ಗುರುವಾರ , ನವೆಂಬರ್ 14, 2019
23 °C

`ಯಾರನ್ನೂ ಅವಲಂಬಿಸಿಲ್ಲ'

Published:
Updated:

ತುಮಕೂರು:  `ನಾನು ಯಾರನ್ನೂ ಅವಲಂಬಿಸಿಲ್ಲ. ಯಾರು ಬೇಕಾದರೂ ಪಕ್ಷಕ್ಕೆ ಬರಬಹುದು, ಯಾರೂ ಬೇಕಾದರೂ ಬಿಡಬಹುದು' ಎಂದು ಕೆಜೆಪಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.106ರ ವಸಂತಕ್ಕೆ ಕಾಲಿಟ್ಟ ಸಿದ್ದಗಂಗಾ ಮಠಾಧೀಶ ಡಾ.ಶಿವಕುಮಾರ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದುಕೊಂಡ ಬಳಿಕ ಪತ್ರಕರ್ತರ ಜತೆ ಮಾತನಾಡಿದ ಅವರು, ಸಚಿವರಾದ ಮುರುಗೇಶ ನಿರಾಣಿ, ಉಮೇಶ್ ಕತ್ತಿ ಕೆಜೆಪಿಗೆ ಸೇರದಿರುವ ಬಗ್ಗೆ ಪ್ರತಿಕ್ರಿಯಿಸಿ, `ನಾನು ಯಾರನ್ನೂ ಅವಲಂಬಿಸಿಲ್ಲ. ಯಾರೂ ಬಾರದಿದ್ದರೂ ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವೆ' ಎಂದರು.

ಪ್ರತಿಕ್ರಿಯಿಸಿ (+)