ಗುರುವಾರ , ಜೂಲೈ 2, 2020
28 °C

ಯಾರಿಗೂ ಕಮ್ಮಿಯಿಲ್ಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾರಿಗೂ ಕಮ್ಮಿಯಿಲ್ಲ!

ಬಿಇಎಲ್ ಸಂಸ್ಥೆ ನಡೆಸುತ್ತಿರುವ ಭಿನ್ನ ಸಾಮರ್ಥ್ಯದ ಮಕ್ಕಳ ವಿಶೇಷ ಶಾಲೆ ‘ಆಶಾಂಕುರ’ದ ವಾರ್ಷಿಕೋತ್ಸವ ‘ಉಡಾನ್-2011’ನಲ್ಲಿ ಈ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಮಿಡಿದವು.ಬಿಇಎಲ್ ನಿರ್ದೇಶಕ ಎಚ್.ಎಸ್.ಬಡೋರಿಯ ಉದ್ಘಾಟಿಸಿದರು. ಜನರಲ್ ಮ್ಯಾನೇಜರ್‌ಗಳಾದ ಫಿಲಿಪ್ ಜಾಕಬ್ ಮತ್ತು ಆಸಿ ನೌಟಿಯಾಲ್, ಮುಖ್ಯ ಶಿಕ್ಷಕಿ ದೇಚಮ್ಮ ಪ್ರಭು ಮತ್ತಿತರರು ಇದ್ದರು.ಯೋಗ ಶಿಕ್ಷಕ ನಂಜುಂಡ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸಾದರಪಡಿಸಿದ ದೀಪ ನೃತ್ಯ, ಬಾಲ್ಯದ ನೆನಪುಗಳ ಬಿತ್ತುವ ‘ಸವಿ ಸವಿ ನೆನಪು’, ಟ್ವಿಸ್ಟ್ ಅಂಡ್ ಟರ್ನ್, ಕೀಬೋರ್ಡ್ ವಾದನ, ಬಾಲಿವುಡ್ ನೃತ್ಯ, ಕೋಲಾಟ, ಪಂಜಾಬಿ ನೃತ್ಯಭೇಷ್ ಎನಿಸಿದವು.ಇತ್ತ ಸುಬ್ರಹ್ಮಣ್ಯಪುರದ ಅರೇಹಳ್ಳಿಯ ಮಾಡರ್ನ್ ಇಂಗ್ಲಿಷ್ ಶಾಲೆಯಲ್ಲಿ ನಡೆದ ಫನ್‌ಫೇರ್‌ಗೂ ಭಾರಿ ಪ್ರತಿಕ್ರಿಯೆ. ಮಕ್ಕಳ ಹಾಡು, ಕುಣಿತದ ಜತೆ ದೊಡ್ಡವರಿಗೂ ವಿವಿಧ ಸ್ಪರ್ಧೆಗಳಿದ್ದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.