸಾಮೂಹಿಕ ಪ್ರಾರ್ಥನೆ- ಶುಭಾಶಯ ವಿನಿಮಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಒಂದು ತಿಂಗಳವರೆಗೆ ಉಪವಾಸ ವ್ರತ ಆಚರಿಸಿದ ಮುಸ್ಲಿಂ ಬಾಂಧವರು ಸೋಮವಾರ ಪವಿತ್ರ ಈದ್-ಉಲ್-ಫಿತರ್ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ಜಿಲ್ಲೆಯಲ್ಲಿ ವಿವಿಧೆಡೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಾಂಧವರು, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.ನಂತರ ಮನೆಗಳಿಗೆ ಅತಿಥಿಗಳನ್ನು ಆಮಂತ್ರಿಸಿ, ಸಿಹಿ ಕೊಟ್ಟು, ಹಬ್ಬದ ಶುಭವನ್ನು ಕೋರಿದರು. ನೂರಾರು ಜನರು ಬೆಳಿಗ್ಗೆಯಿಂದ ಹೊಸ ಬಟ್ಟೆಯನ್ನುಟ್ಟು ಪ್ರಾರ್ಥನೆಗಾಗಿ ಈದ್ಗಾದತ್ತ ತೆರಳುತ್ತಿದ್ದರು. ಅಲಂಕರಿಸಿದ ವಾಹನಗಳಲ್ಲಿ ಕುಳಿತು ತೆರಳಿದ ಜನರು ಮಕ್ಕಳೊಂದಿಗೆ ಈದ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದರು.ನಗರದ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕ ಡಾ. ಎ.ಬಿ. ಮಾಲಕರಡ್ಡಿ, ಸರ್ವರಿಗೂ ಈದ್-ಉಲ್-ಫಿತರ್ ಹಬ್ಬದ ಶುಭ ಕೋರಿ, ಇದೊಂದು ಸಮ್ಮಿಲನದ ಸೌಹಾರ್ದಯುತ ಹಬ್ಬ ಎಂದು ಹೇಳಿದರು.ಈದ್ಗಾ ಮೈದಾನದಲ್ಲಿ ನಡೆದ ಪ್ರಾರ್ಥನೆಯಲ್ಲಿ ಖುರೇಶಿ ಸಮಾಜದ ಅಧ್ಯಕ್ಷ ಮೊಹ್ಮದ್ ಫಯಾಜ್, ಇಸ್ಮಾಯಿಲ್ ಹುಂಡೇಕಾರ, ಕಾಂಗ್ರೆಸ್ ಮುಖಂಡರಾದ ಶ್ರೀನಿವಾಸರೆಡ್ಡಿ ಕಂದಕೂರ, ಮರೇಪ್ಪ ಬಿಳ್ಹಾರ, ರವಿಮಾಲಿಪಾಟೀಲ, ಮಾಣಿಕರೆಡ್ಡಿ, ರಾಹುಲ್ ಅರೀಕೇರಿ, ಜಿಲಾನಿಸಾಬ ಅಪಘಾನಿ, ಸಲೀಮ ಗೋಗಿ, ಶಂಶು ಹುಜಮಾ, ಬಲಿಕ್‌ಹುಜಮಾ, ಸೈಯ್ಯದ್ ಹಯಾತ್ ಖಾದ್ರಿ, ಅಜೀಜ್ ಅಹ್ಮದ್ ಶಹನಾ, ಮೊಹ್ಮದ್ ಇಸಾಕ್, ಲಾಯಕ್ ಹುಸೇನ್ ಬಾದಲ್, ಕೆ. ಮೊಹ್ಮದ್ ಅಕ್ಬರ್, ರುಸ್ತುಮ್ ಅಲಿ ಮುಲ್ಲಾ, ಫಯಾಜ್ ಮುಲ್ಲಾ, ಮೊಹ್ಮದ್ ಫಯಾಜ್ ಮೊಹ್ಮದ್ ಇಬ್ರಾಹಿಂ, ಇನಾಯತ್ ಉರ್ ರೆಹಮಾನ್, ವಸಮದಾನ ಮುಸಾ, ಫಕೀರ್ ಜಾನಿ ಖೋತ್, ಡಾ. ರಜಾಕ್ ಸೌದಾಗರ, ಖಾಜಿ ಹಸನ್ ಸಿದ್ದಿಕಿ, ಅಮೀನ ಚಕೋಲಿ, ಅಸದ್ ಚಾವುಸ್, ಸಾಜೀದ ಹಯಾತ್, ನಗರಸಭೆ ಸದಸ್ಯರ ಅಬ್ದುಲ್ ಕರೀಂ ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು.ವಡಗೇರಾ: ಸಮೀಪದ ವಡಗೇರಾದ ಈದ್ಗಾದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ನಂತರ ಮುಸ್ಲಿಂ ಸಹೋದರರು ಒಬ್ಬರಿಗೊಬ್ಬರು ಆತ್ಮೀಯತೆಯಿಂದ ಅಲಿಂಗಿಸಿಕೊಂಡು ಹಬ್ಬದ ಶುಭಾಶಯ ಕೋರಿದರು. ಹಿಂದು ಸಮಾಜದ ಬಾಂಧವರೊಂದಿಗೆ ಶುಭಾಶಯ ವಿನಿಮಯ ಮಾಡಿಕೊಂಡರು.ನೇತೃತ್ವವನ್ನು ಜಾಮೀಯಾ ಮಜೀದ್ ಮೌಲಾನಾ, ಮೈನೋದ್ದೀನ್ ದೇವದುರ್ಗ, ಬಾಷುಮಿಯಾ ನಾಯ್ಕೋಡಿ, ಉಸ್ಮಾನ್ ಬಾಷಾ ತಡಬಿಡಿ, ಜಲಾಲಸಾಬ ಚಿಗಾನೂರ, ಚಾಂದಪಾಷಾ, ಬಾಷುಮಿಯಾ ಖತಾಲಿ, ದಾವೂದ್‌ಸಾಬ ಬಳಗಾನೂರ, ಬಾಷುಮಿಯಾ ಅರಕೇರಿ, ಇಮಾಮ್‌ಸಾಬ ನಾಯ್ಕೋಡಿ, ಫಕೀರಸಾಬ ಕಾರ್ಪೆಂಟರ್, ಚಂದಾಸಾಬ ಹುಲಿ, ಯೂಸೂಫ್‌ಸಾಬ ಬೇಕರಿ ಮುಂತಾದವರು ಭಾಗವಹಿಸಿದ್ದರು.

ಸಮೀಪದ ತುಮಕೂರಿನಲ್ಲಿ ಮುಸ್ಲಿಂ ಬಾಂಧವರು ಈದ್ಗಾದಲ್ಲಿ ನಮಾಜ ಮಾಡಿದ ನಂತರ ಈದು-ಉಲ್-ಫಿತರ್‌ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.ಮೌಲಾನಾ ಮೆಹಬೂಬಆಲಂ, ಕಾಸಿಂಸಾಬ ಬೆಂಡೆಬೆಂಬಳಿ, ಚಂದಾಸಾಬ ಗಣಪುರ, ಸತ್ತಾರ ಸಾಬ, ಮೆಹಬೂಬಸಾಬ ಖುರೇಸಿ, ನಜೀರಸಾಬ, ರಹಿಂಸಾಬ್, ಮುಂತಾದವರು ಪಾಲ್ಗೊಂಡಿದ್ದರು.ನಾಯ್ಕಲ್:  ಸಮೀಪದ ದೋರನಳ್ಳಿ, ತಡಿಬಿಡಿ, ಬೆಂಡೆಬೆಂಬಳಿ, ಹತ್ತಿಗೂಡುರ, ನಾಯ್ಕಲ್ ಸೇರಿದಂತೆ ನಾನಾ ಗ್ರಾಮಗಳಲ್ಲಿ ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ಸೋಮವಾರ ಸಡಗರ ಸಂಭ್ರಮದಿಂದ ಆಚರಿಸಿದರು.

ನಾಯ್ಕಲ್ ಗ್ರಾಮದ ಹೊರವಲಯದ ರಾಜ್ಯ ಹೆದ್ದಾರಿಯ ಬಳಿ ಇರುವ ಈದ್ಗಾ ಮೈದಾನದಲ್ಲಿ ಮುಸ್ಲಿಂ ಭಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಒಂದು ತಿಂಗಳಿನಿಂದ ರಂಜಾನ್ ಮಾಸದ ಅಂಗವಾಗಿ ಉಪವಾಸ ಕೈಗೊಂಡಿದ್ದರು. ಈದ್-ಉಲ್-ಫಿತರ್ ಹಬ್ಬ ನಿಮಿತ್ತ ಪರಸ್ಪರ ಶುಭಾಶಯ ಹಂಚಿಕೊಂಡರು. ಆಪ್ತರು, ಸ್ನೇಹಿತರನ್ನು ಮನೆಗೆ ಕರೆದು ಸಿಹಿ ಪದಾರ್ಥ ಸುರಸುಂಭ (ಧೂದ್ ಕೂರ) ಸೇವಿಸಿದರು.ಮುಸ್ಲಿಂ ಸಮಾಜದ ಪ್ರಮುಖರಾದ ಬಾಷುಮಿಯಾ ಫರ್ಟಿಲೈಸರ್, ಅಬ್ದುಲ್‌ನಬೀ, ಖಾಜಾ ಪಟವಾರಿ, ಅಸೀಫ್‌ಸಾಬ್, ಖಾಜಾ ಬೊಂಬಾಯಿ, ಇಸ್ತೇಕಾರ್, ಬಾಷಾ, ಮೈಹಿಬೂಬ ಹೊಸಳ್ಳಿ, ಮೈನೋದ್ದೀನ್ ಜೇಮಶೇರಿ, ಚಾಂದಪಾಷಾ ದುಬೈ, ಮಹ್ಮದ್  ಸೌದಾಗರ, ಜಲಾಲಸಾಬ್, ಖಾಜಾ ಪಟೇಲ್, ಮೌಲಾ, ಅಹ್ಮದ್ ಜಾಲಗಾರ್, ಮಹ್ಮದ್ ಬಾರಪೇಟ್, ಮೋನೋದ್ದೀನ್ ಕಿವೆಡೆಮಾರಿ ಸೇರಿದಂತೆ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನರು ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.